Top News: ಕೊರೊನಾ ಮರೆತು ಬೀಚ್ನಲ್ಲಿ ಮೋಜು ಮಾಡುತ್ತಿದ್ದವರಿಗೆ ಬಿತ್ತು ಫೈನ್!
ಬ್ರೆಜಿಲ್ನಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದರೂ ಸಹ, ಜನ ಮಾತ್ರ ಇನ್ನೂ ಬುದ್ಧಿನೇ ಕಲೀತಿಲ್ಲ. ರಾಜಧಾನಿ ರಿಯೋ ಡಿಜನೇರಿಯಾದಲ್ಲಿ ಸೋಂಕಿನ ಭೀತಿ ಇಲ್ಲದಂತೆ ಬೀಚ್ಗಳಲ್ಲಿ ಗುಂಪು ಗುಂಪಾಗಿ ಜಮಾಯಿಸಿದ್ದಾರೆ. ಮಾಸ್ಕ್ ಧರಿಸದೇ ಬೀಚ್ಗೆ ದಾಂಗುಡಿ ಇಟ್ಟ ಜನರಿಗೆ ಸ್ಥಳೀಯ ಆಡಳಿತ ವರ್ಗ ಬಿಸಿ ಮುಟ್ಟಿಸಿದೆ. ಮಾಸ್ಕ್ ಧರಿಸದವರಿಂದ ಫೈನ್ ವಸೂಲಿ ಮಾಡಿದ್ರು. ಕೊರೊನಾ ‘ವೈರಿ’ಸ್ ವಿಶ್ವದಲ್ಲಿ ಕೊರೊನಾ ವೈರಸ್ನ ಅಟ್ಟಹಾಸಕ್ಕೆ ಕೊನೆಯೇ ಇಲ್ಲದಂತಾಗಿದ್ದು, ಸೋಂಕಿತರ ಸಂಖ್ಯೆ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಜಗತ್ತಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1 ಕೋಟಿ 3 […]
ಬ್ರೆಜಿಲ್ನಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದರೂ ಸಹ, ಜನ ಮಾತ್ರ ಇನ್ನೂ ಬುದ್ಧಿನೇ ಕಲೀತಿಲ್ಲ. ರಾಜಧಾನಿ ರಿಯೋ ಡಿಜನೇರಿಯಾದಲ್ಲಿ ಸೋಂಕಿನ ಭೀತಿ ಇಲ್ಲದಂತೆ ಬೀಚ್ಗಳಲ್ಲಿ ಗುಂಪು ಗುಂಪಾಗಿ ಜಮಾಯಿಸಿದ್ದಾರೆ. ಮಾಸ್ಕ್ ಧರಿಸದೇ ಬೀಚ್ಗೆ ದಾಂಗುಡಿ ಇಟ್ಟ ಜನರಿಗೆ ಸ್ಥಳೀಯ ಆಡಳಿತ ವರ್ಗ ಬಿಸಿ ಮುಟ್ಟಿಸಿದೆ. ಮಾಸ್ಕ್ ಧರಿಸದವರಿಂದ ಫೈನ್ ವಸೂಲಿ ಮಾಡಿದ್ರು.
ಕೊರೊನಾ ‘ವೈರಿ’ಸ್ ವಿಶ್ವದಲ್ಲಿ ಕೊರೊನಾ ವೈರಸ್ನ ಅಟ್ಟಹಾಸಕ್ಕೆ ಕೊನೆಯೇ ಇಲ್ಲದಂತಾಗಿದ್ದು, ಸೋಂಕಿತರ ಸಂಖ್ಯೆ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಜಗತ್ತಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1 ಕೋಟಿ 3 ಲಕ್ಷದ 36 ಸಾವಿರದ 587ಕ್ಕೆ ಏರಿಕೆಯಾಗಿದೆ. ವೈರಸ್ನಿಂದಾಗಿ 5 ಲಕ್ಷದ 71 ಸಾವಿರದ 574 ಜನರು ಮೃತಪಟ್ಟಿದ್ದಾರೆ.
ಅಮೆರಿಕದಲ್ಲಿ ನಿಲ್ಲದ ಸೋಂಕು ಕೊರೊನಾ ವೈರಸ್ ಅಮೆರಿಕವನ್ನೇ ಬಲಿಪೀಠವನ್ನಾಗಿಸಿಕೊಂಡಿದ್ದು, ಸೋಂಕಿನ ಸುನಾಮಿಯ ಇನ್ನೂ ತನ್ನ ಅಬ್ಬರ ನಿಲ್ಲಿಸಿಲ್ಲ. ದೇಶದಲ್ಲಿ ಸೋಂಕಿತರ ಸಂಖ್ಯೆ 33,01,820 ಜನರಿಗೆ ಸೋಂಕು ಅಂಟಿದ್ರೆ, 1,35,171 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸತತ ಐದಾರು ದಿನಗಳಿಂದ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 60 ಸಾವಿರ ದಾಟುತ್ತಿದ್ದು, 24 ಗಂಟೆಗಳ ಅವಧಿಯಲ್ಲಿ ಈ ಪರಿ ಸೋಂಕು ಹಬ್ಬುತ್ತಿರೋದು ಆತಂಕಕ್ಕೆ ಕಾರಣವಾಗಿದೆ.
ಅರ್ಜೆಂಟಿನಾದಲ್ಲಿ ಟೆನ್ಷನ್ ಅರ್ಜೆಂಟಿನಾದಲ್ಲೂ ಕೊರೊನಾ ವೈರಸ್ ತನ್ನ ವಿಷಜಾಲವನ್ನ ವ್ಯಾಪಿಸುತ್ತಲೇ ಇದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷ ರೀಚ್ ಆಗಿದ್ದು, ಸಾವಿನ ಸಂಖ್ಯೆ 1,845ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ 55 ಸಾವಿರಕ್ಕೂ ಅಧಿಕ ಮಂದಿ ಇನ್ನೂ ಆಸ್ಪತ್ರೆಯಲ್ಲಿ ನರಳಾಡುತ್ತಿದ್ರೆ, 42 ಸಾವಿರಕ್ಕೂ ಹೆಚ್ಚಿನ ಸೋಂಕಿತರು ಗುಣಮುಖರಾಗಿ, ಡಿಸ್ಚಾರ್ಜ್ ಆಗಿದ್ದಾರೆ.735 ಸೋಂಕಿತರ ಸಂಖ್ಯೆ ತೀರ ಗಂಭೀರವಾಗಿದೆ.
ಫ್ಲೊರಿಡಾದಲ್ಲಿ ಸೋಂಕಿನ ಕೆಂಡ ಅಮೆರಿಕದಲ್ಲಿ ವೈರಸ್ನಿಂದ ಇಡೀ ದೇಶವೇ ತತ್ತರಿಸಿ ಹೋಗಿದ್ರೆ, ಫ್ಲೊರಿಡಾ ಒಂದರಲ್ಲೇ ಸೋಂಕು ಅಬ್ಬರಿಸುತ್ತಿದೆ. ನಿನ್ನೆ ಒಂದೇ ದಾಖಲೆಯ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಅಮೆರಿಕದಲ್ಲಿ ಬೇಱವ ರಾಜ್ಯಕ್ಕಿಂತಲೂ ಹೆಚ್ಚಾಗಿ ಅಂದ್ರೆ, ಒಂದೇ ದಿನ 15 ಸಾವಿರ ಸೋಂಕಿತರು ಪತ್ತೆಯಾಗಿದ್ದಾರೆ. 45ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಫ್ಲೊರಿಡಾದಲ್ಲಿ 2,69,811 ಜನರಿಗೆ ಸೋಂಕು ತಗುಲಿದೆ.
ಸೋಂಕಿನ ‘ಸುನಾಮಿ’ ಬ್ರೆಜಿಲ್ನಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 18,66,176 ಕ್ಕೆ ಏರಿಕೆಯಾಗಿದ್ರೆ, ಸೋಂಕಿನಿಂದಾಗಿ 72 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ. 5,80,513 ಜನರು ಸೋಂಕಿನಿಂದ ಪರದಾಟ ನಡೆಸಿದ್ದು,12,13,512 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಸೇರಿದಂತೆ ಎಲ್ಲರನ್ನೂ ಬಿಡದೇ ವೈರಸ್ ವಕ್ಕರಿಸಿಕೊಳ್ತಿರೋದು ಮತ್ತಷ್ಟು ಭೀತಿ ಹೆಚ್ಚಿಸುವಂತೆ ಮಾಡಿದೆ.
ತಾಯ್ನಾಡಿಗೆ ವಲಸೆ ಕಾರ್ಮಿಕರು ಕೊರೊನಾ ವೈರಸ್ನಿಂದಾಗಿ ಕೆಲಸ ವಿಲ್ಲದೆ ಕಂಗಾಲ್ ಆಗಿದ್ದ ವಲಸೆ ಕಾರ್ಮಿಕರಿಗೆ ಕೊನೆಗೂ ತಾಯ್ನಾಡಿಗೆ ಮರಳಲು ಕಾಲ ಕೂಡಿ ಬಂದಿದೆ. ಹೌದು, ಕೊಲಂಬಿಯಾದಲ್ಲೇ ಸಿಲುಕಿದ್ದ ವೆನೆಜುವೆಲಾ ವಲಸೆ ಕಾರ್ಮಿಕರು ತಾಯ್ನಾಡಿಗೆ ತೆರಳಲು ವ್ಯವಸ್ಥೆ ಮಾಡಲಾಗಿದೆ. ಲಾಕ್ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರಿಗೆ ಕೊಲಂಬಿಯಾ ಸರ್ಕಾರ ನಿರಾಶ್ರಿತ ತಾಣದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು.
ಹೈಟಿಯಲ್ಲಿ ಚರ್ಚ್ಗಳು ಓಪನ್ ಕೊರೊನಾ ವೈರಸ್ನಿಂದಾಗಿ ಹೈಟಿ ದೇಶದಲ್ಲೂ ಹೈಟೆನ್ಷನ್ ಶುರುವಾಗಿತ್ತು. ದೇಶದಲ್ಲಿ ಸೋಂಕಿತರ ಸಂಖ್ಯೆ 6,727 ಜನರು ಸೋಂಕಿಗೆ ಸಿಲುಕಿದ್ರೆ, 139 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ, ಕಳೆದ ಮಾರ್ಚ್ನಿಂದ ಚರ್ಚ್ಗಳು ಬಂದ್ ಆಗಿದ್ವು. ಲಾಕ್ಡೌನ್ ಸಡಿಲಿಕೆ ಬಳಿಕ ಪೋರ್ಟ್ ಉ ಪ್ರಿನ್ಸ್ನಲ್ಲಿ ಚರ್ಚ್ಗಳು ಓಪನ್ ಆಗಿದ್ದು, ಕ್ರೈಸ್ತ ಬಾಂಧವರು ಚರ್ಚ್ಗಳಲ್ಲಿ ಪ್ರಾರ್ಥನೆ ಸಲ್ಲಿಸಿದ್ರು.
ಮೆಕ್ಸಿಕೋ ಮರಣಮೃದಂಗ ಮೆಕ್ಸಿಕೋದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು, ಸರ್ಕಾರ ಸೋಂಕು ನಿಯಂತ್ರಿಸಲಾಗದೇ ಪರದಾಟ ನಡೆಸಿದೆ. ಸೋಂಕಿತರ ಸಂಖ್ಯೆ 3 ಲಕ್ಷಕ್ಕೆ ಏರಿಕೆಯಾಗಿದ್ರೆ, 24 ಗಂಟೆಗಳ ಅವಧಿಯಲ್ಲಿ 53,423 ಸೋಂಕಿತರು ಪತ್ತೆಯಾಗಿದ್ದಾರೆ. 35 ಸಾವಿರಕ್ಕೂ ಅಧಿಕ ಜನರು ಉಸಿರು ನಿಲ್ಲಿಸಿದ್ದಾರೆ. ಜನರು ಫೇಸ್ ಮಾಸ್ಕ್ ಧರಿಸದೇ ಓಡಾಡುತ್ತಿದ್ದು, ಅವರನ್ನ ಕ್ಯಾಮರಾದಲ್ಲಿ ಸೆರೆ ಹಿಡಿದು, ದಂಡ ವಿಧಿಸಲಾಗುತ್ತಿದೆ.