ಕ್ಯಾರೆಂಟೈನ್ ನಿಯಮ ಉಲ್ಲಂಘಿಸಿದಕ್ಕೆ ಭಾರತೀಯನಿಗೆ ಮಲೇಷ್ಯಾದಲ್ಲಿ ಜೈಲು ಶಿಕ್ಷೆ!
ಕೊರೊನಾ ನಿಯಮ ಉಲ್ಲಂಘಿಸಿದಕ್ಕೆ ಭಾರತೀಯ ಮೂಲದ ರೆಸ್ಟೋರೆಂಟ್ ಮಾಲೀಕನನ್ನು ಮಲೇಷ್ಯಾದಲ್ಲಿ ಐದು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 57 ವರ್ಷ ವಯಸ್ಸಿನ ಭಾರತೀಯ ಮೂಲದ ರೆಸ್ಟೋರೆಂಟ್ ಮಾಲೀಕ ಮಲೇಷ್ಯಾದಲ್ಲಿ ನೆಲೆಸಿದ್ದಾನೆ. ಈತ ಉತ್ತರ ರಾಜ್ಯದ ಕೆಡಾದಲ್ಲಿ ರೆಸ್ಟೋರೆಂಟ್ ಹೊಂದಿದ್ದಾನೆ. ಕೆಲಸದ ವಿಚಾರವಾಗಿ ಭಾರತಕ್ಕೆ ಬಂದು ಜುಲೈನಲ್ಲಿ ವಾಪಸ್ ಮಲೇಷ್ಯಾಗೆ ಹಿಂತಿರುಗಿದ್ದ. ಹೀಗಾಗಿ ಈತನಿಗೆ 14 ದಿನಗಳ ಕಾಲ ಹೋಂ ಕ್ಯಾರೆಂಟೈನ್ ಆಗಲು ಸರ್ಕಾರ ಆದೇಶಿಸಿತ್ತು. ಆದರೆ ಹೋಂ ಕ್ಯಾರೆಂಟೈನ್ ಆದೇಶವನ್ನು ಉಲ್ಲಂಘಿಸಿ ಇತರರಿಗೂ ಸೋಂಕು ಹರಡುವಂತೆ ಮಾಡಿದ್ದಾನೆ. […]
ಕೊರೊನಾ ನಿಯಮ ಉಲ್ಲಂಘಿಸಿದಕ್ಕೆ ಭಾರತೀಯ ಮೂಲದ ರೆಸ್ಟೋರೆಂಟ್ ಮಾಲೀಕನನ್ನು ಮಲೇಷ್ಯಾದಲ್ಲಿ ಐದು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
57 ವರ್ಷ ವಯಸ್ಸಿನ ಭಾರತೀಯ ಮೂಲದ ರೆಸ್ಟೋರೆಂಟ್ ಮಾಲೀಕ ಮಲೇಷ್ಯಾದಲ್ಲಿ ನೆಲೆಸಿದ್ದಾನೆ. ಈತ ಉತ್ತರ ರಾಜ್ಯದ ಕೆಡಾದಲ್ಲಿ ರೆಸ್ಟೋರೆಂಟ್ ಹೊಂದಿದ್ದಾನೆ. ಕೆಲಸದ ವಿಚಾರವಾಗಿ ಭಾರತಕ್ಕೆ ಬಂದು ಜುಲೈನಲ್ಲಿ ವಾಪಸ್ ಮಲೇಷ್ಯಾಗೆ ಹಿಂತಿರುಗಿದ್ದ. ಹೀಗಾಗಿ ಈತನಿಗೆ 14 ದಿನಗಳ ಕಾಲ ಹೋಂ ಕ್ಯಾರೆಂಟೈನ್ ಆಗಲು ಸರ್ಕಾರ ಆದೇಶಿಸಿತ್ತು. ಆದರೆ ಹೋಂ ಕ್ಯಾರೆಂಟೈನ್ ಆದೇಶವನ್ನು ಉಲ್ಲಂಘಿಸಿ ಇತರರಿಗೂ ಸೋಂಕು ಹರಡುವಂತೆ ಮಾಡಿದ್ದಾನೆ. ಹೀಗಾಗಿ ರೆಸ್ಟೋರೆಂಟ್ ಮಾಲೀಕನನ್ನು ಮಲೇಷ್ಯಾದಲ್ಲಿ ಐದು ತಿಂಗಳ ಜೈಲು ಶಿಕ್ಷೆ ನೀಡಲಾಗಿದೆ.
ಈ ವ್ಯಕ್ತಿಯಿಂದಾಗಿ ಅನೇಕರು ಸೋಂಕಿಗೆ ಒಳಗಾಗಿದ್ದಾರೆ. ವ್ಯಕ್ತಿಯ ಕುಟುಂಬಸ್ಥರು, ರೆಸ್ಟೋರೆಂಟ್ನಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಮತ್ತು ಗ್ರಾಹಕರು ಸೇರಿದ್ದಂತೆ ಅನೇಕರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಒಟ್ಟು 45 ಪ್ರಕರಣಗಳು ಮಲೇಷಿಯಾದ ಕನಿಷ್ಠ ಮೂರು ರಾಜ್ಯಗಳಲ್ಲಿ ವರದಿಯಾಗಿವೆ. ಜೊತೆಗೆ ಅಲೋರ್ ಸೆಟಾರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು (Alor Setar Magistrate’s Court) ಅವನಿಗೆ 12,000 ರಿಂಗ್‌ಗಿಟ್ (ringgit) ($ 2,864) ದಂಡ ವಿಧಿಸಿದೆ.