ಅರಣ್ಯ ಇಲಾಖೆ ಸಿಬ್ಬಂದಿ ಕಡೆ ನುಗ್ಗಿಬಂದ ಗಜರಾಜ.. ಕೂದಲೆಳೆ ಅಂತರದಲ್ಲಿ ತಪ್ಪಿತು ಅನಾಹುತ

|

Updated on: Nov 29, 2020 | 8:27 AM

ಅರಣ್ಯ ಇಲಾಖೆ ಸಿಬ್ಬಂದಿ ಕಡೆ ಗಜರಾಜ ನುಗ್ಗಿಬಂದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಾಗರ ಹೊಳೆ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಕಡೆ ನುಗ್ಗಿಬಂದ ಗಜರಾಜ.. ಕೂದಲೆಳೆ ಅಂತರದಲ್ಲಿ ತಪ್ಪಿತು ಅನಾಹುತ
ಅರಣ್ಯ ಇಲಾಖೆ ಸಿಬ್ಬಂದಿ ಕಡೆ ನುಗ್ಗಿಬಂದ ಗಜರಾಜ
Follow us on

ಮೈಸೂರು: ಅರಣ್ಯ ಇಲಾಖೆ ಸಿಬ್ಬಂದಿ ವಾಹನಕ್ಕೆ ಗಜರಾಜ ಅಡ್ಡ ಬಂದಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ಸಿಬ್ಬಂದಿ ಜೀವ ಉಳಿದಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ನಾಗರ ಹೊಳೆ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಅರಣ್ಯಾಧಿಕಾರಿಗಳು ಜೀಪ್​ನಲ್ಲಿ ವೀರನಹೊಸಹಳ್ಳಿ ಕುಟ್ಟಾ ಮಾರ್ಗವಾಗಿ ಸಂಚರಿಸುವ ವೇಳೆ ರಸ್ತೆ ಮಧ್ಯೆ ಆನೆ ನಿಂತಿತ್ತು. ಗಜರಾಜನನ್ನು ನೋಡಿದ ಸಿಬ್ಬಂದಿ ಜೀಪ್ ನಿಲ್ಲಿಸಿದ್ರು. ಆದರೆ ಜೀಪ್ ಸಿಲ್ಲಿಸಿದ ತಕ್ಷಣವೇ ಆನೆ ಸೊಂಡಿಲು ಆಡಿಸುತ್ತ ವಾಹನದತ್ತ ನುಗ್ಗಿ ಬಂದಿದೆ. ತಕ್ಷಣ ಎಚ್ಚೆತ್ತ ಚಾಲಕ ಆನೆ ಬರ್ತಿದ್ದಂತೆ ಹಿಮ್ಮುಖವಾಗಿ ಜೀಪ್ ಚಲಾಯಿಸಿದ್ದಾರೆ. ಬಳಿಕ ಸ್ವಲ್ಪ ದೂರ ಅಟ್ಟಿಸಿಕೊಂಡು ಬಂದ ಗಜರಾಜ ಸುಮ್ಮನೆ ಕಾಡಿನತ್ತ ಪಯಣ ಬೆಳೆಸಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಘೋರ ದುರಂತ ತಪ್ಪಿದೆ.

ಇದನ್ನೂ ಓದಿ: ಸಿಂಪಲ್ಲಾಗ್ ಒಂದು ಸೆಲ್ಫಿ ಪ್ಲೀಸ್.. ಕಾಡಾನೆ ಜೊತೆ ಯುವಕನ ಸಾಹಸ!
ಹಾಡಹಗಲೇ ಗ್ರಾಮದೊಳಗೆ ಗಜರಾಜನ ಎಂಟ್ರಿ, ಭಯಭೀತರಾದ‌ ಗ್ರಾಮಸ್ಥರು, ಯಾವುರಲ್ಲಿ?

Published On - 8:20 am, Sun, 29 November 20