National Farmers Day 2020 ರೈತರಿಗೆ ಧನ್ಯವಾದ ತಿಳಿಸಿದ ‘ಒಡೆಯ’.. ನೀವೇ ನಿಜವಾದ ವೀರರು ಅಂದರು!
ಚಾಲೆಂಜಿಂಗ್ ಸ್ಟಾರ್ ದರ್ಶನ್ ರೈತರಿಗೆ ಧನ್ಯವಾದ ತಿಳಿಸಿದ್ದಾರೆ. ಇಂದು ರೈತ ದಿನಾಚರನೆ ಹಿನ್ನೆಲೆಯಲ್ಲಿ ನಟ ದರ್ಶನ್ ರೈತರು ನಿಜವಾದ ವೀರರು ಎಂದ ಟ್ವೀಟ್ ಮಾಡುವ ಮೂಲಕ ರೈತರಿಗೆ ಶುಭಾಶಯ ತಿಳಿಸಿದ್ದಾರೆ.
ಬೆಂಗಳೂರು: ರೈತರು, ಕೃಷಿ ಅಂದ್ರೆ ಸದಾ ಮಿಡಿಯುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ರೈತ ದಿನಾಚರಣೆ ಹಿನ್ನೆಲೆಯಲ್ಲಿ ರೈತಾಪಿ ವರ್ಗಕ್ಕೆ ಶುಭಾಶಯ ಕೋರಿದ್ದಾರೆ. ಅದಕ್ಕೂ ಮೊದಲು ಹೃದಯ ತುಂಬಿ ಧನ್ಯವಾದ ತಿಳಿಸಿದ್ದಾರೆ.
ಪ್ರಾಣಿಗಳ ಮೇಲೆ ವಿಶೇಷ ಪ್ರೀತಿ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ರೈತ ದಿನಾಚರಣೆ ಹಿನ್ನೆಲೆಯಲ್ಲಿ ರೈತರು ನಿಜವಾದ ವೀರರು ಎಂದು ಟ್ವೀಟ್ ಮಾಡಿ, ರೈತರಿಗೆ ಶುಭಾಶಯ ತಿಳಿಸಿದ್ದಾರೆ.
ರೈತರು ನಿಜವಾದ ವೀರರಾಗಿದ್ದಾರೆ. ಎಕೆಂದರೆ ಅವರು ಸಮರ್ಪಣೆ ಮತ್ತು ಶ್ರಮದಿಂದ, ಬಂಜರು ಭೂಮಿಯನ್ನು ಆಹಾರವನ್ನು ಉತ್ಪಾದಿಸುವ ಭೂವಿಯಾಗಿ ಪರಿವರ್ತಿಸಿ ಅವರು ತಮ್ಮ ಹೃದಯ ಮತ್ತು ಆತ್ಮವನ್ನು ಮಣ್ಣಿನಲ್ಲಿ ಇರಿಸಿ ಅದನ್ನು ಜೀವಿಸುತ್ತಾರೆ ಮತ್ತು ನಮಗೆ ಆಹಾರವನ್ನು ಕೊಡ್ತಾರೆ.
ಅವರ ಕಠಿಣ ಶ್ರಮಕ್ಕೆ, ಪ್ರಯತ್ನಕ್ಕೆ ಧನ್ಯವಾದ.. ಎಲ್ಲರೂ ಅವರಿಗೆ ನಮಸ್ಕರಿಸೋಣ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ರೈತ ದಿನಾಚರಣೆ ಪ್ರಯುಕ್ತ ರೈತರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಅವರ ಪ್ರಯತ್ನಕ್ಕೆ ಧನ್ಯವಾದಗಳು ಮತ್ತು ಅವರ ಕಠಿಣ ಪರಿಶ್ರಮಕ್ಕೆ ನಮಸ್ಕರಿಸೋಣ…. ರೈತ ದಿನಾಚರಣೆಯ ಶುಭಾಶಯಗಳು pic.twitter.com/gvnPKEuJvZ
— Darshan Thoogudeepa (@dasadarshan) December 23, 2020
Published On - 11:47 am, Wed, 23 December 20