
ಮೈಸೂರು: ಕಾಡಾನೆಯೊಂದು ಅರಣ್ಯ ಇಲಾಖೆ ಸಿಬ್ಬಂದಿ ಜೀಪ್ ಅನ್ನು ಅಟ್ಟಿಸಿಕೊಂಡು ಬಂದ ಘಟನೆ ನಾಗರಹೊಳೆ ಅರಣ್ಯ ವ್ಯಾಪ್ತಿಯ ಅಂತರಸಂತೆ ವಲಯದಲ್ಲಿ ನಡೆದಿದೆ. ಕಾಡಾನೆ ಅಟ್ಟಿಸಿಕೊಂಡು ಬಂದಿದ್ದು ಕಂಡು ಸಿಬ್ಬಂದಿ ಭಯಭೀತರಾಗಿದ್ದಾರೆ.
ಅಂತರಸಂತೆ ವಲಯದಲ್ಲಿ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಜೀಪ್ ಅನ್ನು ಕಾಡಾನೆ ಚೇಸ್ ಮಾಡಿದೆ. ಈ ದೃಶ್ಯ ನೋಡಿದರೆ ನಡುಕ ಹುಟ್ಟಿಸುವಂತಿದೆ. ಆನೆ ಆರ್ಭಟಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ದಂಗಾಗಿದ್ದಾರೆ. ಚೇಸಿಂಗ್ ದೃಶ್ಯವನ್ನು ಇಲಾಖೆಯ ಸಿಬ್ಬಂದಿ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಎಲ್ಲಾ ಸಿಬ್ಬಂದಿ ಸೇಫ್ ಆಗಿ ಕಾಡಾನೆಯಿಂದ ಪಾರಾಗಿದ್ದಾರೆ.