ವಿದ್ಯುತ್ ಸ್ಪರ್ಶಿಸಿ ಯುವ ರೈತ ಸಾವು, ಎಲ್ಲಿ?

ಹಾವೇರಿ: ಜಮೀನಿಗೆ ನೀರು ಹಾಯಿಸಲು ಹೋಗಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ರೈತ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಲಗುಂದ ಗ್ರಾಮದಲ್ಲಿ ನೆಡೆದಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಲಗುಂದ ಗ್ರಾಮದ ನಾಗಪ್ಪ ಹೊಂಕಣ (41) ಮೃತ ದುರ್ದೈವಿ. ತನ್ನ ಜಮೀನಿನಲ್ಲಿ ಕೊರೆಸಿದ್ದ ಬೋರ್​ ವೆಲ್ ಸ್ಟಾರ್ಟ್ ಮಾಡಲು ಹೋಗಿದ್ದ ನಾಗಪ್ಪ ಹೊಂಕಣನವರ ಅಜಾಗರೂಕತೆಯಿಂದ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ. ಸ್ಥಳಕ್ಕಾಗಮಿಸಿದ ಆಡೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು […]

ವಿದ್ಯುತ್ ಸ್ಪರ್ಶಿಸಿ ಯುವ ರೈತ ಸಾವು, ಎಲ್ಲಿ?

Updated on: Jul 20, 2020 | 3:01 PM

ಹಾವೇರಿ: ಜಮೀನಿಗೆ ನೀರು ಹಾಯಿಸಲು ಹೋಗಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ರೈತ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಲಗುಂದ ಗ್ರಾಮದಲ್ಲಿ ನೆಡೆದಿದೆ.

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಲಗುಂದ ಗ್ರಾಮದ ನಾಗಪ್ಪ ಹೊಂಕಣ (41) ಮೃತ ದುರ್ದೈವಿ. ತನ್ನ ಜಮೀನಿನಲ್ಲಿ ಕೊರೆಸಿದ್ದ ಬೋರ್​ ವೆಲ್ ಸ್ಟಾರ್ಟ್ ಮಾಡಲು ಹೋಗಿದ್ದ ನಾಗಪ್ಪ ಹೊಂಕಣನವರ ಅಜಾಗರೂಕತೆಯಿಂದ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ. ಸ್ಥಳಕ್ಕಾಗಮಿಸಿದ ಆಡೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.