‘ಜನರ ವಿಶ್ವಾಸ ಕಳೆದುಕೊಂಡ BSNLಗೆ ಭಾವಪೂರ್ಣ ಶ್ರದ್ಧಾಂಜಲಿ’: ರೈತ ಸಂಘದಿಂದ ಪ್ರತಿಭಟನೆ, ಯಾವೂರಲ್ಲಿ?
ಬ್ರಾಡ್ ಬ್ಯಾಂಡ್, ನೆಟ್ವರ್ಕ್ ಸಮಸ್ಯೆಯನ್ನು ಬಗೆ ಹರಿಸದ ಅಧಿಕಾರಿಗಳ ವಿರುದ್ದ ರೈತ ಸಂಘ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕೋಲಾರ: ನೆಟ್ವರ್ಕ್ ಸಮಸ್ಯೆಯನ್ನು ಸರಿಪಡಿಸುವಂತೆ ಆಗ್ರಹಿಸಿ ರೈತ ಸಂಘ ಕಾರ್ಯಕರ್ತರು ಬಿಎಸ್ಎನ್ಎಲ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಭಾರತದ ಅತಿ ದೊಡ್ಡ, ಪುರಾತನ ಬಿಎಸ್ಎನ್ಎಲ್ ನೆಟ್ವರ್ಕ್ BSNL ಸಮಸ್ಯೆಯಿಂದ ಜನ ಪರದಾಡುತ್ತಿದ್ದು, ಬ್ರಾಡ್ ಬ್ಯಾಂಡ್, ನೆಟ್ವರ್ಕ್ ಸಮಸ್ಯೆಯನ್ನು ಬಗೆಹರಿಸದ ಅಧಿಕಾರಿಗಳ ವಿರುದ್ದ ರೈತ ಸಂಘ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. BSNL ಅಧಿಕಾರಿಗಳ ಪ್ರತಿಕೃತಿ ಮೇಲೆ ‘ಜನರ ವಿಶ್ವಾಸ ಕಳೆದುಕೊಂಡ ಬಿಎಸ್ಎನ್ಎಲ್ಗೆ ಭಾವಪೂರ್ಣ ಶ್ರದ್ಧಾಂಜಲಿ’ ಎಂದು ಬರೆದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಅಧಿಕಾರಿಗಳು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ನಗರ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಹಲೋ.. ಹೇಳಿ ಕೇಳಿಸ್ತಿದೆ.. 4G ಮೊಬೈಲ್ ನೆಟ್ವರ್ಕ್ ಈಗ ಚಂದ್ರನ ಮೇಲೂ ಸಿಗುತ್ತಾ?
Published On - 1:28 pm, Fri, 29 January 21