Viral Video: ಮದುವೆ ಮನೆಗೆ ಆನೆ ಕರೆತಂದು ಸುಸ್ತಾದ ಮಂದಿ; ವಾಹನ, ಪೆಂಡಾಲ್​​ಗಳನ್ನೆಲ್ಲ ಪುಡಿಪುಡಿ ಮಾಡಿದ ಗಜ

TV9kannada Web Team

TV9kannada Web Team | Edited By: Lakshmi Hegde

Updated on: Jun 13, 2021 | 2:57 PM

ಘಟನೆಯಿಂದಾಗಿ ವರ ಮತ್ತು ಅತಿಥಿಗಳೂ ಸಹ ಕಂಗಾಲಾಗಿದ್ದಾರೆ. ಮದುವೆ ಮನೆಯಿಂದ ಎಲ್ಲರೂ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ನಂತರ ಅದರ ಮಾವುತನೇ ಬಂದು ಆನೆಯನ್ನು ಸಹಜಸ್ಥಿತಿಗೆ ತಂದಿದ್ದಾನೆ.

Viral Video: ಮದುವೆ ಮನೆಗೆ ಆನೆ ಕರೆತಂದು ಸುಸ್ತಾದ ಮಂದಿ; ವಾಹನ, ಪೆಂಡಾಲ್​​ಗಳನ್ನೆಲ್ಲ ಪುಡಿಪುಡಿ ಮಾಡಿದ ಗಜ
ಮದುವೆ ಮನೆಯಲ್ಲಿ ಆನೆಯ ದಾಂಧಲೆ

ಪ್ರಯಾಗ್​ರಾಜ್​: ಮದುವೆ ಸಮಾರಂಭಕ್ಕೆ ಮೆರವಣಿಗೆಗಾಗಿ ಕರೆದುಕೊಂಡು ಬಂದಿದ್ದ ಆನೆ, ಪಟಾಕಿ ಶಬ್ದ ಕೇಳಿ, ಇಡೀ ಮದುವೆ ಮನೆಯಲ್ಲಿ ದಾಂಧಲೆ ನಡೆಸಿದ ಘಟನೆ ಉತ್ತರಪ್ರದೇಶದ ಪ್ರಯಾಗ್​ರಾಜ್​​ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಈ ಭಯಾನಕ ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗಿದೆ. ಪ್ರಯಾಗ್​ರಾಜ್​​ನ ಅಲಾಂಪುರ ಗ್ರಾಮದಲ್ಲಿ ಮದುವೆ ನಡೆದಿತ್ತು. ವಿವಾಹದಲ್ಲಿ ವಿಶೇಷವಾಗಿರಲಿ ಎಂದು ಆನೆಯನ್ನೂ ಕರೆದುಕೊಂಡುಬರಲಾಗಿತ್ತು. ಆದರೆ ವರ ಹಾಗೂ ಅವನ ಕಡೆಯ ಅತಿಥಿಗಳನ್ನು ಸ್ವಾಗತಿಸಲು ಪಟಾಕಿ ಹೊಡೆಯುತ್ತಿದ್ದಂತೆ ಆನೆ ಕೆರಳಿದೆ. ಹೆದರಿ ಓಡಿದ ಆನೆ ಅಲ್ಲೆಲ್ಲ ದಾಂಧಲೆ ನಡೆಸಿದೆ. ಕಾರು, ಬೈಕ್​​ಗಳನ್ನು ಪುಡಿಪುಡಿ ಮಾಡಿದ್ದಲ್ಲದೆ, ಮದುವೆ ಮನೆಗೆ ಹಾಕಲಾಗಿದ್ದ ಪೆಂಡಾಲ್​​​ ಕೂಡ ಧ್ವಂಸಗೊಳಿಸಿದೆ.

ಘಟನೆಯಿಂದಾಗಿ ವರ ಮತ್ತು ಅತಿಥಿಗಳೂ ಸಹ ಕಂಗಾಲಾಗಿದ್ದಾರೆ. ಮದುವೆ ಮನೆಯಿಂದ ಎಲ್ಲರೂ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ನಂತರ ಅದರ ಮಾವುತನೇ ಬಂದು ಆನೆಯನ್ನು ಸಹಜಸ್ಥಿತಿಗೆ ತಂದಿದ್ದಾನೆ. ಈ ಬಗ್ಗೆ ಸ್ಥಳೀಯ ಅರಣ್ಯ ರೇಂಜರ್​ ಮತ್ತು ಪೊಲೀಸರಿಗೂ ನಂತರ ಮಾಹಿತಿ ನೀಡಲಾಗಿದೆ. ಆನೆ ಮಾವುತನನ್ನು ಕೊಂದಿದೆ ಎಂಬ ಸುಳ್ಳುಸುದ್ದಿಯೂ ವಿಡಿಯೋದೊಟ್ಟಿಗೆ ಹರಿದಾಡುತ್ತಿದೆ. ಆದರೆ ಅದು ಸುಳ್ಳು ಸುದ್ದಿ. ಮಾವುತ ಸತ್ತಿಲ್ಲ ಎಂದು ಸರೈ ಠಾಣೆಯ ಅಧಿಕಾರಿ ರಾಕೇಶ್​ ಚೌರಾಸಿಯಾ ತಿಳಿಸಿದ್ದಾರೆ.

ಇದನ್ನೂ ಓದಿ:ರಾಜಕೀಯಕ್ಕೆ ಬರಲ್ಲ ಎನ್ನುವ ಸೋನು ಸೂದ್​ಗೆ ಈ ರಾಜಕಾರಣಿ ಕಂಡರೆ ಹೆಚ್ಚು ಅಭಿಮಾನ; ಯಾರದು?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada