AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ರೈತರ ಹೋರಾಟ: ಅದು ಮತ್ತೊಂದು CAA ಹೋರಾಟ ಆಗುತ್ತೆ ಅಷ್ಟೇ -ಸಂಸದ ಪ್ರತಾಪ್‌ ಸಿಂಹ

ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ಹೋರಾಟ ನಡೆಸುತ್ತಿದ್ದಾರೆ. ಇದು ಮತ್ತೊಂದು ಸಿಎಎ ಹೋರಾಟ ಆಗುತ್ತೆ ಅಷ್ಟೇ ಎಂದು ಮೈಸೂರಿನಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.

ದೆಹಲಿಯಲ್ಲಿ ರೈತರ ಹೋರಾಟ: ಅದು ಮತ್ತೊಂದು CAA ಹೋರಾಟ ಆಗುತ್ತೆ ಅಷ್ಟೇ -ಸಂಸದ ಪ್ರತಾಪ್‌ ಸಿಂಹ
ಸಾಧು ಶ್ರೀನಾಥ್​
|

Updated on: Dec 10, 2020 | 2:39 PM

Share

ಮೈಸೂರು: ಕೃಷಿ ಕಾಯಿದೆ ತಿದ್ದುಪಡಿ ವಿರೋಧಿಸಿ ರೈತರು ಹೋರಾಟ ನಡೆಸುತ್ತಿದ್ದಾರೆ. ಇದು ಮತ್ತೊಂದು ಸಿಎಎ ಹೋರಾಟ ಆಗುತ್ತೆ ಅಷ್ಟೇ ಎಂದು ಮೈಸೂರಿನಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ವಿಚಾರ ಸಂಬಂಧ ಮಾತನಾಡಿದ ಪ್ರತಾಪ್ ಸಿಂಹ ಇದು ಮತ್ತೊಂದು ಸಿಎಎ ಹೋರಾಟ ಆಗುತ್ತೆ ಎಂದಿದ್ದಾರೆ. ಸಿಎಎಯಿಂದ ಯಾವ ಮುಸ್ಲಿಮರಿಗೂ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದರೂ ಪ್ರತಿಭಟನೆ ಮಾಡಿದರು. ಈಗ ರೈತರಿಗೂ ಅಷ್ಟೇ.. ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳುತ್ತಿದ್ದರೂ ಪ್ರತಿಭಟನೆ ಮಾಡುತ್ತಿದ್ದಾರೆ.

ಪ್ರತಿಭಟನೆ ಉದ್ದೇಶ ಬೇರೆಯೇ ಇದ್ದಂತೆ ಕಾಣಿಸುತ್ತಿದೆ. ಪಂಜಾಬ್ ರೈತರು ದೆಹಲಿಗೆ ಬಂದು ಧರಣಿ ಮಾಡ್ತಿದ್ದಾರೆ. ಪಂಜಾಬ್ ರೈತರೇಕೆ ದೆಹಲಿಗೆ ಬಂದು ಧರಣಿ ಮಾಡ್ಬೇಕು. ಪಂಜಾಬ್‌ನಲ್ಲಿ ಹೋರಾಟ ಮಾಡಿದರೆ ನ್ಯಾಯ ಸಿಗಲ್ವಾ? ದೆಹಲಿಯಲ್ಲಿ ಹಲವು ದೇಶದ ರಾಯಭಾರಿ ಕಚೇರಿಗಳು ಇವೆ. ಕಚೇರಿಗಳಿಗೆ ನುಗ್ಗಿ ಪ್ರತಿಭಟನೆ ಮಾಡುವ ಉದ್ದೇಶವೇನು? ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

ಗೋವಿಗೆ ಮಾತ್ರ ನಾವು ತಾಯಿ ಸ್ಥಾನ ಕೊಟ್ಟಿರೋದು: ಇನ್ನು ಇದೇ ವೇಳೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಗೋಹತ್ಯೆ ನಿಷೇಧ ಕಾಯ್ದೆ ವಿಚಾರವಾಗಿಯೂ ಮಾತನಾಡಿದರು. ಕೇವಲ ಮೃಗಾಲಯದಲ್ಲಿನ ಪ್ರಾಣಿಗಳ ಆಹಾರದ ಬಗ್ಗೆ ಕಾಳಜಿ ಇದ್ದರೆ ಹೇಳಿ, ಆ ಪ್ರಾಣಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡೋಣ. ಆ ಬಗ್ಗೆ ನಮ್ಮೊಂದಿಗೆ ನೀವು ಪ್ರತ್ಯೇಕವಾಗಿ ಚರ್ಚೆ ಮಾಡಿ. ಆಗ ನಿಮಗೆ ಉತ್ತರ ಕೊಡುತ್ತೇವೆ. ಆದರೆ ಚರ್ಮೋದ್ಯಮ ಆಹಾರ ಪದ್ಧತಿ ಅನ್ನುವ ಕ್ಷುಲ್ಲಕ ಕಾರಣ ಕೊಡಬೇಡಿ.

ಭಾರತೀಯರು ತಾಯಿಯನ್ನ ಬಿಟ್ಟರೆ ಗೋವಿಗೆ ಮಾತ್ರ ತಾಯಿ ಸ್ಥಾನ ಕೊಟ್ಟಿರುವುದು. ಅದನ್ನ ಅರ್ಥ ಮಾಡಿಕೊಂಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಾನೂನು ಜಾರಿ ಮಾಡಿದ್ದಾರೆ. ತಿನ್ನುವುದಕ್ಕಾಗಿ ಕುರಿ, ಕೋಳಿ, ಆಡು ಇವೆ. ಅವುಗಳಿಗೆ ಯಾರೂ ಮಾತೆ ಎನ್ನುವುದಿಲ್ಲ. ಕಾಂಗ್ರೆಸ್‌ನದ್ದು ಯಾವಾಗಲೂ ಓಲೈಕೆ ರಾಜಕಾರಣ. ಗೋಹತ್ಯೆ ಕಾಯ್ದೆ ವಿರೋಧಿಸಿ ಮತ್ತೆ ಯಾರನ್ನೋ ಓಲೈಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ನವರು ಅದರಿಂದ ಹೊರಗೆ ಬಂದು ರಾಜಕಾರಣ ಮಾಡಲಿ ಎಂದು ಕಾಂಗ್ರೆಸ್ ವಿರುದ್ಧ ಪ್ರತಾಪ್​ ಸಿಂಹ ಗುಡುಗಿದ್ದಾರೆ.

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್