Sign In

By signing in or creating an account, you agree with Associated Broadcasting Company's Terms & Conditions and Privacy Policy.

Explainer | ಕೀಟ-ಕ್ರಿಮಿ-ಕಳೆ ನಾಶಕ ಬಳಕೆಗೆ ಸಂಬಂಧಿಸಿದ ನಿಯಮಗಳೇನಿರಬಹುದು?

ಕೃಷಿಯಲ್ಲಿ ಬಳಸುವ ಕೀಟನಾಶಕಗಳು ನೇರವಾಗಿ ನಮ್ಮ ದೇಹಕ್ಕೆ ಸೇರದಿದ್ದರೂ, ನೀರಿನಿಂದ ಮಣ್ಣಿಗೆ, ಮಣ್ಣಿನಿಂದ ಗಿಡಕ್ಕೆ, ಗಿಡದಿಂದ ಫಲಕ್ಕೆ, ಫಲವನ್ನು ಸೇವಿಸಿದ ಜನರಿಗೆ ಹೀಗೆ ವಿಷ ಪೂರಿತ ಕೀಟನಾಶಕ ಮಾನವನ ದೇಹಕ್ಕೆ ಪ್ರವೇಶಿಸುತ್ತಿದೆ. ಸರಕಾರ ಜಾರಿಗೆ ತಂದ ಹೊಸ ಕಾಯ್ದೆಯ ವಿವರಗಳು ಮತ್ತು ಕ್ರಿಮಿನಾಶಕ ಬಳಕೆಯ ನಿಯಮಗಳು ಇಲ್ಲಿವೆ

Explainer | ಕೀಟ-ಕ್ರಿಮಿ-ಕಳೆ ನಾಶಕ ಬಳಕೆಗೆ ಸಂಬಂಧಿಸಿದ ನಿಯಮಗಳೇನಿರಬಹುದು?
Follow us
shruti hegde
|

Updated on: Dec 23, 2020 | 11:36 AM

ಇವತ್ತಿನ ಪರಿಸ್ಥಿತಿಯನ್ನು ಗಮನಿಸಿದರೆ, ಕೀಟನಾಶಕಗಳಿಲ್ಲದೇ ಉತ್ಪಾದನೆಯೇ ಇಲ್ಲ ಎನ್ನುವಂತಾಗಿದೆ. ಕೆಲವೊಂದು ಕಡೆಗಳಲ್ಲಿ ನೈಸರ್ಗಿಕ ಸಾವಯವ ಕೃಷಿಯ ಕುರಿತಾಗಿ ಮಾತುಗಳು ಕೇಳಿ ಬರುತ್ತಿದ್ದರೂ ಕೂಡಾ ಒಟ್ಟಾರೆಯಾಗಿ ಕೀಟನಾಶಕಗಳ ಸಿಂಪಡಣೆಯಿಂದ ಆಹಾರ ಉತ್ಪಾದನೆ ಹೆಚ್ಚಾಗಿದೆ.

ಕೃಷಿಯಲ್ಲಿ ಬಳಸುವ ಕೀಟನಾಶಕಗಳು ನೇರವಾಗಿ ನಮ್ಮ ದೇಹಕ್ಕೆ ಸೇರದಿದ್ದರೂ, ನೀರಿನಿಂದ ಮಣ್ಣಿಗೆ, ಮಣ್ಣಿನಿಂದ ಗಿಡಕ್ಕೆ, ಗಿಡದಿಂದ ಫಲಕ್ಕೆ, ಫಲವನ್ನು ಸೇವಿಸಿದ ಜನರಿಗೆ ಹೀಗೆ ವಿಷಪೂರಿತ ಕೀಟನಾಶಕ ಮಾನವನ ದೇಹಕ್ಕೆ ಪ್ರವೇಶಿಸುತ್ತಿದೆ. ಈ ನಿಟ್ಟಿನಲ್ಲಿ, ಕೀಟನಾಶಕಗಳನ್ನು ಬಳಸುವ ಕ್ರಮಗಳೇನು? ಕೀಟನಾಶಕದ ಕುರಿತಾಗಿ ಸರಕಾರ ತಂದಿರುವ ಹೊಸ ಮಸೂದೆಯೇನು? ಎಂಬೆಲ್ಲಾ ಪ್ರಶ್ನೆಗಳು ಎದುರಾಗುತ್ತವೆ.

