ದಾವಣಗೆರೆ: ಕರಡಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ರೈತ ಸಾವು

| Updated By: Skanda

Updated on: Dec 03, 2020 | 12:45 PM

ಗ್ರಾಮದ ನಿವಾಸಿ ಮಲ್ಲೇಶಪ್ಪ (62) ಸಾವನ್ನಪ್ಪಿದ ರೈತನಾಗಿದ್ದು, 25 ದಿನಗಳ ಹಿಂದೆ ಮಲ್ಲೇಶಪ್ಪ ತನ್ನ ಜಮೀನಿನಲ್ಲಿ ಕರಡಿ ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡಿದ್ದರು. ಇವರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ದಾವಣಗೆರೆ: ಕರಡಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ರೈತ ಸಾವು
Follow us on

ದಾವಣಗೆರೆ: ಕರಡಿ ದಾಳಿಯಿಂದ ಗಾಯಗೊಂಡಿದ್ದ ರೈತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹನಮಂತಾಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಮಲ್ಲೇಶಪ್ಪ (62) ಸಾವನ್ನಪ್ಪಿದ ರೈತ. 25 ದಿನಗಳ ಹಿಂದೆ ಮಲ್ಲೇಶಪ್ಪ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಕರಡಿ ಅವರ ಮೇಲೆ ದಾಳಿ ನಡೆಸಿತ್ತು. ಇವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಇಂದು ನಸುಕಿನಲ್ಲಿ ಮೃತಪಟ್ಟರು.

ಅರಣ್ಯ ಇಲಾಖೆ ವಿರುದ್ಧ ರೈತನ ಸಂಬಂಧಿಗಳು ತೀವ್ರ ಆಕ್ರೋಶ ಹೊರಹಾಕಿದ್ದು, ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆ ಮಾಡಲು ನಿರ್ಧಾರ ಮಾಡಿದ್ದಾರೆ.

Published On - 10:47 am, Sun, 29 November 20