AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಗ್ಸ್​ ಜಾಲ: ವಿಚಾರಣೆ ಮಧ್ಯೆಯೇ ಮಾಜಿ ಗೃಹ ಸಚಿವರ ಪುತ್ರ​ ED ಕಸ್ಟಡಿಗೆ

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್​ ಜಾಲದ ಕೇಸ್​ಗೆ ಸಂಬಂಧಿಸಿ ಕೇರಳದ ಮಾಜಿ ಗೃಹ ಸಚಿವ ಕೋಡಿಯೇರಿ ಬಾಲಕೃಷ್ಣನ್ ಪುತ್ರ ಬಿನೇಶ್ ಕೋಡಿಯೇರಿಯನನ್ನು ಇ.ಡಿ. ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಮಧ್ಯೆ, ನ್ಯಾಯಾಲಯವು ಬಿನೇಶ್ ಕೋಡಿಯೇರಿನನ್ನು 4 ದಿನಗಳ ಕಾಲ ಇ.ಡಿ. ಕಸ್ಟಡಿಗೆ ನೀಡಿದೆ. ಬಿನೀಶ್ ಡ್ರಗ್ಸ್ ಪೆಡ್ಲರ್ ಅನೂಪ್​ಗೆ 50 ಲಕ್ಷ ಕೊಟ್ಟಿದ್ದ. ಈ ಮಾಹಿತಿ ಆಧರಿಸಿ ಬೆಂಗಳೂರು ಇ.ಡಿ. ನೋಟಿಸ್ ನೀಡಿತ್ತು. ಹೀಗಾಗಿ ಅಕ್ಟೋಬರ್ 6 ರಂದು ವಿಚಾರಣೆಗೆ ಹಾಜರಾಗಿ 6 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದ. […]

ಡ್ರಗ್ಸ್​ ಜಾಲ: ವಿಚಾರಣೆ ಮಧ್ಯೆಯೇ ಮಾಜಿ ಗೃಹ ಸಚಿವರ ಪುತ್ರ​ ED ಕಸ್ಟಡಿಗೆ
ಆಯೇಷಾ ಬಾನು
| Edited By: |

Updated on:Oct 29, 2020 | 4:15 PM

Share

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್​ ಜಾಲದ ಕೇಸ್​ಗೆ ಸಂಬಂಧಿಸಿ ಕೇರಳದ ಮಾಜಿ ಗೃಹ ಸಚಿವ ಕೋಡಿಯೇರಿ ಬಾಲಕೃಷ್ಣನ್ ಪುತ್ರ ಬಿನೇಶ್ ಕೋಡಿಯೇರಿಯನನ್ನು ಇ.ಡಿ. ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಮಧ್ಯೆ, ನ್ಯಾಯಾಲಯವು ಬಿನೇಶ್ ಕೋಡಿಯೇರಿನನ್ನು 4 ದಿನಗಳ ಕಾಲ ಇ.ಡಿ. ಕಸ್ಟಡಿಗೆ ನೀಡಿದೆ.

ಬಿನೀಶ್ ಡ್ರಗ್ಸ್ ಪೆಡ್ಲರ್ ಅನೂಪ್​ಗೆ 50 ಲಕ್ಷ ಕೊಟ್ಟಿದ್ದ. ಈ ಮಾಹಿತಿ ಆಧರಿಸಿ ಬೆಂಗಳೂರು ಇ.ಡಿ. ನೋಟಿಸ್ ನೀಡಿತ್ತು. ಹೀಗಾಗಿ ಅಕ್ಟೋಬರ್ 6 ರಂದು ವಿಚಾರಣೆಗೆ ಹಾಜರಾಗಿ 6 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದ. ಈ ವೇಳೆ ಅನೂಪ್​ಗೆ ಸ್ನೇಹಿತನ ಮೂಲಕ ಹಣ ಕೊಡಿಸಿದ್ದಾಗಿ ಹೇಳಿದ್ದ.

ಸೂಕ್ತ ದಾಖಲೆಗಳನ್ನ ಸಲ್ಲಿಸುವಂತೆ ಇ.ಡಿ. ಸೂಚಿಸಿತ್ತು. ಬಿನೇಶ್ ಇಂದು ಮತ್ತೆ ಬೆಂಗಳೂರಿನ ಶಾಂತಿನಗರದ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದು ದಾಖಲೆಗಳ ಪರಿಶೀಲನೆ ಬಳಿಕ ಬಿನೇಶ್​ನನ್ನು ಇ.ಡಿ. ಕಸ್ಟಡಿಗೆ ತೆಗೆದುಕೊಂಡಿದೆ.

ಮಾಜಿ ಸಚಿವ ಪುತ್ರನಿಗೂ ಬೆಂಗಳೂರು Drugs ನೆಟ್​ವರ್ಕ್ ನಂಟು? ಸಮನ್ಸ್​ ಜಾರಿಗೆ ಸಿದ್ಧತೆ

Published On - 3:24 pm, Thu, 29 October 20