ಯದುವೀರ್ ಒಡೆಯರ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ

ಮೈಸೂರು ರಾಜವಂಶಸ್ಥ ಯದುವೀರ್, ನನ್ನ ಹೆಸರು ಹಾಗು  ಭಾವಚಿತ್ರವನ್ನು ಬಳಸಿ ಯಾರೋ ಖಾತೆ ತೆರೆದಿದ್ದಾರೆ ಎಂದು ಟಿವಿ9ಗೆ ಸ್ಪಷ್ಟಪಡಿಸಿದ್ದಾರೆ.

ಯದುವೀರ್ ಒಡೆಯರ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ
ಮೈಸೂರು ರಾಜವಂಶಸ್ಥ ಯದುವೀರ್, ನಕಲಿ ಟ್ವಿಟ್ಟರ್ ಖಾತೆ
sandhya thejappa

|

Feb 05, 2021 | 11:38 AM

ಮೈಸೂರು: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆಯನ್ನು ತೆರೆದಿದ್ದು, ಯದುವೀರ್ ಈ ಬಗ್ಗೆ ದೂರನ್ನು ದಾಖಲಿಸಿದ್ದಾರೆ.

ಟ್ವಿಟ್ಟರ್ ಖಾತೆ ನನ್ನದಲ್ಲ ಎಂದು ಟಿವಿ9ಗೆ ಸ್ಪಷ್ಟಪಡಿಸಿದ ಮೈಸೂರು ರಾಜವಂಶಸ್ಥ ಯದುವೀರ್, ನನ್ನ ಹೆಸರು ಹಾಗು  ಭಾವಚಿತ್ರವನ್ನು ಬಳಸಿ ಯಾರೋ ಖಾತೆ ತೆರೆದಿದ್ದಾರೆ. ಅವರೇ ಪೋಸ್ಟ್ ಸಹಾ ಮಾಡಿರುತ್ತಾರೆ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ನಾನು ದೂರನ್ನು ದಾಖಲಿಸಿದ್ದೇನೆ ಎಂದರು. ಪದೇ ಪದೇ ಈ ರೀತಿ ನಕಲಿ ಖಾತೆ ಸೃಷ್ಟಿ ಮಾಡಲಾಗುತ್ತಿದೆ. ಇದನ್ನು ಯಾರು ನಂಬಬೇಡಿ ಎಂದು ಟಿವಿ9 ಮೂಲಕ ಸಾರ್ವಜನಿಕರಿಗೆ ಮನವಿ ಮಾಡಿದರು.

ಧಾರವಾಡದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನಿರ್ಮಿಸಿದ ಶಾಲೆಗೆ ಕಾಯಕಲ್ಪ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada