AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಳವೆ ಬಾವಿಯಲ್ಲಿ ಸಿಕ್ಕಿಕೊಂಡವನನ್ನ ಕಾಪಾಡಿದ್ದು ಅವನದೇ ಡೊಳ್ಳು ಹೊಟ್ಟೆ!

ವ್ಯಕ್ತಿಯೊಬ್ಬ ತನ್ನ ಡೊಳ್ಳು ಹೊಟ್ಟೆಯಿಂದಾಗಿ ಚಿಕ್ಕ ಕೊಳವೆ ಬಾವಿಯಲ್ಲಿ ಮುಳುಗಿ ಸಾವಪ್ಪುವುದನ್ನು ತಪ್ಪಿಸಿಕೊಂಡ ಘಟನೆ ಚೀನಾದಲ್ಲಿ ನಡೆದಿದೆ. 28 ವರ್ಷದ ಲಿಯು ಎಂಬ ವ್ಯಕ್ತಿ ಚೀನಾದ ಹೆನಾನ್ ಪ್ರಾಂತದ ಫುಲಿಯುಡಿಯನ್ ಗ್ರಾಮದಲ್ಲಿ ತನ್ನ ಕುಟುಂಬದೊಂದಿಗೆ ನೆಲೆಸಿದ್ದಾನೆ. ಮನೆಯ ಮುಂದೆ ಇದ್ದ ಬಾವಿಯ ಮೇಲೆ ಹೊದಿಸಲಾಗಿದ್ದ ಸಣ್ಣ ಮರದ ಹಲಗೆ ಮುರಿದ ಕಾರಣದಿಂದಾಗಿ ಆ ಯುವಕ ಬಾವಿಯೊಳಗೆ ಸಿಲುಕಿಕೊಂಡಿದ್ದಾನೆ. ಅದೃಷ್ಟವಶಾತ್ ಬಾವಿಯ ಅಗಲ ಚಿಕ್ಕದಿದ್ದು ಯುವಕನ ಹೊಟ್ಟೆ ಬಾವಿ ಅಗಲಕ್ಕಿಂತ ದೊಡ್ಡದಾಗಿದ್ದರಿಂದ ಯುವಕ ಬಾವಿಯಲ್ಲಿ ಮುಳುಗುವ ಗಂಡಾಂತರದಿಂದ ತಪ್ಪಿಸಿಕೊಂಡಿದ್ದಾನೆ. […]

ಕೊಳವೆ ಬಾವಿಯಲ್ಲಿ ಸಿಕ್ಕಿಕೊಂಡವನನ್ನ ಕಾಪಾಡಿದ್ದು ಅವನದೇ ಡೊಳ್ಳು ಹೊಟ್ಟೆ!
ಸಾಧು ಶ್ರೀನಾಥ್​
|

Updated on:Aug 14, 2020 | 2:04 PM

Share

ವ್ಯಕ್ತಿಯೊಬ್ಬ ತನ್ನ ಡೊಳ್ಳು ಹೊಟ್ಟೆಯಿಂದಾಗಿ ಚಿಕ್ಕ ಕೊಳವೆ ಬಾವಿಯಲ್ಲಿ ಮುಳುಗಿ ಸಾವಪ್ಪುವುದನ್ನು ತಪ್ಪಿಸಿಕೊಂಡ ಘಟನೆ ಚೀನಾದಲ್ಲಿ ನಡೆದಿದೆ.

28 ವರ್ಷದ ಲಿಯು ಎಂಬ ವ್ಯಕ್ತಿ ಚೀನಾದ ಹೆನಾನ್ ಪ್ರಾಂತದ ಫುಲಿಯುಡಿಯನ್ ಗ್ರಾಮದಲ್ಲಿ ತನ್ನ ಕುಟುಂಬದೊಂದಿಗೆ ನೆಲೆಸಿದ್ದಾನೆ. ಮನೆಯ ಮುಂದೆ ಇದ್ದ ಬಾವಿಯ ಮೇಲೆ ಹೊದಿಸಲಾಗಿದ್ದ ಸಣ್ಣ ಮರದ ಹಲಗೆ ಮುರಿದ ಕಾರಣದಿಂದಾಗಿ ಆ ಯುವಕ ಬಾವಿಯೊಳಗೆ ಸಿಲುಕಿಕೊಂಡಿದ್ದಾನೆ.

ಅದೃಷ್ಟವಶಾತ್ ಬಾವಿಯ ಅಗಲ ಚಿಕ್ಕದಿದ್ದು ಯುವಕನ ಹೊಟ್ಟೆ ಬಾವಿ ಅಗಲಕ್ಕಿಂತ ದೊಡ್ಡದಾಗಿದ್ದರಿಂದ ಯುವಕ ಬಾವಿಯಲ್ಲಿ ಮುಳುಗುವ ಗಂಡಾಂತರದಿಂದ ತಪ್ಪಿಸಿಕೊಂಡಿದ್ದಾನೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ, ಐದು ಜನರ ಅಗ್ನಿಶಾಮಕ ದಳದ ತಂಡವು, ಬಾವಿಗೆ ಸಿಕ್ಕಿ ಹಾಕಿ ಕೊಂಡಿದ್ದ ಯುವಕನ ಸೊಂಟದ ಸುತ್ತಲೂ ಹಗ್ಗವನ್ನು ಕಟ್ಟಿ, ಅಂತಿಮವಾಗಿ ಅವನನ್ನು ಬಾವಿಯಿಂದ ಮೇಲೆತ್ತುವ ಸಾಹಸದಲ್ಲಿ ಯಶಸ್ವಿಯಾಗಿದ್ದಾರೆ. ಯುವಕನ ಹೊಟ್ಟೆ ತುಂಬಾ ದಪ್ಪವಾಗಿರುವುದರಿಂದ ಆತ ಬಾವಿಯಲ್ಲಿ ಮುಳುಗಿ ಸಾವನ್ನಪ್ಪುವುದು ತಪ್ಪಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.

Published On - 1:53 pm, Fri, 14 August 20