ಕ್ರಿಟನಾಶಕ ವಿಷಕಾರಿ ವಸ್ತುಗಳು ಮತ್ತು ಅವುಗಳ ಶಿಸ್ತುಬದ್ಧ ಬಳಕೆಯಿಂದ, ಮಾನವ ತನ್ನ ಆರೋಗ್ಯದ ಮೇಲೆ ಉಂಟಾಗಬಹುದಾದ ಪರಿಣಾಮಗಳನ್ನು ತಡೆಗಟ್ಟುವುದರ ಜೊತೆಯಲ್ಲಿ ತನ್ನ ಬೆಳೆಯನ್ನು ಬಾಧಿಸುವ ಕೀಟ ರೋಗಗಳನ್ನು ನಾಶಪಡಿಸಬಹುದು. ಈ ನಿಟ್ಟಿನಲ್ಲಿ ಬಳಕೆದಾರರು ಅಥವಾ ರೈತರು ಕೆಲವು ನಿಯಮಗಳನ್ನು ಅನುಸರಿಸುವುದು ಅನಿವಾರ್ಯ.

ಇಲ್ಲಿವೆ ನೋಡಿ ಕೀಟನಾಶಕ ಬಳಕೆಯ ನಿಯಮಗಳು:

ಕೀಟ ನಾಶಕಗಳು ವಿಷಪೂರಿತವಾಗಿರುತ್ತದೆ. ಆದ್ದರಿಂದ ದೇಹದ ಭಾಗಗಳಿಗೆ ಕೀಟನಾಶಕಗಳು ತಾಕದಂತೆ ಎಚ್ಚರವಹಿಸುವುದು ಮುಖ್ಯ. ಕೀಟನಾಶಕ ಯಂತ್ರಗಳನ್ನು ಉಪಯೋಗಿಸುವಾಗ ಯಂತ್ರದ ಸಂಪೂರ್ಣ ಮಾಹಿತಿ ಮತ್ತು ಯಂತ್ರದಿಂದ ಕೀಟನಾಶಕ ಹೊರಚೆಲ್ಲದಂತೆ ನೋಡಿಕೊಳ್ಳಬೇಕು. ಕೀಟನಾಶಕ ಸಿಂಪಡಣೆಗೆ ಬಳಸಿದ ಯಂತ್ರಗಳನ್ನು ಸರಿಯಾಗಿ ಶುಚಿಗೊಳಿಸಿ ಇನ್ನಿತರ ಕೆಲಸಕ್ಕೆ ಬಳಸುವುದು ಒಳಿತು. ಹಾಗೂ ಸಾಕುಪ್ರಾಣಿಗಳಿಂದ ಕೀಟನಾಶಕ ಔಷಧವನ್ನು ದೂರವಿಡಿವುದು ಮುಖ್ಯ.

ತರಕಾರಿ, ಹಣ್ಣು ಬೇಳೆಗಳ ಮೇಲೆ ಸಿಂಪಡಣೆ ಮಾಡುವಾಗ ಮಾಗಿರುವ ಅಥವಾ ಕೊಯ್ಲಿಗೆ ಬಂದಿರುವ ಹಣ್ಣು ತರಕಾರಿಗಳನ್ನು ಕಟಾವು ಮಾಡಿದ ನಂತರ ಸಿಂಪಡಣೆ ಕಾರ್ಯ ಕೈಗೆತ್ತಿಕೊಳ್ಳುವುದು ಮುಖ್ಯ. ಸಿಂಪಡಣೆಯ ನಂತರ ಗಡುವು ಮಾಡಿದ ನಿರೀಕ್ಷಣಾ ಸಮಯ ಮುಗಿದ ಮೇಲೆಯೇ ಸಿಂಪಡಣೆಗೆ ಒಳಪಟ್ಟ ಗಿಡಗಳಿಂದ ಆಹಾರ ಪದಾರ್ಥಗಳನ್ನು ಉಪಯೋಗಿಸಬೇಕು.

ಸರಕಾರ ಜಾರಿಗೆ ತಂದ ಹೊಸ ಮಸೂದೆ:

ಕೀಟನಾಶಕಗಳ ಉತ್ಪಾದನೆಯಲ್ಲಿ ವಿಶ್ವದ ನಾಲ್ಕನೇ ಅತಿದೊಡ್ಡ ಸ್ಥಾನ ಭಾರತಕ್ಕಿದೆ. ಮನುಷ್ಯನ ಆರೋಗ್ಯದಲ್ಲಿ ಹಾಗೂ ನಿಸರ್ಗದಲ್ಲಿ ಆಗುತ್ತಿರುವ ದುಷ್ಪರಿಣಾಮಗಳಿಗೆ ಕಡಿವಾಣ ಹಾಕಲು ಕೇಂದ್ರ ಸರಕಾರವು ‘ಕೀಟನಾಶಕಗಳ ನಿರ್ವಹಣಾ ಮಸೂದೆ(ಪಿಎಂಬಿ)-2020’ ಅನ್ನು ಜಾರಿಗೊಳಿಸಿದೆ. ಹೆಚ್ಚು ಸುರಕ್ಷಿತವಾಗಿರುವ ಮತ್ತು ಪರಿಣಾಮಕಾರಿಯಾಗಿರುವ ಕೀಟನಾಶಕಗಳು ರೈತರಿಗೆ ಲಭಿಸುವ ನಿಟ್ಟಿನಲ್ಲಿ ಈ ಕಾಯ್ದೆ ಜಾರಿಗೆ ಬಂದಿದೆ.

