‘ಸಿಎಂ ಆಗಿದ್ರೂ BSY ಮಾತಿಗೆ ಖಾಕಿ ಮೂರ್ಕಾಸಿನ ಕಿಮ್ಮತ್ತು ಕೊಟ್ಟಿಲ್ಲ’
ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಅಹಿತಕರ ಘಟನೆಗಳು ನಡೆದಿವೆ. ಪೊಲೀಸರ ದೌರ್ಜನ್ಯದಿಂದ ಶಾಂತಿಯುತವಾಗಿ ಪ್ರತಿಭಟನೆ ಮಾಡ್ತಿದ್ದಂತ ಪ್ರತಿಭಟನಕಾರರ ಮೇಲೆ ವಿನಾಕಾರಣ ಪೊಲೀಸರು ಗುಂಡು ಹಾರಿಸಿ ಇಬ್ಬರು ಅಮಾಯಕರನ್ನು ಕೊಂದಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೈರಿಂಗ್ ವಿಡಿಯೋ ರಿಲೀಸ್ ಮಾಡಿದ ಸಿದ್ದರಾಮಯ್ಯ: ಪ್ರತಿಭಟನಾಕಾರರ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ವಿಡಿಯೋವನ್ನು ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ರಿಲೀಸ್ ಮಾಡಿದ್ದಾರೆ. ಇದೇ ವೇಳೆ ಆಸ್ಪತ್ರೆ ಒಳಗೆ ಪೊಲೀಸರು ಲಾಠಿಚಾರ್ಜ್ ಮಾಡುವ ವಿಡಿಯೋವನ್ನೂ […]
ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಅಹಿತಕರ ಘಟನೆಗಳು ನಡೆದಿವೆ. ಪೊಲೀಸರ ದೌರ್ಜನ್ಯದಿಂದ ಶಾಂತಿಯುತವಾಗಿ ಪ್ರತಿಭಟನೆ ಮಾಡ್ತಿದ್ದಂತ ಪ್ರತಿಭಟನಕಾರರ ಮೇಲೆ ವಿನಾಕಾರಣ ಪೊಲೀಸರು ಗುಂಡು ಹಾರಿಸಿ ಇಬ್ಬರು ಅಮಾಯಕರನ್ನು ಕೊಂದಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫೈರಿಂಗ್ ವಿಡಿಯೋ ರಿಲೀಸ್ ಮಾಡಿದ ಸಿದ್ದರಾಮಯ್ಯ: ಪ್ರತಿಭಟನಾಕಾರರ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ವಿಡಿಯೋವನ್ನು ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ರಿಲೀಸ್ ಮಾಡಿದ್ದಾರೆ. ಇದೇ ವೇಳೆ ಆಸ್ಪತ್ರೆ ಒಳಗೆ ಪೊಲೀಸರು ಲಾಠಿಚಾರ್ಜ್ ಮಾಡುವ ವಿಡಿಯೋವನ್ನೂ ರಿಲೀಸ್ ಮಾಡಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಒಂದೇ ಒಂದು ಲಾಠಿ ಚಾರ್ಜ್ ಆಗಿರಲಿಲ್ಲ. ಕೇರಳದಿಂದ ಜನ ಬಂದು ಪ್ರತಿಭಟನೆ ನಡೆಸೋ ಅಗತ್ಯ ಏನಿದೆ? ಇದು ಮಂಗಳೂರಲ್ಲಿ ಮಾತ್ರ ನಡೆಯುತ್ತಿರೋ ಪ್ರತಿಭಟನೆಯಲ್ಲ. ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ. ಕಾಂಗ್ರೆಸ್ ಮೇಲೆ ಆರೋಪ ಹೊರಿಸುತ್ತಿರುವುದು ಸರಿಯಲ್ಲಿ ಎಂದು ಕಿಡಿಕಾರಿದರು.
ಸಿಎಂ ಮಾತಿಗೆ ಪೊಲೀಸರು ಕಿಮ್ಮತ್ತು ಕೊಡ್ತಿಲ್ಲ: ಇಡೀ ದೇಶದಲ್ಲಿ ಇಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಜನರು ಜಾತ್ಯಾತೀತವಾಗಿ ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರದ ನೀತಿಗಳು ಜನವಿರೋಧಿಯಾಗಿದ್ರೆ, ಶಾಂತಿಯುತವಾಗಿ ಪ್ರತಿಭಟಿಸಲು ಅವಕಾಶವಿದೆ. ಸಿಎಂ ಯಡಿಯೂರಪ್ಪ ಒಂದು ಕಡೆ ಲಾಠಿ ಉಪಯೋಗಿಸಬೇಡಿ ಅಂತ ಹೇಳ್ತಾರೆ. ಸಿಎಂ ಆದೇಶ ಇದ್ರೂ ಪೊಲೀಸರು ಗೋಲಿಬಾರ್ ಮಾಡಿದ್ದಾರೆ. ಯಡಿಯೂರಪ್ಪ ಆದೇಶಕ್ಕೆ ಪೊಲೀಸರು ಮೂರ್ಕಾಸು ಕಿಮ್ಮತ್ತು ಕೊಡ್ತಿಲ್ಲ. ಯಡಿಯೂರಪ್ಪ ಸುಳ್ಳು ಹೇಳ್ತಿರಬೇಕು ಅಥವಾ ಪೊಲೀಸರು ಇವರ ಮಾತು ಕೇಳುತ್ತಿಲ್ಲ ಎಂದು ಹರಿಹಾಯ್ದಿದ್ದಾರೆ.
ಉನ್ನತ ಮಟ್ಟದ ತನಿಖೆಗೆ ಆಗ್ರಹ: ಮಂಗಳೂರಿನಲ್ಲಿ ಅಮಾಯಕರನ್ನು ಕೊಂದಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಇದರ ಜವಾಬ್ದಾರಿ ಸರ್ಕಾರ ಹೊರಬೇಕಾಗುತ್ತದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಲೇಬೇಕು. ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ಅವರಿಂದ ತನಿಖೆ ಮಾಡಬೇಕು. ಅಮಾಯಕರನ್ನು ಕೊಂದ ತಪ್ಪಿತಸ್ಥರು ಯಾರೇ ಇರಲಿ ಅವರಿಗೆ ಶಿಕ್ಷೆ ಆಗಲೇಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
Published On - 12:54 pm, Fri, 20 December 19