ಸ್ಥಳೀಯವಾಗಿ ಸಿಗುವ ವಸ್ತುಗಳಿಂದ ವಿದ್ಯುತ್ ಉತ್ಪಾದನೆ.. ಮಂಡ್ಯದಲೊಬ್ಬ ರೈತ ವಿಜ್ಞಾನಿ

|

Updated on: Dec 23, 2020 | 12:49 PM

ಆತ ಓದಿದ್ದು 8ನೇ ತರಗತಿ, ಮಾಡ್ತಿರೋದು ಬೇಸಾಯ. ಆದರೆ ಈತನ ಸಂಶೋಧನೆಗಳು ಯಾವುದೇ ವಿಜ್ಞಾನಿಗೂ ಕಡಿಮೆ ಇಲ್ಲ. ಮೂರ್ನಾಲ್ಕು ವರ್ಷಗಳಲ್ಲಿ ಸಾಕಷ್ಟು ಸಂಶೋಧನೆ ಮಾಡಿರುವ ಈತನ ಸಾಧನೆ ಬಗ್ಗೆ ವಿವರಿಸೋದಕ್ಕೆ ತುಂಬಾ ಇದೆ. ಅದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಸ್ಥಳೀಯವಾಗಿ ಸಿಗುವ ವಸ್ತುಗಳಿಂದ ವಿದ್ಯುತ್ ಉತ್ಪಾದನೆ.. ಮಂಡ್ಯದಲೊಬ್ಬ ರೈತ ವಿಜ್ಞಾನಿ
ರೈತ ಮಂಜೇಗೌಡ
Follow us on

ಮಂಡ್ಯ: ಕೆ.ಆರ್.ಪೇಟೆ ತಾಲೂಕು ಕೋಮನಹಳ್ಳಿಯ ಮಂಜೇಗೌಡ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇವ್ರು ಮಾಡಿದ ಸಾಧನೆಗಳು ಎಲ್ಲರ ಗಮನ ಸೆಳೆಯುತ್ತಿದೆ. ತಮ್ಮ ಸಂಶೋಧನೆಗಳಿಂದಲೇ ಮಂಜೇಗೌಡ ಸುತ್ತಮುತ್ತಲ ಊರುಗಳಲ್ಲಿ ಫುಲ್ ಫೇಮಸ್ ಕೂಡ ಆಗಿದ್ದಾರೆ.

ಅಂದಹಾಗೆ 8ನೇ ತರಗತಿ ಓದಿರುವ ಮಂಜೇಗೌಡ ತಮಗಿರುವ ಜಮೀನಿನಲ್ಲೇ ವ್ಯವಸಾಯ ಮಾಡಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಸಂಶೋಧನೆಯ ಆಸಕ್ತಿ ಹೊಂದಿರುವ ಇವರು ಎಲ್ಲರಂತೆ ವ್ಯವಸಾಯವನ್ನಷ್ಟೇ ಮಾಡಿಕೊಂಡು ಸುಮ್ಮನಿಲ್ಲ. ಬದಲಾಗಿ ತಮಗೆ ಸಮಯ ಸಿಕ್ಕಾಗಲೆಲ್ಲಾ ಬೋರ್ ವೆಲ್​ಗೆ ಬೀಳುವ ಮಕ್ಕಳ ರಕ್ಷಿಸುವ ರೋಬೋ ಸಂಶೋಧಿಸಿದ್ದರು. ಅದರಲ್ಲಿ ಒಂದಷ್ಟು ಯಶಸ್ಸನ್ನು ಕಂಡಿದ್ದರು ಮಂಜೇಗೌಡ.

ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಇವರು ತಮ್ಮದೇ ಜಮೀನಿನಲ್ಲಿ ವಿದ್ಯುತ್ ತಯಾರಿಕಾ ಘಟಕ ಸ್ಥಾಪನೆಗೆ ಮುಂದಾಗಿದ್ದಾರೆ. ಈ ಬಾರಿ ಉತ್ತಮ ಮಳೆಯಾಗಿ ಕೆರೆತುಂಬಿ ಹರಿಯುತ್ತಿದ್ದು ವೇಸ್ಟೇಜ್ ನೀರಿನಿಂದ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದಾರೆ. ಸ್ಥಳೀಯವಾಗಿಯೇ ಸಿಗುವ ವಸ್ತು ಬಳಕೆ ಮಾಡಿ ಅವ್ರು ವಿದ್ಯುತ್ ಉತ್ಪಾದಿಸುತ್ತಿದ್ದಾರೆ. ಇಷ್ಟೇ ಅಲ್ಲದೆ ಊರಿನ 10 ಬಡಕುಟುಂಬಗಳಿಗೆ ಉಚಿತವಾಗಿ ನೀಡುತ್ತಿದ್ದಾರೆ. ಜೊತೆಗೆ ಶಾಲೆ, ಹಾಲಿನ ಡೈರಿ ಹಾಗೂ ದೇವಾಲಯಕ್ಕೂ ಇವರು ನೀಡುತ್ತಿರುವ ವಿದ್ಯುತ್ ಬೆಳಕಾಗಿ ಉರಿಯುತ್ತಿದೆ.

ಮಂಜೇಗೌಡರಿಗೆ ಊರಿನಲ್ಲಿ ನಾಲ್ಕೈದು ಎಕರೆ ಭೂಮಿ ಇದೆ. ಅಲ್ಲಿ ಬಾಳೆ ಅಡಿಕೆ ಸೇರಿದಂತೆ ವಿವಿಧ ರೀತಿಯ ಮಿಶ್ರ ಬೇಸಾಯ ಮಾಡುತ್ತಿದ್ದಾರೆ. ಇವರ ಬೇಸಾಯಕ್ಕೂ ಇದೇ ವಿದ್ಯುತ್ ಬಳಸಿ ನೀರನ್ನ ಪಂಪ್ ಮಾಡಿಕೊಳ್ತಾರೆ. ವಾರದಲ್ಲಿ 1 ದಿನ ಪೂರ್ತಿ ಅಂದರೆ ದಿನದ 24 ಗಂಟೆ ಕಾಲ ವಿದ್ಯುತ್ ಬಳಸಿ ನೀರು ಪಂಪ್ ಮಾಡ್ತಾರೆ. ಸರ್ಕಾರ ರೈತರ ಪಂಪ್ ಸೆಟ್​ ಗಳಿಗೆ ದಿನಕ್ಕೆ 3 ಗಂಟೆ ವಿದ್ಯುತ್ ನೀಡುತ್ತಿದ್ದು, ಇವರು ತಮ್ಮದೇ ವಿದ್ಯುತ್ ಬಳಸಿ ದಿನದ 24 ಗಂಟೆಗಳ ಕಾಲ ಫ್ರೀಯಾಗಿ ವಿದ್ಯುತ್ ಪಡೆಯುತ್ತಿದ್ದಾರೆ.

ಒಟ್ನಲ್ಲಿ ಹಲವು ಸಂಶೋಧನೆಗಳನ್ನ ಮಾಡುವ ಮೂಲಕ ಮಂಜೇಗೌಡ ಈ ಭಾಗದಲ್ಲಿ ರೈತ ವಿಜ್ಞಾನಿ ಎಂದೇ ಹೆಸರುಗಳಿಸಿದ್ದು, ಅವರ ಸಾಧನೆ ಪಟ್ಟಿಗೆ ಈಗ ಮತ್ತೊಂದು ವಿಚಾರ ಸೇರ್ಪಡೆಯಾಗಿದೆ. ಇವರ ಸಂಶೋಧನೆಯನ್ನು ಸ್ಥಳೀಯವಾಗಿ ಬಳಸಿಕೊಂಡಿದ್ದೇ ಆದರೆ ಹಳ್ಳಿಗಳಲ್ಲಿನ ವಿದ್ಯುತ್ ಸಮಸ್ಯೆ ನಿವಾರಣೆ ಆಗೋದು ಗ್ಯಾರಂಟಿ.

Published On - 7:08 am, Wed, 23 December 20