ನಿರ್ಮಾಣವಾದ ಐದೇ ದಿನಗಳಲ್ಲಿ ಧ್ವಂಸವಾದ ಕೊರೊನಾ ಮಾತಾ ದೇವಾಲಯ; ಕೆಡವಿದ್ದು ಯಾರೆಂಬುದೇ ಪ್ರಶ್ನೆ

ಲೋಕೇಶ್​ ಕುಮಾರ್​ ಶ್ರೀವಾಸ್ತವ್​ ಎಂಬುವರು, ಹಳ್ಳಿಯವರಿಂದ ಡೊನೇಶನ್​ ಪಡೆದು ಈ ದೇವಸ್ಥಾನವನ್ನು ನಿರ್ಮಿಸಿದ್ದರು. ಜೂ.7ರಂದು ದೇಗುಲ ಕಟ್ಟಲ್ಪಟ್ಟಿತ್ತು. ಆದರೆ ಐದೇ ದಿನದಲ್ಲಿ ಕೆಡವಲಾಗಿದೆ. ಇದು ಪೊಲೀಸರ ಕೆಲಸ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.

ನಿರ್ಮಾಣವಾದ ಐದೇ ದಿನಗಳಲ್ಲಿ ಧ್ವಂಸವಾದ ಕೊರೊನಾ ಮಾತಾ ದೇವಾಲಯ; ಕೆಡವಿದ್ದು ಯಾರೆಂಬುದೇ ಪ್ರಶ್ನೆ
ಕೊರೊನಾ ಮಾತಾ ದೇಗುಲ
Follow us
TV9 Web
| Updated By: Lakshmi Hegde

Updated on:Jun 13, 2021 | 3:48 PM

ಪ್ರತಾಪ್​ಗಡ್​: ಕೊರೊನಾ ಸೋಂಕಿನ ನಿವಾರಣೆಯಾಗಲೆಂದು ಈಗಾಗಲೇ ಹಲವರು ಪೂಜೆ, ವ್ರತ, ದೇವರ ಸ್ಮರಣೆಯ ಮೊರೆ ಹೋಗಿದ್ದಾರೆ. ಹಾಗೇ ಉತ್ತರಪ್ರದೇಶದ ಪ್ರತಾಪ್​ಗಡ್​ ಜಿಲ್ಲೆಯ ಶುಕುಲ್​ಪುರ ಗ್ರಾಮದಲ್ಲಿ ಜನರು ಕೊರೊನಾ ಮಾತಾ ದೇವಸ್ಥಾನವನ್ನೂ ಕಟ್ಟಿಸಿ, ಪೂಜಿಸಿದ್ದಾರೆ. ಜೂ.7ರಂದು ಕಟ್ಟಲ್ಪಟ್ಟಿದ್ದ ಈ ದೇವಾಲಯವನ್ನು ಐದೇ ದಿನದಲ್ಲಿ ಕೆಡವಲಾಗಿದೆ. ಆದರೆ ಕೆಡವಿದ್ದು ನಾವಲ್ಲ, ಪೊಲೀಸರು ಎಂದು ಹಳ್ಳಿಗರು ಆರೋಪಿಸುತ್ತಿದ್ದಾರೆ.

ಲೋಕೇಶ್​ ಕುಮಾರ್​ ಶ್ರೀವಾಸ್ತವ್​ ಎಂಬುವರು, ಹಳ್ಳಿಯವರಿಂದ ಡೊನೇಶನ್​ ಪಡೆದು ಈ ದೇವಸ್ಥಾನವನ್ನು ನಿರ್ಮಿಸಿದ್ದರು. ಜೂ.7ರಂದು ದೇಗುಲ ಕಟ್ಟಲ್ಪಟ್ಟಿತ್ತು. ಆದರೆ ಐದೇ ದಿನದಲ್ಲಿ ಕೆಡವಲಾಗಿದೆ. ಇದು ಪೊಲೀಸರ ಕೆಲಸ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಆದರೆ ಈ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ. ವಿವಾದಿತ ಸ್ಥಳದಲ್ಲಿ ದೇಗುಲ ಕಟ್ಟಲಾಗಿತ್ತು. ಈ ವಿವಾದದಲ್ಲಿ ಒಳಗೊಂಡಿರುವ ಯಾರೋ ಒಬ್ಬರು ಕೊರೊನಾ ಮಾತಾ ದೇವಸ್ಥಾನ ಧ್ವಂಸಗೊಳಿಸಿದ್ದಾರೆ ಎಂದು ಹೇಳಿದ್ದಾರೆ.

ಪುಟ್ಟ ದೇವಾಲಯ ನಿರ್ಮಿಸಿ ಅದರಲ್ಲಿ ಕೊರೊನಾ ಮಾತಾ ಮೂರ್ತಿಯನ್ನು ಇಡಲಾಗಿತ್ತು. ಪೂಜೆಗಾಗಿ ರಾಧೆಶ್ಯಾಮ್​ ವರ್ಮಾ ಎಂಬ ಅರ್ಚಕರನ್ನು ನೇಮಕ ಮಾಡಲಾಗಿತ್ತು. ಅದಾಗಲೇ ಹಳ್ಳಿಯ ಜನರು ಇಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಲು ಪ್ರಾರಂಭಿಸಿದ್ದರು ಎಂದೂ ಸ್ಥಳೀಯರು ಹೇಳಿದ್ದಾರೆ.

ದೇಗುಲ ನಿರ್ಮಾಣ ಮಾಡಿದ ಲೋಕೇಶ್​ ನೊಯ್ಡಾ ನಿವಾಸಿಯಾಗಿದ್ದಾರೆ. ಈ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಿ, ಅವರು ನೊಯ್ಡಾಕ್ಕೆ ಹೋಗಿದ್ದರು. ದೇಗುಲ ನಿರ್ಮಾಣವಾದ ಭೂಮಿ ವಿಚಾರದಲ್ಲಿ ನಾಗೇಶ್​ ಕುಮಾರ್​ ಶ್ರೀವಾಸ್ತವ್​, ಜೈ ಪ್ರಕಾಶ್​ ಶ್ರೀವಾಸ್ತವ್​ ಮತ್ತು ಲೋಕೇಶ್ ನಡುವೆ ವಿವಾದವಿದೆ ಎನ್ನಲಾಗಿದ್ದು, ದೇವಸ್ಥಾನ ನಿರ್ಮಾಣವಾಗುತ್ತಿದ್ದಂತೆ ನಾಗೇಶ್​ ಪೊಲೀಸರಿಗೆ ದೂರು ನೀಡಿದ್ದಾರೆ. ಜಮೀನನ್ನು ಸಂಪೂರ್ಣವಾಗಿ ಒಳಪಡಿಸಿಕೊಳ್ಳಲು ಕೊರೊನಾ ಮಾತಾ ದೇವಸ್ಥಾನ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ಶುರು ಮಾಡಿದ್ದಾರೆ.

ಇದನ್ನೂ ಓದಿ: ‘ಮತ್ತೆ ಬದುಕುವುದಕ್ಕೆ ಇಷ್ಟವಿಲ್ಲ’; ಕೊವಿಡ್​ನಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಖ್ಯಾತ ಯೂಟ್ಯೂಬರ್ ಭುವನ್

(Coronamata Temple Built in Uttar Pradesh and aftet 5 days demolished)

Published On - 3:47 pm, Sun, 13 June 21

ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