ಹುಂಜಗಳಿಗೂ ಹುಟ್ಟುಹಬ್ಬ..; ಕೇಕ್​ ಕತ್ತರಿಸಿ ಸಂಭ್ರಮದಿಂದ ಆಚರಿಸಿದ ಕುಟುಂಬ !

ಮೇಘನಾ ಲಂಗರಖಂಡೆ ಕುಟುಂಬಸ್ಥರಿಂದ ಈ ವಿಶಿಷ್ಟ ಹುಟ್ಟುಹಬ್ಬ ಆಚರಣೆ ನಡೆದಿದ್ದು, ತಮ್ಮ ಮನೆಯಲ್ಲಿ ಸಾಕಿದ ಹುಂಜಗಳಿಗೆ ಶೇರು ಹಾಗೂ ವೀರು ಎಂದು ಹೆಸರಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಇದು ಹುಂಜಗಳ ಐದನೇ ಹುಟ್ಟುಹಬ್ಬದ ಸಂಭ್ರಮವಾಗಿದೆ.

ಹುಂಜಗಳಿಗೂ ಹುಟ್ಟುಹಬ್ಬ..; ಕೇಕ್​ ಕತ್ತರಿಸಿ ಸಂಭ್ರಮದಿಂದ ಆಚರಿಸಿದ ಕುಟುಂಬ !
ಹುಂಜಗಳ ಜನ್ಮದಿನಾಚರಣೆಯಲ್ಲಿ ಕುಟುಂಬಸ್ಥರು
pruthvi Shankar

|

Dec 21, 2020 | 12:38 PM

ಬೆಳಗಾವಿ: ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ನೆಚ್ಚಿನ ಪ್ರಾಣಿಗಳ ಹುಟ್ಟುಹಬ್ಬವನ್ನು ತಮ್ಮ ಕುಟುಂಬದ ಸದಸ್ಯರೊಬ್ಬರ ಜನುಮ ದಿನ ಎಂಬಂತೆ ಸಡಗರದಿಂದ ಆಚರಿಸುವುದು ತೀರ ಸಾಮಾನ್ಯವಾಗಿದೆ..ಆದರೆ ಇಲ್ಲೊಂದು ಕುಟುಂಬ ಸ್ವಲ್ಪ ವಿಭಿನ್ನವಾಗಿ ಮನೆಯಲ್ಲಿ ಸಾಕಿದ್ದ ಹುಂಜಗಳ ಬರ್ತ್​ ಡೇಯನ್ನು ಸಂಭ್ರಮದಿಂದ ಆಚರಿಸಿದೆ.. !

ಬೆಳಗಾವಿಯ ಮಾಳಿಗಲ್ಲಿಯ  ಮೇಘನಾ ಲಂಗರಖಂಡೆ ಕುಟುಂಬಸ್ಥರಿಂದ ಈ ವಿಶಿಷ್ಟ ಹುಟ್ಟುಹಬ್ಬ ಆಚರಣೆ ನಡೆದಿದೆ. ತಮ್ಮ ಮನೆಯಲ್ಲಿ ಸಾಕಿದ ಹುಂಜಗಳಿಗೆ ಶೇರು ಹಾಗೂ ವೀರು ಅಂತಾ ಹೆಸರಿಟ್ಟಿದ್ದು, ಇವುಗಳ 5ನೇ ವರ್ಷದ ಜನ್ಮದಿನವನ್ನು ಕೇಕ್​ ಕತ್ತರಿಸಿ, ಸಂಭ್ರಮದಿಂದ ಆಚರಿಸಿದ್ದಾರೆ. ಕೇಕ್​ ಮೇಲೆ ಕೂಡ ಹುಂಜಗಳ ಚಿತ್ರವನ್ನೇ ನಮೂದಿಸಿದ್ದನ್ನು ನೋಡಬಹುದು..  ಹುಂಜಗಳ ಹುಟ್ಟುಹಬ್ಬ ಆಚರಣೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್​ ವೈರಲ್ ಆಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada