Explainer | ಸ್ವಾಭಿಮಾನದ ಬಾಳ್ವೆಯ ತಳಹದಿ ಮಾನವ ಹಕ್ಕುಗಳು

ಇಂದು ವಿಶ್ವ ಮಾನವ ಹಕ್ಕುಗಳ ದಿನ. ಎಲ್ಲ ಮನುಷ್ಯರೂ ಹುಟ್ಟಿನಿಂದ ಸಮಾನ. ಸಮಾಜದಲ್ಲಿ ಎಲ್ಲರಿಗೂ ಮುಕ್ತವಾಗಿ ಬದುಕುವ ಹಕ್ಕು ಇದೆ. ಯಾವುದೇ ಬೇಧ ಭಾವ ಇಲ್ಲದೆ ಸಮಾನ ಹಕ್ಕು ಮತ್ತು ಗೌರವಗಳಿಗೆ ಎಲ್ಲರೂ ಅರ್ಹರು ಎಂಬುದನ್ನು ಪ್ರತಿಪಾದಿಸುವ ಮಹತ್ವದ ದಿನ.

Explainer | ಸ್ವಾಭಿಮಾನದ ಬಾಳ್ವೆಯ ತಳಹದಿ ಮಾನವ ಹಕ್ಕುಗಳು
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 10, 2020 | 10:51 AM

‘ಜನರ ಹಕ್ಕುಗಳನ್ನು ನಿರಾಕರಿಸಿದರೆ ಅದು ಅವರ ಮನುಷ್ಯತ್ವವನ್ನು ತಿರಸ್ಕರಿಸಿದಂತೆ’ ಎಂದಿದ್ದರು ದಕ್ಷಿಣ ಆಫ್ರಿಕಾದ ಮಹಾನಾಯಕ ನೆಲ್ಸನ್‌ ಮಂಡೇಲಾ. ಮಂಡೇಲಾರ ಈ ಹೇಳಿಕೆ ಈಗ ನೆನಪಾಗಲು ಕಾರಣವಿದೆ. ಇಂದು ಅಂದರೆ ಡಿಸೆಂಬರ್ 10, World Human Rights Day 2020 ವಿಶ್ವ ಮಾನವ ಹಕ್ಕುಗಳ ದಿನ. ಜನರಿಗೆ ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಮತ್ತು ಅದರ ರಕ್ಷಣೆಗೆ ಕಟಿಬದ್ಧರಾಗಲು ಕರೆ ನೀಡುವ ದಿನ ಇದು. ಎಲ್ಲ ಮನುಷ್ಯರೂ ಹುಟ್ಟಿನಿಂದ ಸಮಾನ. ಸಮಾಜದಲ್ಲಿ ಎಲ್ಲರಿಗೂ ಮುಕ್ತವಾಗಿ ಬದುಕುವ ಹಕ್ಕು ಇದೆ. ಯಾವುದೇ ಬೇಧ ಭಾವ ಇಲ್ಲದೆ ಸಮಾನ ಹಕ್ಕು ಮತ್ತು ಗೌರವಗಳಿಗೆ ಎಲ್ಲರೂ ಅರ್ಹರು ಎಂಬುದನ್ನು ಪ್ರತಿಪಾದಿಸುವ ಮಹತ್ವದ ದಿನ.

