ಪ್ರಾಣಿಗಳ ತುಂಟಾಟದ ದೃಶ್ಯಗಳು ನೋಡಲು ಖುಷಿ ಅನಿಸುತ್ತವೆ. ಅದೆಷ್ಟೋ ಪ್ರಾಣಿಗಳು ಸಮಯ ಕಳೆಯುವುದನ್ನು ನೋಡ ಓಡುತ್ತಿದ್ದಂತೆಯೇ ಸಮಯ ಕಳೆದಿರುವುದು ಗೊತ್ತೇ ಆಗುವುದಿಲ್ಲ. ಅಷ್ಟೊಂದು ಖುಷಿ ನೀಡುತ್ತವೆ ಕೆಲವು ವಿಡಿಯೋಗಳು. ಪ್ರಾಣಿಗಳ ಕೀಟಲೆಯ ದೃಶ್ಯ ಮನಸ್ಸಿಗೆ ಖುಷಿ ನೀಡುವುದಂತು ನಿಜ. ಹಾಗೆಯೇ ಇಲ್ಲೊಂದು ದೈತ್ಯಾಕಾರ ಆನೆ ಇದೆ. ತನ್ನ ಖುಷಿಯನ್ನು ಹೇಗೆ ಆಚರಿಸಿಕೊಳ್ಳುತ್ತಿದೆ ನೋಡಿ.
ಚಿಕ್ಕ-ಪುಟ್ಟ ಮರಿ ಆನೆಯೇ ಆಗಿರಲಿ ಅಥವಾ ದೈತ್ಯಾಕಾರದ ಆನೆಯೇ ಆಗಿರಲಿ, ಅವರಲ್ಲಿ ಒಂದು ಚಿಕ್ಕ ಮನಸ್ಸಿರುತ್ತದೆ. ಅವುಗಳೂ ಕುಡಾ ಖುಷಿಯಾದಾಗ ಕುಣಿದಾಡುತ್ತವೆ. ಇಲ್ಲೊಂದು ದೈತ್ಯಾಕಾರದ ಆನೆ ತನ್ನ ಖುಷಿಯನ್ನು ವಿಜೃಂಭಣೆಯಿಂದ ಕೆಸರು ಗುಂಡಿಯಲ್ಲಿ ಆಚರಿಸಿಕೊಳ್ಳುತ್ತಿದೆ. ಕೆಸರು ಗುಂಡಿ ನೋಡಿದ್ದೇ ನೋಡಿದ್ದು ಖುಷಿಯಾಗಿ ಮಣ್ಣಿನೊಡನೆ ಆಟವಾಡುತ್ತಿದೆ. ಆನೆಯ ಆಟ ನೋಡುತ್ತಿದ್ದರೆ ಮನಸ್ಸಿಗೆ ಖುಷಿ ಅನಿಸುತ್ತದೆ.
ಆಗಲೇ ಆನೆ ಖುಷಿಯಲ್ಲಿದೆ, ಜೊತೆ ಜತೆಗೆ ಕೆಸರಿನ ಗುಂಡಿ ಕಾಣಿಸಿ ಬಿಟ್ಟರೆ ಕೇಳಬೇಕೆ? ಮುದ್ದು ಮನಸ್ಸಿನ ದೈತ್ಯ ಆನೆಯ ಖುಷಿಗೆ ಇಂದು ಮಿತಿಯೇ ಇಲ್ಲ. ಕೆಸರಿನ ಮಣ್ಣಿನಲ್ಲಿ ಬಿದ್ದು-ಎದ್ದು ಹೊರಳಾಡುತ್ತಾ ತನ್ನ ಖುಷಿಯನ್ನು ತೋರ್ಪಡಿಸುತ್ತಿದೆ. ಕಾಲಿನಲ್ಲಿ ಮಣ್ಣನ್ನು ಸೋಕುತ್ತಾ ಚಿಕ್ಕ ಮರಿ ಆನೆಯಂತೆ ಆಟವಾಡುತ್ತಿದೆ. ಇದೀಗ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.
Spa day pic.twitter.com/Yx7T4Ti7h9
— Oregon Zoo (@OregonZoo) June 10, 2021
ಇದನ್ನೂ ಓದಿ:
Viral Video: ಮದುವೆ ಮನೆಗೆ ಆನೆ ಕರೆತಂದು ಸುಸ್ತಾದ ಮಂದಿ; ವಾಹನ, ಪೆಂಡಾಲ್ಗಳನ್ನೆಲ್ಲ ಪುಡಿಪುಡಿ ಮಾಡಿದ ಗಜ
ಕಣ್ಮುಚ್ಚಿದ ಮಾವುತನಿಗೆ ಅತ್ಯಂತ ಗೌರವಯುತ ವಿದಾಯ ನೀಡಿದ ಆನೆ; ಇಲ್ಲಿದೆ ನೋಡಿ ಭಾವುಕ ವಿಡಿಯೋ