ಬಾಲಗಂಗಾಧರನಾಥ ಸ್ವಾಮೀಜಿ ಫ್ಲೈ ಓವರ್ ಏರಿ ಟೌನ್​ಹಾಲ್​ನತ್ತ ಸಾಗಿದ ಪ್ರತಿಭಟನಾ ಜಾಥಾ

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ಹಾಗೂ APMC ತಿದ್ದುಪಡಿ ಕಾಯ್ದೆಗಳನ್ನ ವಿರೋಧಿಸಿ ರಾಜ್ಯದ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲೂ ಪ್ರತಿಭಟನೆಯ ಕಾವು ಜೋರಾಗಿದ್ದು ನಗರದ ಸುಮ್ಮನಹಳ್ಳಿಯಿಂದ ಟೌನ್ ಹಾಲ್​ವರೆಗೂ ಬೃಹತ್​ ಪ್ರತಿಭಟನಾ ಱಲಿಗೆ ಚಾಲನೆ ಸಿಕ್ಕಿದೆ. ಕುರಬೂರು ಶಾಂತಕುಮಾರ್, ನಟ ಚೇತನ ಹಾಗೂ ಗಿರೀಶ್ ಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಱಲಿ ನಡೆಸಲಾಗುತ್ತಿದೆ. ಗಿರೀಶ್ ಗೌಡ, ಕುರಬೂರು ಶಾಂತಕುಮಾರ್ ಹಾಗೂ ನಟ ಚೇತನರ ಜೊತೆ ಱಲಿಯಲ್ಲಿ […]

ಬಾಲಗಂಗಾಧರನಾಥ ಸ್ವಾಮೀಜಿ ಫ್ಲೈ ಓವರ್ ಏರಿ ಟೌನ್​ಹಾಲ್​ನತ್ತ ಸಾಗಿದ ಪ್ರತಿಭಟನಾ ಜಾಥಾ
KUSHAL V

| Edited By: sadhu srinath

Sep 28, 2020 | 11:26 AM

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ಹಾಗೂ APMC ತಿದ್ದುಪಡಿ ಕಾಯ್ದೆಗಳನ್ನ ವಿರೋಧಿಸಿ ರಾಜ್ಯದ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲೂ ಪ್ರತಿಭಟನೆಯ ಕಾವು ಜೋರಾಗಿದ್ದು ನಗರದ ಸುಮ್ಮನಹಳ್ಳಿಯಿಂದ ಟೌನ್ ಹಾಲ್​ವರೆಗೂ ಬೃಹತ್​ ಪ್ರತಿಭಟನಾ ಱಲಿಗೆ ಚಾಲನೆ ಸಿಕ್ಕಿದೆ. ಕುರಬೂರು ಶಾಂತಕುಮಾರ್, ನಟ ಚೇತನ ಹಾಗೂ ಗಿರೀಶ್ ಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಱಲಿ ನಡೆಸಲಾಗುತ್ತಿದೆ.

ಗಿರೀಶ್ ಗೌಡ, ಕುರಬೂರು ಶಾಂತಕುಮಾರ್ ಹಾಗೂ ನಟ ಚೇತನರ ಜೊತೆ ಱಲಿಯಲ್ಲಿ ಹಲವು ಸಂಘಟನೆಗಳ ನೂರಾರು ಮಂದಿ ಪ್ರತಿಭಟನಾಕಾರರು ಸಹ ಭಾಗಿಯಾಗಿದ್ದಾರೆ. ಸುಮ್ಮನಹಳ್ಳಿ ಜಂಕ್ಷನ್​ನಿಂದ ಶುರುವಾಗಿರುವ ಬಹೃತ ಪ್ರತಿಭಟನಾ ಜಾಥಾ ನಾಯಂಡಹಳ್ಳಿ, ಮೈಸೂರು ರಸ್ತೆ ಮುಖಾಂತರವಾಗಿ ಟೌನ್ ಹಾಲ್​ಗೆ ತಲುಪಲಿದೆ. ಇಲ್ಲಿಯವರೆಗೆ ಪ್ರತಿಭಟನಾಕಾರರು ಬೈಕ್ ಱಲಿ ಮುಖಾಂತರ ತೆರಳಲಿದ್ದು ಬಳಿಕ ಅಲ್ಲಿಂದ ಕಾಲ್ನಡಿಗೆ ಮೂಲಕ ಮೈಸೂರು ಬ್ಯಾಂಕ್ ಸರ್ಕಲ್​ ತಲುಪಿ ಅಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.

ಈ ನಡುವೆ, ಪ್ರತಿಭಟನೆಯಲ್ಲಿ ಇನ್ನು ಕೆಲವರು ಭಾಗಿಯಾಗುವವರು ಬರಬೇಕಾಗಿದೆ. ಹಾಗಾಗಿ, 11.30ಕ್ಕೆ ಟೌನ್ ಹಾಲ್​ನಿಂದ ಮೈಸೂರು ಬ್ಯಾಂಕ್ ಸರ್ಕಲ್​ಗೆ ಱಲಿ ಹೊರಡಲಿದೆ. ಸದ್ಯ, KR ಮಾರುಕಟ್ಟೆ ಮೇಲಿನ ಬಾಲಗಂಗಾಧರನಾಥ ಸ್ವಾಮೀಜಿ ಫ್ಲೈಓವರ್​ಗೆ  ರೈತರ ಱಲಿ ತಲುಪಿದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada