AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್

ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್

ರಾಮ್​, ಮೈಸೂರು
| Edited By: |

Updated on:Apr 25, 2025 | 11:34 AM

Share

ಮೈಸೂರಿನ ವಿನೋಬಾ ರಸ್ತೆಯಲ್ಲಿರುವ 109 ವರ್ಷದ ಹಳೆಯ ಕಟ್ಟಡದ ಮೇಲೆ ವಕ್ಫ್ ಬೋರ್ಡ್ ನೋಟಿಸ್ ನೀಡಿದೆ. ಕಡಬದ ನಾರಾಯಣ ಶೆಟ್ಟರ್ ಧರ್ಮ ಸ್ಟೂಡೆಂಟ್ ಹೋಂ ಎಂಬ 3,268 ಚದರಡಿ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿದೆ ಎಂದು ಆರೋಪಿಸಿ ನೋಟಿಸ್ ನೀಡಲಾಗಿದೆ. ಮೇ 9 ರೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ. ಈ ನೋಟಿಸ್ ವಿವಿಧ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ ಮತ್ತು ಪ್ರತಿಭಟನೆ ಯೋಜನೆಯಾಗಿದೆ.

ಮೈಸೂರು, ಏಪ್ರಿಲ್​ 25: ಮೈಸೂರಿನ (Mysore) ವಿನೋಬಾ ರಸ್ತೆಯಲ್ಲಿರುವ 109 ವರ್ಷದ ಹಳೆಯದಾದ ಕಟ್ಟಡದ ಮೇಲೆ ವಕ್ಫ್ ಬೋರ್ಡ್​ (Waqf Board) ಕರಿ ನೆರಳು ಬಿದ್ದಿದೆ. ಕಡಬದ ನಾರಾಯಣ ಶೆಟ್ಟರ್ ಧರ್ಮ ಸ್ಟೂಡೆಂಟ್ ಹೋಂ, ಬಿಸ್ಮಿಲ್ಲಾ ಷಾ ಖಾದ್ರಿ ಮಕಾನ್‌ ಎಂಬುವರಿಗೆ ಸೇರಿದ 3,268 ಚದರಡಿ ಆಸ್ತಿ ಒತ್ತುವರಿ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮೇ 9ರೊಳಗೆ ಉತ್ತರ ಕೊಡುವಂತೆ ನೋಟಿಸ್​ ನೀಡಿದೆ.

ಕಡಬದ ನಾರಾಯಣ ಶೆಟ್ಟರ್ ಧರ್ಮ ಸ್ಟೂಡೆಂಟ್ ಹೋಂ 1916ರಲ್ಲಿ ಕಟ್ಟಡದ ಉದ್ಘಾಟನೆಗೊಂಡಿದೆ. ಇದರ ಶಿಲಾಫಲಕ ಕಟ್ಟಡದ ಆವರಣದಲ್ಲಿದೆ. ವಕ್ಫ್​ ಬೋರ್ಡ್​ ನೀಡಿರುವ ನೋಟಿಸ್​ಗೆ ವಿವಿಧ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿದ್ದು, ಶುಕ್ರವಾರ (ಏ.25) ಪ್ರತಿಭಟನೆ ನಡೆಸಲಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: Apr 25, 2025 08:26 AM
Follow Us
Ram
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More