ರೈತರು ತಮ್ಮ ಬೆಳೆಗೆ ಬೇಕಾದ ಉತ್ತಮ ಕೀಟನಾಶಕಗಳ ಬಳಕೆಗೆ ಅನುಕೂಲವಾಗುವಂತೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೀಟನಾಶಕಗಳ ಸಾಮರ್ಥ್ಯ, ದೌರ್ಬಲ್ಯ ಹಾಗೂ ಅಪಾಯಕಾರಿ ಅಂಶಗಳ ಸಂಪೂರ್ಣ ಮಾಹಿತಿ ಸಿಗುವಂತೆ ಹೊಸ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.

ಕೀಟನಾಶಕ ನಿರ್ವಹಣಾ ಮಸೂದೆ (ಪಿಎಂಬಿ)-2020:

ಕೀಟನಾಶಕವನ್ನು ಆಮದು, ರಫ್ತು ಮಾಡಿಕೊಳ್ಳುವಾಗ ಅಥವಾ ಉತ್ಪಾದಿಸುವಾಗ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಜೊತೆಗೆ ಕೀಟನಾಶಕದ ಸುರಕ್ಷತೆ, ಬಳಕೆಯ ವಿಧಾನ, ದಾಸ್ತಾನು ಸಂಗ್ರಹಿಸಲು ಇರುವ ಮೂಲ ಸೌಲಭ್ಯಗಳ ಕುರಿತಾಗಿ ಮಾಹಿತಿ ನೀಡಬೇಕಾಗುತ್ತದೆ. ಉತ್ಪಾದನೆಯಲ್ಲಿ ಕಡಿಮೆ ಗುಣಮಟ್ಟ ಅಥವಾ ಬೆಳೆ ನಾಶವಾದಲ್ಲಿ ಪರಿಹಾರ ನೀಡಲಾಗುತ್ತದೆ. ಉತ್ಪಾದಿಸಿದ ಕೀಟನಾಶಕಗಳ ಕುರಿತಾದ ಎಲ್ಲಾ ಮಾಹಿತಿಯು ಎಲ್ಲಾ ಭಾಷೆಗಳಲ್ಲಿ ಪೋರ್ಟ್​ಲ್​ನಲ್ಲಿ ಲಭ್ಯವಾಗುತ್ತದೆ. ಇದರಿಂದಾಗಿ ರೈತರು ತಮಗೆ ಸೂಕ್ತ ಎನಿಸುವ ಕೀಟನಾಶಕಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಜಾರಿಯಲ್ಲಿದ್ದ 1968ರ ಬದಲು ಕೀಟನಾಶಕ ನಿರ್ವಹಣಾ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.

1968ರ ಕಾಯ್ದೆ ಹಿಂಪಡೆಯಲು ಕಾರಣ:

ಕೀಟನಾಶಕಗಳಲ್ಲಿರುವ ವಿಷಪೂರಿತ ಅಂಶಗಳು ಮನುಷ್ಯ ಹಾಗೂ ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದವು. ಹೀಗಾಗಿ 2008ರಿಂದ ಕೀಟನಾಶಕ ನಿರ್ವಹಣಾ ಮಸೂದೆಯ ಬಗ್ಗೆ ಚರ್ಚೆಗಳು ಆರಂಭಗೊಂಡಿದ್ದವು. ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಕೇಂದ್ರ ಸರಕಾರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯು ಕೀಟನಾಶಕ ನಿರ್ವಹಣಾ ಮಸೂದೆ (ಪಿಎಂಬಿ)-2017ರ ಕರಡು ಪ್ರತಿಯನ್ನು 2018ರ ಫೆಬ್ರವರಿ 19ರಂದು ಬಿಡುಗಡೆ ಮಾಡಿತ್ತು. ಕೆಂದ್ರ ಸರಕಾರವು ನೂತನ ಮಸೂದೆಯನ್ನು ಸಿದ್ಧಪಡಿಸಿದ್ದು ಹೊಸ ಕಾಯ್ದೆ ಜಾರಿಗೆ ತಂದಿತು.

ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