ಮಾನವ ಹಕ್ಕುಗಳ ಪರಿಕಲ್ಪನೆಯ ಹಿನ್ನೆಲೆ ಏನು? ಎರಡನೇ ಮಹಾಯುದ್ಧದಲ್ಲಿ ಸಂಭವಿಸಿದ ಅಪಾರ ಸಾವು ನೋವು, ನಾಶ ನಷ್ಟದಿಂದ ಮನನೊಂದು ಜಗತ್ತು ಹಿಂಸೆಯನ್ನು ತ್ಯಜಿಸಬೇಕು ಎಂಬ ನಿಲುವಿಗೆ ಬಂತು. ಈ ವಿಚಾರವಾಗಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಮಾನವ ಹಕ್ಕುಗಳನ್ನು ಜಾರಿಗೊಳಿಸಬೇಕು ಎಂದು ಪ್ರತಿಪಾದಿಸಿದವು. ಇದರ ಫಲವಾಗಿ ಡಿ.10, 1948ರಂದು ವಿಶ್ವಸಂಸ್ಥೆಯಲ್ಲಿ ಮಾನವ ಹಕ್ಕುಗಳ ಸನ್ನದು (ಚಾರ್ಟರ್) ಪ್ರಕಟಿಸಿತು. ಪ್ರತಿವರ್ಷ ಡಿಸೆಂಬರ್ 10ರಂದು ವಿಶ್ವ ಮಾನವ ಹಕ್ಕುಗಳ ದಿನಾಚರಣೆ ನಡೆಯುತ್ತದೆ. ಮಾನವ ಹಕ್ಕುಗಳನ ಘೋಷಣೆಯ (ಚಾರ್ಟರ್​ನ) ಒಟ್ಟು 30 ಅನುಚ್ಛೇದಗಳಲ್ಲಿ ಪ್ರತಿಯೊಬ್ಬ ಮನುಷ್ಯನಿಗೆ ಮುಕ್ತವಾಗಿ, ಸಮಾನವಾಗಿ ಮತ್ತು ಗೌರವದಿಂದ ಬದುಕುವ ಹಕ್ಕುಗಳನ್ನು ಒದಗಿಸಲಾಗಿದೆ.

ಮಾನವ ಹಕ್ಕುಗಳು ಯಾವುದು? ಎಲ್ಲ ಮನುಷ್ಯರು ಜಾತಿ, ಲಿಂಗ, ರಾಷ್ಟ್ರೀಯತೆ, ಜನಾಂಗ, ಭಾಷೆ , ಧರ್ಮ ಮತ್ತು ಸ್ಥಾನನಮಾನಗಳ ಹೊರತಾಗಿಯೂ ಸಮಾನರು. ಸ್ವತಂತ್ರವಾಗಿ ಬದುಕುವ ಹಕ್ಕು, ಗುಲಾಮಗಿರಿ ಮತ್ತು ಕಿರುಕುಳದಿಂದ ಸ್ವಾತಂತ್ಯ, ಅಭಿಪ್ರಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಇವೆಲ್ಲವನ್ನೂ ಸೇರಿಸಿ ಮಾನವ ಹಕ್ಕುಗಳು ಎನ್ನುತ್ತೇವೆ.

ಇದನ್ನೂ ಓದಿ: ಗುಲಾಮಗಿರಿಯ ನಾನಾ ರೂಪ: ಸಿಗುವುದೇ ಆಧುನಿಕ ಗುಲಾಮಗಿರಿಯಿಂದ ಮುಕ್ತಿ

ಪ್ರಾತಿನಿಧಿಕ ಚಿತ್ರ

ಮಾನವ ಹಕ್ಕು ಸನ್ನದಿನ ಪ್ರಮುಖ ಅಂಶಗಳು ಅನುಚ್ಛೇದ 1- ಪ್ರತಿಯೊಬ್ಬ ಮನುಷ್ಯರಿಗೆ ಗೌರವ ಮತ್ತು ಹಕ್ಕು ಸಮಾನವಾಗಿ ದೊರೆಯಬೇಕು ಅನುಚ್ಛೇದ 2- ಬಣ್ಣ, ಜಾತಿ, ಲಿಂಗ, ಭಾಷೆ, ವಂಶ, ಪ್ರದೇಶ ಮತ್ತು ರಾಜಕೀಯ ವಿಚಾರಗಳಲ್ಲಿ ತಾರತಮ್ಯ ಸಲ್ಲದು ಅನುಚ್ಛೇದ 5- ಮನುಷ್ಯರ ವಿಷಯದಲ್ಲಿ ಅಮಾನವೀಯವಾಗಿ ಯಾರೂ ವರ್ತಿಸತಕ್ಕದ್ದಲ್ಲ. ಯಾರಿಗೂ ಆ ರೀತಿಯ ಶಿಕ್ಷೆ ನೀಡಬಾರದು ಅನುಚ್ಛೇದ 7- ಕಾನೂನಿನ ಮುಂದೆ ಎಲ್ಲರೂ ಸರಿ ಸಮಾನರು. ಯಾವುದೇ ತಾರತಮ್ಯ ಮಾಡದೆ ಕಾನೂನು ಎಲ್ಲರಿಗೂ ರಕ್ಷಣೆ ನೀಡಬೇಕು. ಅನುಚ್ಛೇದ 12- ವ್ಯಕ್ತಿಯ ವೈಯಕ್ತಿಕ ಮತ್ತು ಸಾಂಸಾರಿಕ ಜೀವನದಲ್ಲಿ ಯಾವುದೇ ಅಡ್ಡಿಯನ್ನು ಯಾರೂ ಉಂಟು ಮಾಡತಕ್ಕದ್ದಲ್ಲ. ಸಮಾನವಾಗಿ ಮತ್ತು ಗೌರವದಿಂದ ಬದುಕುವ ಎಲ್ಲಾ ಹಕ್ಕುಗಳು ಎಲ್ಲರಿಗೂ ಇದೆ ಅನುಚ್ಛೇದ 13- ತಾನು ವಾಸಿಸುವ ದೇಶದ ಒಳಗೆ ಸ್ವತಂತ್ರವಾಗಿ ಸಂಚರಿಸಲು ಮತ್ತು ನೆಲೆಯೂರಲು ಪ್ರತಿಯೊಬ್ಬರಿಗೂ ಹಕ್ಕು ಇದೆ. ಅನುಚ್ಛೇದ 15- ಎಲ್ಲರಿಗೂ ಪೌರತ್ವದ ಹಕ್ಕು ಇದೆ. ಕಾರಣವಿಲ್ಲದೆ ಯಾರೊಬ್ಬರ ಪೌರತ್ವ ಕಸಿಯುವ ಹಕ್ಕು ಇರುವುದಿಲ್ಲ. ಅದೇ ವೇಳೆ ಪೌರತ್ವ ಬದಲಿಸುವ ಅವಕಾಶವನ್ನು ತಡೆಯಬಾರದು ಅನುಚ್ಛೇದ 18- ಮುಕ್ತ ಚಿಂತನೆ, ಸ್ವತಂತ್ರವಾಗಿ ಧರ್ಮದ ನಂಬಿಕೆಗೆ ಎಲ್ಲರಿಗೂ ಅಧಿಕಾರವಿದೆ. ಒಬ್ಬರೇ ಅಥವಾ ಸಾಮೂಹಿಕವಾಗಿ ಮತಾಂತರವಾಗಲು ಮತ್ತು ಬಹಿರಂಗವಾಗಿ ಅಥವಾ ರಹಸ್ಯವಾಗಿ ಧರ್ಮದ ನಂಬಿಕೆಯನ್ನು ವ್ಯಕ್ತಪಡಿಸಲು, ಆಚರಿಸಲು ಅಧಿಕಾರವಿದೆ. ಅನುಚ್ಛೇದ 19 – ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಿರುವ ಸ್ವಾತಂತ್ರ್ಯ

ಇನ್ನುಳಿದ ಅನುಚ್ಛೇದಗಳಲ್ಲಿ ಶಿಕ್ಷಣದ ಹಕ್ಕು, ಉಪಜೀವನದ ಹಕ್ಕು, ಕಾನೂನಿನ ಮುಂದೆ ಗುರುತಿಸಿಕೊಳ್ಳುವ ಹಕ್ಕು , ಪ್ರಾಣರಕ್ಷಣೆಯ ಹಕ್ಕು, ನ್ಯಾಯದೊರಕಿಸಿಕೊಳ್ಳುವ ಹಕ್ಕು, ಅನ್ಯಾಯಕ್ಕೆ ಒಳಗಾದವರಗಿಗೆ ಪರಿಹಾರಧನದ ಹಕ್ಕು, ಯೋಗ್ಯ ಪರಿಸರದ ಹಕ್ಕು ಮೊದಲಾದ ಹಕ್ಕುಗಳು ಎಲ್ಲ ಮನುಷ್ಯರಿಗೂ ಲಭ್ಯವಿರುವ ಪ್ರಧಾನ ಮೂಲಭೂತ ಹಕ್ಕುಗಳು ಎಂದು ಹೇಳಲಾಗಿದೆ.

ಇದನ್ನೂ ಓದಿ: ಅಂಬೇಡ್ಕರ್​ ಮಹಾ ಪರಿನಿರ್ವಾಣ ದಿನ: ಸಂವಿಧಾನ ಕರ್ತೃವಿಗೆ ನಾಯಕರ ಕೃತಜ್ಞತೆ

ಪ್ರಾತಿನಿಧಿಕ ಚಿತ್ರ

ನಮ್ಮ ದೇಶದಲ್ಲಿ ಮಾನವ ಹಕ್ಕುಗಳ ಸ್ಥಿತಿ ಹೇಗಿದೆ? ನಮ್ಮ ದೇಶದಲ್ಲಿಯೂ ಮಾನವಹಕ್ಕುಗಳ ಉಲ್ಲಂಘನೆ ಆಗಾಗ ವರದಿಯಾಗುತ್ತಿರುತ್ತದೆ. ಸಂವಿಧಾನ ಖಾತ್ರಿಪಡಿಸಿರುವ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನವೂ ಆಗಾಗ ನಡೆಯುತ್ತಿದೆ. ಮನುಷ್ಯರ ಮೇಲೆ ದೌರ್ಜನ್ಯವೆಸಗುವುದು ಅಪರಾಧ ಎಂದು ಅನುಚ್ಛೇದ-5ರಲ್ಲಿ ಹೇಳಿದ್ದರೂ ದಲಿತರು, ಅಲ್ಪಸಂಖ್ಯಾತರು, ಬಡವರು, ಮಹಿಳೆ- ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ. ಧರ್ಮ, ಆಹಾರ ಪದ್ಧತಿ, ಆಚರಣೆ, ಉಡುಗೆ-ತೊಡುಗೆ ಎಲ್ಲದಕ್ಕೂ ಸ್ವಾತಂತ್ರ್ಯವಿದ್ದರೂ ಸಂಸ್ಕೃತಿಯ ಹೆಸರಿನಲ್ಲಿ ಕಟ್ಟುಪಾಡುಗಳನ್ನು ತಂದು ವಿರೋಧಿಸುವ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಭಾರತವು ವಿಶ್ವಸಂಸ್ಥೆಯ ಸದಸ್ಯರಾಷ್ಟ್ರವಾಗಿರುವುದು ಹಾಗೂ ನಮ್ಮ ಸಂವಿಧಾನವು ಮೂಲಭೂತ ಹಕ್ಕುಗಳನ್ನು ಖಾತ್ರಿಪಡಿಸಿರುವುದರಿಂದ ನಮ್ಮ ದೇಶದಲ್ಲಿ ಮಾನವ ಹಕ್ಕುಗಳ ಪರವಾಗಿ ನ್ಯಾಯಾಲಯಗಳು ನಿಲ್ಲುತ್ತವೆ. ಪ್ರಬಲರು ಮತ್ತು ಸರ್ಕಾರಗಳ ವಿರುದ್ಧ ನಿರ್ದಿಷ್ಟ ವ್ಯಕ್ತಿಯ ಮಾನವ ಹಕ್ಕು ಎತ್ತಿಹಿಡಿದ ಹಲವು ಉದಾಹರಣೆಗಳಿವೆ.

