ಮಂಗಳೂರು ಗಲಭೆಗೆ ಯು.ಟಿ.ಖಾದರ್ ಕುಮ್ಮಕ್ಕಿದೆ -ಡಿವಿಎಸ್
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಶಾಂತಿಯುತವಾಗಿತ್ತು. ತಪ್ಪು ಸಂದೇಶದಿಂದ ಆಸ್ಸಾಂನಲ್ಲಿ ಗಲಭೆ ಆರಂಭವಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಗಲಭೆಗೆ ಮಾಜಿ ಸಚಿವ ಯು.ಟಿ.ಖಾದರ್ ಕುಮ್ಮಕ್ಕು ಕಾರಣ. ತಮ್ಮ ಅಸ್ತಿತ್ವಕ್ಕಾಗಿ ಇದನ್ನು ಮಾಡಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆರೋಪಿಸಿದ್ದಾರೆ. ಸಣ್ಣಪುಟ್ಟ ಗಲಭೆ ಆದ ತಕ್ಷಣ ಕೇರಳದ ಕೆಲವರು ಮಂಗಳೂರಿಗೆ ಬರುತ್ತಾರೆ. ಇಂತಹ ವಿದ್ರೋಹಿಗಳ ಸಂಪರ್ಕ ಕಾಂಗ್ರೆಸ್ ಪಕ್ಷದವರಿಗಿದೆ. ಬೇರೆ ಕಡೆಯಿಂದ ಜನ ಮಂಗಳೂರಿಗೆ ಬಂದಿದ್ದರಿಂದ ಇಂತಹ ದೊಡ್ಡ ಗಲಭೆಯಾಗಿದೆ. ಕಾಂಗ್ರೆಸ್ ನಿಯೋಗ ಮಂಗಳೂರಿಗೆ ಹೋಗಲು ಇದು ಸಕಾಲವಲ್ಲ […]

D.V.ಸದಾನಂದ ಗೌಡ
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಶಾಂತಿಯುತವಾಗಿತ್ತು. ತಪ್ಪು ಸಂದೇಶದಿಂದ ಆಸ್ಸಾಂನಲ್ಲಿ ಗಲಭೆ ಆರಂಭವಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಗಲಭೆಗೆ ಮಾಜಿ ಸಚಿವ ಯು.ಟಿ.ಖಾದರ್ ಕುಮ್ಮಕ್ಕು ಕಾರಣ. ತಮ್ಮ ಅಸ್ತಿತ್ವಕ್ಕಾಗಿ ಇದನ್ನು ಮಾಡಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆರೋಪಿಸಿದ್ದಾರೆ.
ಸಣ್ಣಪುಟ್ಟ ಗಲಭೆ ಆದ ತಕ್ಷಣ ಕೇರಳದ ಕೆಲವರು ಮಂಗಳೂರಿಗೆ ಬರುತ್ತಾರೆ. ಇಂತಹ ವಿದ್ರೋಹಿಗಳ ಸಂಪರ್ಕ ಕಾಂಗ್ರೆಸ್ ಪಕ್ಷದವರಿಗಿದೆ. ಬೇರೆ ಕಡೆಯಿಂದ ಜನ ಮಂಗಳೂರಿಗೆ ಬಂದಿದ್ದರಿಂದ ಇಂತಹ ದೊಡ್ಡ ಗಲಭೆಯಾಗಿದೆ. ಕಾಂಗ್ರೆಸ್ ನಿಯೋಗ ಮಂಗಳೂರಿಗೆ ಹೋಗಲು ಇದು ಸಕಾಲವಲ್ಲ ಎಂದು ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published On - 12:00 pm, Fri, 20 December 19