ತುಮಕೂರು: ಶಿರಾ ಕ್ಷೇತ್ರದ ಶಾಸಕ ಸತ್ಯನಾರಾಯಣ ಸಾವನ್ನಪ್ಪಿ ತಿಂಗಳು ಕೂಡಾ ಕಳೆದಿಲ್ಲ. ಆದ್ರೆ ಆಗಲೇ ಮುಂದಿನ MLA ಸ್ಥಾನಕ್ಕಾಗಿ ಶಿರಾದಲ್ಲಿ ರಾಜಕೀಯ ಆರಂಭವಾಗಿದೆ.
ಹೌದು ಶಿರಾ ಕ್ಷೇತ್ರದಲ್ಲಿ ಈಗ ರಾಜಕೀಯ ಮೇಲಾಟ ಶುರುವಾಗಿದೆ. ಜೆಡಿಎಸ್ ಶಾಸಕ ಸತ್ಯನಾರಾಯಣ ಸಾವಿನಿಂದ ತೆರವಾದ ಶಿರಾ ಕ್ಷೇತ್ರಕ್ಕೆ ತಾನೇ ಶಾಸಕ ಎಂಬಂತೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಮಾವತಿ ನಾಲೆಗೆ ಬಾಗಿನ ಅರ್ಪಿಸಿದ್ದಾರೆ. ಇದನ್ನು ಸಮರ್ಥಿಸಿಕೊಂಡಿರುವ ಟಿಬಿ ಜಯಚಂದ್ರ, ಹೇಮಾವತಿ ನೀರನ್ನು ಶಿರಾ ಕ್ಷೇತ್ರಕ್ಕೆ ಹರಿಸಿದ್ದೀನಿ. ಹೀಗಾಗಿ ಬಾಗಿನ ಅರ್ಪಿಸಿದ್ದಿನೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಆದರೆ, ಜಯಚಂದ್ರರ ಈ ನಡೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಸಿಡಿಮಿಡಿಗೊಂಡಿದ್ದಾರೆ. ಸರ್ಕಾರ ನಮ್ಮದು. ಶಿರಾಗೆ ನೀರು ಬಿಟ್ಟವರು ನಾವು. ಮಾಜಿ ಸಚಿವರು ಬಂದು ಬಾಗಿನ ಅರ್ಪಿಸ್ತಾರೆ ಅಂದರೆ ಏನರ್ಥ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಆದರೆ ಮುಂಬರುವ ಉಪ ಚುನಾವಣೆ ಗಮನದಲ್ಲಿಟ್ಟುಕೊಂಡು ಹೇಮಾವತಿ ನೀರಿನ ರಾಜಕೀಯ ತುಮಕೂರು ಜಿಲ್ಲೆಯಲ್ಲಿ ನಡೆಯುತ್ತಿದೆ. ಉಪಚುನಾವಣೆಯಲ್ಲಿ ಅನುಕೂಲ ಆಗlಎಂದು ಎಲ್ಲಾ ತಾಲೂಕಿಗಿಂತ ಮೊದಲೇ ಶಿರಾಗೆ ಬಿಜೆಪಿ ಸರ್ಕಾರ ನೀರು ಹರಿಸಿದೆ. ಆದ್ರೆ ಅದರ ಕ್ರೆಡಿಟ್ ತೆಗೆದುಕೊಳ್ಳಲು ಮಾಜಿ ಸಚಿವ ಜಯಚಂದ್ರ ಹಾಗೂ ಮಾಧುಸ್ವಾಮಿ ನಡುವೆ ಈಗ ವಾರ್ ಶುರುವಾಗಿದೆ!