ಭಾರತದಲ್ಲಿ ಮಾನವ ಹಕ್ಕುಗಳಿಗೆ ಸಂಬಂಧಿಸಿದ ಮುಖ್ಯ ಘಟನಾವಳಿಗಳು 1829- ಸತಿ ಸಹಗಮನ ಪದ್ದತಿ ರದ್ದು 1929- ಬಾಲ್ಯ ವಿವಾಹ ನಿಷೇಧ ಕಾಯಿದೆ 1947-  ಭಾರತ ಸ್ವತಂತ್ರ ದೇಶವಾಯಿತು 1950 – ಭಾರತದ ಸಂವಿಧಾನದ ರಚನೆಯಿಂದಾಗಿ, ಪ್ರಜಾಪ್ರಭುತ್ವದ ಸಾರ್ವಭೌಮತ್ವದ ಗಣರಾಜ್ಯವಾಗಿ ಶ್ರೀಸಾಮಾನ್ಯರಿಗೆ ಮತದಾನ ಮಾಡುವ ಹಕ್ಕು. ಮೂಲಭೂತ ಹಕ್ಕುಗಳಿಗೆ ಖಾತ್ರಿ 1955- ಕೌಟುಂಬಿಕ ಕಾನೂನಿನಲ್ಲಿ ಸುಧಾರಣೆ ಮಾಡಿ ಹಿಂದೂ ಮಹಿಳೆಯರಿಗೆ ಹೆಚ್ಚಿನ ಹಕ್ಕನ್ನು ನೀಡಲಾಯಿತು 1973- ಕೇಶವಾನಂದ ಭಾರತಿ ಪ್ರಕರಣದಲ್ಲಿ ಭಾರತ ಸುಪ್ರೀಂಕೋರ್ಟ್ ನೀಡಿದ ತೀರ್ಪಿನನ್ವಯ ಭಾರತ ಸಂವಿಧಾನದ ಮೂಲಭೂತ ಆಶಯಗಳಿಗೆ ವ್ಯತಿರಿಕ್ತವಾದ (ಹಲವು ಮೂಲಭೂತ ಹಕ್ಕುಗಳನ್ನು ಒಳಗೊಂಡಂತೆ) ತಿದ್ದುಪಡಿಗೆ ಅವಕಾಶ ವಿರುವುದಿಲ್ಲ 1975-77 – ಭಾರತದಲ್ಲಿ ತುರ್ತುಪರಿಸ್ಥಿತಿ 1978- ಮೇನಕಾ ಗಾಂಧಿ ಮತ್ತು ಭಾರತದ ಒಕ್ಕೂಟದ ನಡುವಿನ ಪ್ರಕರಣದಲ್ಲಿ ಜೀವಿಸುವ ಹಕ್ಕನ್ನು ಯಾವುದೇ ಕಾರಣಕ್ಕೂ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ರದ್ದುಪಡಿಸಲು ಆಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು. 1985-86- ಶಹಬಾನೊ ಪ್ರಕರಣ: ವಿಚ್ಛೇದನಕ್ಕಾಗಿ ಶಹಬಾನು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಜೀವನಾಂಶ ನೀಡುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರೂ ಮುಸ್ಲಿಂ ಧಾರ್ಮಿಕ ನಾಯಕರ ಮಧ್ಯಪ್ರವೇಶದಿಂದ ಆಕೆಯ ಪತಿ ಜೀವನಾಂಶ ಕೊಡುವುದನ್ನು ತಪ್ಪಿಸಿಕೊಂಡರು. ಈ ವೇಳೆ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಮುಸ್ಲಿಂ ಮಹಿಳೆಯರ ಕಾಯ್ದೆ (ವಿಚ್ಛೇದನಕ್ಕೆ ಸಂಬಂಧಿಸಿದ ಹಕ್ಕುಗಳ ರಕ್ಷಣೆ) 1986 ಜಾರಿಗೆ ತಂದಿತು 1989- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ (ದೌರ್ಜನ್ಯ ತಡೆ) ಕಾಯಿದೆ ಜಾರಿ 1989- ಕಾಶ್ಮೀರಿ ಬಂಡಾಯ ಜಾಸ್ತಿಯಾಗಿದ್ದು