ಗ್ರಾ.ಪಂ. ಸದಸ್ಯ ಸ್ಥಾನಕ್ಕೆ ಹರಾಜು ಪ್ರಕರಣ: 44 ಜನರ ವಿರುದ್ಧ FIR
ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಹರಾಜು ಕೂಗಿದ ಪ್ರಕರಣಕ್ಕೆ ಸಂಬಂಧಿಸಿ ಬಿಂಡಿಗನವಿಲೆ ಠಾಣೆಯಲ್ಲಿ 44 ಜನರ ವಿರುದ್ಧ FIR ದಾಖಲಾಗಿದೆ. ಜಿಲ್ಲೆ ನಾಗಮಂಗಲ ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ 3 ಸದಸ್ಯ ಸ್ಥಾನಗಳಿಗೆ ಹರಾಜು ಪ್ರಕ್ರಿಯೆ ನಡೆಸಿದ್ದರು.
ಮಂಡ್ಯ: ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಹರಾಜು ಕೂಗಿದ ಪ್ರಕರಣಕ್ಕೆ ಸಂಬಂಧಿಸಿ ಬಿಂಡಿಗನವಿಲೆ ಠಾಣೆಯಲ್ಲಿ 44 ಜನರ ವಿರುದ್ಧ FIR ದಾಖಲಾಗಿದೆ. ಜಿಲ್ಲೆ ನಾಗಮಂಗಲ ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ 3 ಸದಸ್ಯ ಸ್ಥಾನಗಳಿಗೆ ಹರಾಜು ಪ್ರಕ್ರಿಯೆ ನಡೆಸಿದ್ದರು. ಸದ್ಯ ಈಗ 44ಜನರ ವಿರುದ್ಧ FIR ದಾಖಲಾಗಿದೆ.
ಗ್ರಾಮದ ಅಭಿವೃದ್ಧಿ, ದೇಗುಲ ನಿರ್ಮಾಣ ಹೆಸರಿನಲ್ಲಿ ಗ್ರಾಮಸ್ಥರು ಸಂತೆಯಲ್ಲಿ ಮೇಕೆ ಹರಾಜಿನ ರೀತಿಯಲ್ಲಿ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಹರಾಜು ಕೂಗಿದ್ದರು. 3 ಸ್ಥಾನಗಳಿಗೆ ಒಟ್ಟು 17.40 ಲಕ್ಷ ರೂ.ಗೆ ಹರಾಜು ಪ್ರಕ್ರಿಯೆ ನಡೆದಿತ್ತು. ಈ ಸಂಬಂಧ ಗ್ರಾಮಕ್ಕೆ ಭೇಟಿ ನೀಡಿ ಪೊಲೀಸರಿಗೆ ಅಧಿಕಾರಿಗಳು ದೂರು ನೀಡಿದ್ದವು. ದೂರು ಆಧರಿಸಿ ಬಿಂಡಿಗನವಿಲೆ ಠಾಣೆಯಲ್ಲಿ ಒಟ್ಟು 44 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ದುಡ್ಡಿದ್ರೆ ಅಧಿಕಾರ ನಿಮ್ದು.. ಲಕ್ಷಾಂತರ ರೂಪಾಯಿಗೆ ಗ್ರಾ.ಪಂ. ಸದಸ್ಯ ಸ್ಥಾನ ಹರಾಜು