ಹಳೆ ದ್ವೇಷ ಶಂಕೆ: ತಂದೆ-ತಾಯಿ, ಮಗನ ಬರ್ಬರ ಹತ್ಯೆ

ಬೆಳಗಾವಿ: ಬೈಲಹೊಂಗಲ ತಾಲೂಕಿನ ದೊಡ್ಡವಾಡ ಗ್ರಾಮದಲ್ಲಿ ತಂದೆ-ತಾಯಿ, ಮಗನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ತಾಲೂಕು ಪಂಚಾಯತಿ ಮಾಜಿ ಸದಸ್ಯ ಶಿವಾನಂದ ಅಂದಾನಶೆಟ್ಟಿ, ಶಾಂತವ್ವ ಮತ್ತು ಪುತ್ರ ವಿನೋದ್ ಅಂದಾನಶೆಟ್ಟಿ ಕೊಲೆಯಾದ ದುರ್ದೈವಿಗಳು. ಮನೆಯಲ್ಲಿದ್ದ ದಂಪತಿ ಹಾಗು ಮಗನನ್ನು ತಡರಾತ್ರಿ 6 ಜನ ದುಷ್ಕರ್ಮಿಗಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಮನೆಯ ಪಕ್ಕದಲ್ಲಿನ ಜಾಗ ಸಂಬಂಧ ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ದೊಡ್ಡವಾಡ ಪೊಲೀಸರು ಭೇಟಿ ಪರಿಶೀಲನೆ […]

ಹಳೆ ದ್ವೇಷ ಶಂಕೆ: ತಂದೆ-ತಾಯಿ, ಮಗನ ಬರ್ಬರ ಹತ್ಯೆ

Updated on: Jan 19, 2020 | 1:59 PM

ಬೆಳಗಾವಿ: ಬೈಲಹೊಂಗಲ ತಾಲೂಕಿನ ದೊಡ್ಡವಾಡ ಗ್ರಾಮದಲ್ಲಿ ತಂದೆ-ತಾಯಿ, ಮಗನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ತಾಲೂಕು ಪಂಚಾಯತಿ ಮಾಜಿ ಸದಸ್ಯ ಶಿವಾನಂದ ಅಂದಾನಶೆಟ್ಟಿ, ಶಾಂತವ್ವ ಮತ್ತು ಪುತ್ರ ವಿನೋದ್ ಅಂದಾನಶೆಟ್ಟಿ ಕೊಲೆಯಾದ ದುರ್ದೈವಿಗಳು.

ಮನೆಯಲ್ಲಿದ್ದ ದಂಪತಿ ಹಾಗು ಮಗನನ್ನು ತಡರಾತ್ರಿ 6 ಜನ ದುಷ್ಕರ್ಮಿಗಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಮನೆಯ ಪಕ್ಕದಲ್ಲಿನ ಜಾಗ ಸಂಬಂಧ ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ದೊಡ್ಡವಾಡ ಪೊಲೀಸರು ಭೇಟಿ ಪರಿಶೀಲನೆ ನೀಡಿದ್ದಾರೆ. ಜನವರಿ 30ರಂದು ಶಿವಾನಂದ ಮಗ ವಿನೋದ್ ಮದುವೆ ನಿಶ್ಚಯವಾಗಿತ್ತು. ಮದುವೆ ಕಾರ್ಡ್ ಪ್ರಿಂಟ್ ಮಾಡಿಸಿದ್ದ ವಿನೋದ್ ಕುಟುಂಬಸ್ಥರು ಮದುವೆ ಸಿದ್ಧತೆಯಲ್ಲಿದ್ದರು.


Published On - 11:56 am, Sun, 19 January 20