ಉಗ್ರರು ಮತ್ತು ರಕ್ಷಣಾ ಪಡೆ ನಡುವಿನ ಹೋರಾಟದಲ್ಲಿ ಹಲವಾರು ಮಂದಿ ಪ್ರಾಣ ಕಳೆದುಕೊಂಡರು. ಉಗ್ರರ ಉಪಟಳದಿಂದ ಸತ್ತವರಿಗೆ ಮಾನವಹಕ್ಕುಗಳಿಲ್ಲವೇ, ಉಗ್ರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕೆಂಬ ಒತ್ತಾಯ ದೇಶದಲ್ಲಿ ಕೇಳಿಬಂತು. 1992- ಸ್ಥಳೀಯ ಸ್ವಯಮಾಡಳಿತ ಬಲಪಡಿಸಲು (ಪಂಚಾಯತಿ ರಾಜ್) ಸಂವಿಧಾನಾತ್ಮಕ ತಿದ್ದುಪಡಿ. 1992- ಬಾಬರಿ ಮಸೀದಿ ಧ್ವಂಸ, ಕೋಮುಗಲಭೆ 1993- ಮಾನವ ಹಕ್ಕುಗಳ ಕಾಯಿದೆಯ ರಕ್ಷಣೆಗಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರಚನೆ 2001- ಆಹಾರದ ಹಕ್ಕು ಜಾರಿಗೆ ತರಲು ಸುಪ್ರೀಂಕೋರ್ಟ್ ಆದೇಶ 2002- ಗೋಧ್ರಾ ಹತ್ಯಾಕಾಂಡ, ಗುಜರಾತ್​ನಲ್ಲಿ ಕೋಮುಗಲಭೆ 2005- ಸರ್ಕಾರಿ ಇಲಾಖೆಗಳಿಂದ ನಾಗರಿಕರಿಗೆ ಮಾಹಿತಿ ಪಡೆಯಲು ಅವಕಾಶ. ಮಾಹಿತಿ ಹಕ್ಕು ಕಾಯ್ದೆಗೆ ಅಂಗೀಕಾರ 2005- ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ (ನರೇಗಾ) ಜಾರಿ. ಉದ್ಯೋಗವೂ ಜನರ ಹಕ್ಕು ಎಂದು ಘೋಷಿಸಿದ ಮಹತ್ವದ ಬೆಳವಣಿಗೆ 2006- ಸುಪ್ರೀಂಕೋರ್ಟ್ ಆದೇಶದಂತೆ, ಮಾನವ ಹಕ್ಕುಗಳ ವಿಚಾರದಲ್ಲಿ ಪೋಲಿಸ್ ಸೇವೆಯಲ್ಲಿದ್ದ ಲೋಪಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಪೋಲಿಸ್ ಸುಧಾರಣೆ ಕಾಯ್ದೆ ಜಾರಿ 2009- ಎಲ್​​ಜಿಬಿಟಿ ಸಮುದಾಯದವರ ಹಕ್ಕುಗಳನ್ನು ಕಾಪಾಡಲು ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 377ರಲ್ಲಿ ತಿದ್ದುಪಡಿ 2010- ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಕಾಯ್ದೆ ಜಾರಿ

ಸಮಾನತೆಯ ತತ್ವ ಸಾರುವ ಸಂವಿಧಾನವನ್ನು ಸ್ಮರಿಸುವ ದಿನವಿದು

ವಿಶ್ವಸಂಸ್ಥೆಗೆ ಭಾರತದ ಸಬ್‌ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರ ಪಠಿಸಿದ ಮೋದಿ

Published On - 10:01 am, Thu, 10 December 20

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್