ಚೆನ್ನೈ ವಿಮಾನ ನಿಲ್ದಾಣದಲ್ಲಿ ರೂ 1.6 ಕೋಟಿ ಮೌಲ್ಯದ ಎಕ್ಟೇಸಿ ಪಿಲ್​ಗಳು ಜಪ್ತು

ಚೆನ್ನೈ ಮೀನಂಬಕ್ಕಂ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್​ಗಳಲ್ಲಿನ ಅಂಚೆ ಕಚೇರಿಗಳಿಂದ ಎರಡು ಪೋಸ್ಟಲ್ ಪಾರ್ಸೆಲ್​ಗಳ ಮೂಲಕ ರವಾನಿಸಲಾಗಿದ್ದ ಸುಮಾರು ರೂ 1.6 ಕೋಟಿ ಬೆಲೆಬಾಳುವ ಎಕ್ಟೇಸಿ ಮಾತ್ರೆಗಳನ್ನು ಹಾಗೂ ಇತರ ಮಾದಕ ವಸ್ತುಗಳನ್ನು ಇಂದು ಜಪ್ತಿ ಮಾಡಿದರು. ಈ ಕುರಿತು ಅಧಿಕಾರಿಗಳು ಪತ್ರಿಕಾ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿ ವಿವರಣೆ ನೀಡಿದ್ದಾರೆ. ವಿದೇಶಗಳಿಂದ ಬಂದಿದ್ದ ಪಾರ್ಸೆಲ್​ಗಳ ಮೇಲೆ ಅಧಿಕಾರಿಗಳಿಗೆ ಅನುಮಾನ ಉಂಟಾಗಿ ಅವುಗಳನ್ನು ತೆರೆದು ನೋಡುವ ನಿರ್ಧಾರ ಮಾಡಿದರು. ಅವರು ಮೊದಲ ಓಪನ್ ಮಾಡಿದ್ದು […]

ಚೆನ್ನೈ ವಿಮಾನ ನಿಲ್ದಾಣದಲ್ಲಿ ರೂ 1.6 ಕೋಟಿ ಮೌಲ್ಯದ ಎಕ್ಟೇಸಿ ಪಿಲ್​ಗಳು ಜಪ್ತು
ಅರುಣ್​ ಕುಮಾರ್​ ಬೆಳ್ಳಿ

Updated on: Aug 12, 2020 | 7:11 PM

ಚೆನ್ನೈ ಮೀನಂಬಕ್ಕಂ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್​ಗಳಲ್ಲಿನ ಅಂಚೆ ಕಚೇರಿಗಳಿಂದ ಎರಡು ಪೋಸ್ಟಲ್ ಪಾರ್ಸೆಲ್​ಗಳ ಮೂಲಕ ರವಾನಿಸಲಾಗಿದ್ದ ಸುಮಾರು ರೂ 1.6 ಕೋಟಿ ಬೆಲೆಬಾಳುವ ಎಕ್ಟೇಸಿ ಮಾತ್ರೆಗಳನ್ನು ಹಾಗೂ ಇತರ ಮಾದಕ ವಸ್ತುಗಳನ್ನು ಇಂದು ಜಪ್ತಿ ಮಾಡಿದರು. ಈ ಕುರಿತು ಅಧಿಕಾರಿಗಳು ಪತ್ರಿಕಾ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿ ವಿವರಣೆ ನೀಡಿದ್ದಾರೆ.

ವಿದೇಶಗಳಿಂದ ಬಂದಿದ್ದ ಪಾರ್ಸೆಲ್​ಗಳ ಮೇಲೆ ಅಧಿಕಾರಿಗಳಿಗೆ ಅನುಮಾನ ಉಂಟಾಗಿ ಅವುಗಳನ್ನು ತೆರೆದು ನೋಡುವ ನಿರ್ಧಾರ ಮಾಡಿದರು. ಅವರು ಮೊದಲ ಓಪನ್ ಮಾಡಿದ್ದು ಬೆಲ್ಜಿಯಂನಿಂದ ಬಂದಿದ್ದ ಪಾರ್ಸೆಲನ್ನು. ಆ ಪೆಟ್ಟಿಗೆಯಲ್ಲಿ ಅವರಿಗೆ ಕಂಡಿದ್ದು ಕೃತಕ ಚಿರತೆಯ ಚರ್ಮದಿಂದ ಮಾಡಿದ ಬಟ್ಟೆಯಲ್ಲಿ ಸುತ್ತಿದ್ದ ಕೆಲವು ವಸ್ತುಗಳು. ನಂತರ ಆ ವಸ್ತುಗಳನ್ನು ಕತ್ತರಿಸಿ ಓಪನ್ ಮಾಡಿದಾಗ ಅವುಗಳಲ್ಲಿ ರೆಡ್​ಬುಲ್ಹಾಗೂ ಹೈನೇಕಿಎಂದು ಬರೆದಿದ್ದ ಎರಡು ಕಿತ್ತಳೆ ಬಣ್ಣದ ಪೊಟ್ಟಣಗಳು ಸಿಕ್ಕವು ಮತ್ತು ಅವುಗಳಲ್ಲಿ 4,060 ಎಕ್ಟೇಸಿ ಮಾತ್ರೆಗಳನ್ನು ಪ್ಯಾಕ್ ಮಾಡಲಾಗಿತ್ತು. ಅಧಿಕಾರಿಗಳ ಪ್ರಕಾರ, ಈ ಪಿಲ್​ಗಳ ಮೌಲ್ಯ ರೂ 1.2 ಕೋಟಿಗಳಷ್ಟಾಗಿದ್ದು ಎನ್ ಡಿ ಪಿ ಎಸ್ ಆ್ಯಕ್ಟ್ 1985ರ ಅನ್ವಯ ಅವುಗಳನ್ನು ಜಪ್ತಿ ಮಾಡಲಾಯಿತು.

ಈ ಪಾರ್ಸೆಲ್ ತಮಿಳು ನಾಡು ರಾಜ್ಯದ ಕಂಚೀಪುರಂನಲ್ಲಿರವ ಒಂದು ಗ್ರಾಮದ ವ್ಯಕ್ತಿಗೆ ಕಳಿಸಲಾಗಿತ್ತು. ಆದರೆ, ಪೊಲೀಸರ ನೆರವು ಪಡೆದು ಆ ವ್ಯಕ್ತಿಯ ಪತ್ತೆ ಹಚ್ಚಲು ಪ್ರಯತ್ನಿಸಿದಾಗ ಅದೊಂದು ಸುಳ್ಳು ವಿಳಾಸ ಅನ್ನೋದು ಗೊತ್ತಾಯಿತೆಂದು ಅಧಿಕಾರಿಗಳು ಹೇಳಿದರು.

ಅದಾದ ಮೇಲೆ ನೆದರ್ಲ್ಯಾಂಡ್​ನಿಂದ ಬಂದ ಪಾರ್ಸೆಲನ್ನು ತೆರೆಯಲಾಗಿ ಅದರಲ್ಲಿ, ಗಾಳಿ ತುಂಬಿ ಚಿಕ್ಕ ಸ್ವಿಮ್ಮಿಂಗ್ ಪೂಲ್​ನಂತೆ ಉಪಯೋಗಿಸುವ ಪ್ಲಾಸ್ಟಿಕ್ ಉಪಕರಣ, ಗಮ್ಮಿ ಬೇರ್ ಪ್ಯಾಕೆಟ್​ಗಳು ದೊರೆತವು. ಈ ಪ್ಯಾಕೆಟ್​ಗಳನ್ನು ಒಡೆದಾಗ ಮೈ ಬ್ರ್ಯಾಂಡ್ಮಾರ್ಕಿನ ಬುರುಡೆಯಾಕಾರದ 1.150 ಪಿಲ್​ಗಳು ದೊರೆತವು. ನಂತರ ಪೂಲನ್ನು ಸೀಳಿದಾಗ ಎಮ್ ಡಿ ಎಮ್ ಎ ಸ್ಫಟಿಕಗಳು ಹಾಗೂ ಮಿಥಾಗುವಲೋನ್ ಎಂದು ಕರೆಯಲ್ಪಡುವ ಮಾದಕ ಡ್ರಗ್ ಸಿಕ್ಕವು. ಅಧಿಕಾರಿಗಳ ಪ್ರಕಾರ ಇವುಗಳ ಒಟ್ಟು ಮೌಲ್ಯ ಸುಮಾರು ರೂ 45 ಲಕ್ಷ.

ಎರಡು ಬಾಕ್ಸ್​ಗಳಿಂದ 5,210 ಪಿಲ್ಸ್, 100 ಗ್ರಾಮ್ ಎಮ್ ಡಿ ಎಮ್ ಎ ಸ್ಫಟಿಕಗಳು, ಹಾಗೂ ಒಂದು ಗ್ರಾಮಿನಷ್ಟು ಮಿಥಾಗುವಲೋನ್ ದೊರೆತಿವೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಅಧಿಕಾರಿಗಳು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us