ನವದೆಹಲಿ: ಭವಿಷ್ಯ ನಿಧಿ ಮೇಲಿನ ಬಡ್ಡಿದರವನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ(EPFO) ಮಾರ್ಚ್ 4ರಂದು ಸಭೆ ನಡೆಸಲಿದೆ. ಈ ವೇಳೆ ಪಿಎಫ್ ಮೇಲಿನ ಬಡ್ಡಿ ದರವನ್ನು ಕಡಿತ ಮಾಡುವ ನಿರ್ಧಾರಕ್ಕೆ EPFO ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕೊರೊನಾ ವೈರಸ್ ಕಾಣಿಸಿಕೊಂಡ ನಂತರ ಅನೇಕರು ಉದ್ಯೋಗ ಕಳೆದುಕೊಂಡಿದ್ದರು. ಕೆಲವರಿಗೆ ವೇತನದಲ್ಲಿ ಕತ್ತರಿ ಹಾಕಲಾಗಿತ್ತು. ಹೀಗಾಗಿ, ಉಳಿತಾಯ ರೂಪದಲ್ಲಿದ್ದ ಪಿಎಫ್ ಹಣ ತೆಗೆಯಲು ಆರಂಭಿಸಿದ್ದರು. ಅಧಿಕವಾಗಿ ಹಣ ವಿತ್ಡ್ರಾ ಮಾಡಲಾಗುತ್ತಿದ್ದು, ಇದಕ್ಕೆ ಕೊಡುಗೆ ನೀಡುವವರ ಸಂಖ್ಯೆ ಕಡಿಮೆ ಆಗಿದೆ. ಹೀಗಾಗಿ, 2020-21ರ EPFO ಬಡ್ಡಿ ದರ ಕಡಿತಗೊಳಿಸುವ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ವರ್ಷದಿಂದ ವರ್ಷಕ್ಕೆ ಪಿಎಫ್ ಬಡ್ಡಿದರ ಕಡಿಮೆ ಆಗುತ್ತಿದೆ. ಹೀಗಾಗಿ, ಇದರ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಕೂಡ ಕಡಿಮೆ ಆಗುತ್ತಿದೆ. 2018-19ರಲ್ಲಿ ಪಿಎಫ್ ಬಡ್ಡಿದರ ಶೇ 8.65 ಇತ್ತು. 2019-20ರಲ್ಲಿ ಇದನ್ನು 8.50ಗೆ ಇಳಿಕೆ ಮಾಡಲಾಗಿತ್ತು. ಈಗ ಈ ಬಡ್ಡಿದರ ಮತ್ತೂ ಕಡಿತಗೊಳ್ಳಲಿದೆ ಎನ್ನುವ ಸುದ್ದಿ ಹರಿದಾಡಿದೆ.
ಮಾರ್ಚ್ 4ರಂದು ನಡೆಯುವ ಎಪಿಎಫ್ಒನ 228ನೇ ಸಭೆಯಲ್ಲಿ ಕೇಂದ್ರ ಮಂಡಳಿ ( CBT) ಈ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗಾವರ್ ಸಿಬಿಟಿಯ ಮುಖ್ಯಸ್ಥರಾಗಿದ್ದಾರೆ. 6 ಕೋಟಿ ವೇತನದಾರರು ಇಪಿಎಫ್ಒದಲ್ಲಿ ಖಾತೆ ಹೊಂದಿದ್ದಾರೆ. ಕೊರೊನಾ ಸಂದರ್ಭದಲ್ಲಿ 1 ಲಕ್ಷ ರೂಪಾಯಿವರೆಗೆ ಹಣ ವಿತ್ಡ್ರಾ ಮಾಡಲು ಸರ್ಕಾರ ಅವಕಾಶ ನೀಡಿತ್ತು. ಹೀಗಾಗಿ, ಸಾಕಷ್ಟು ಮಂದಿ ಹಣ ತೆಗೆದಿದ್ದರಿಂದ, ಸಂಚಿತ ನಿಧಿ ಕಡಿಮೆ ಆಗಿದೆ. 2020ರ ಏಪ್ರಿಲ್-ಜೂನ್ ಅವಧಿಯಲ್ಲಿ 80 ಲಕ್ಷ ಚಂದಾದಾರು ಹಣವನ್ನು ಹಿಂಪಡೆದಿದ್ದಾರೆ.
EPF ಬಡ್ಡಿದರ:
ಪ್ರಸ್ತುತ, EPF ಠೇವಣಿಗಳ ಮೇಲೆ ಚಾಲ್ತಿಯಲ್ಲಿರುವ ದರವು ಶೇ 8.65. ಬಡ್ಡಿದರವನ್ನು ಪ್ರತಿವರ್ಷ ಪರಿಶೀಲಿಸಲಾಗುತ್ತದೆ. ಕಳೆದ ಆರು ವರ್ಷಗಳಲ್ಲಿ EPF ಮೇಲಿನ ಬಡ್ಡಿದರ ಹೇಗೆ ಬದಲಾಗಿದೆ ಎಂಬುದು ಈ ಕೆಳಗಿನಂತಿದೆ.
ವರ್ಷ, EPF, ಬಡ್ಡಿದರ
2019 – 20 8.65%
2018 – 19 8.65%
2017 – 18 8.55%
2016 – 17 8.80%
2015 – 16 8.80%
2014 – 15 8.75%
Published On - 1:50 pm, Wed, 17 February 21