ಮಾಜಿ ಕಾರ್ಪೋರೇಟರ್ ಗಾಯತ್ರಿ ವಿರುದ್ಧ FIR
2015ರ ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷೇತರವಾಗಿ ಗಾಯತ್ರಿ ಗೆಲುವು ಸಾಧಿಸಿದ್ದರು. ಇವರು ಸ್ಪರ್ಧಿಸಿದ್ದ ಕ್ಷೇತ್ರ ಕೆಂಪಾಪುರ ಆಗ್ರಹಾರ, ಎಸ್ಟಿ (ST) ಮಹಿಳೆಗೆ ಮೀಸಲಾಗಿತ್ತು.
ಬೆಂಗಳೂರು: ನಕಲಿ ಜಾತಿ ಪ್ರಮಾಣ ಪತ್ರ ಹೊಂದಿದ್ದ ಆರೋಪದಡಿಯಲ್ಲಿ ಮಾಜಿ ಕಾರ್ಪೋರೇಟರ್ ಗಾಯತ್ರಿ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
2015ರ ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷೇತರವಾಗಿ ಗಾಯತ್ರಿ ಗೆಲುವು ಸಾಧಿಸಿದ್ದರು. ಇವರು ಸ್ಪರ್ಧಿಸಿದ್ದ ಕ್ಷೇತ್ರ ಕೆಂಪಾಪುರ ಆಗ್ರಹಾರ, ಎಸ್ಟಿ (ST) ಮಹಿಳೆಗೆ ಮೀಸಲಾಗಿತ್ತು.
ಚುನಾವಣೆ ಸಂದರ್ಭ ನಾಮಪತ್ರ ಸಲ್ಲಿಸುವಾಗ ನೀಡಿದ್ದ ಜಾತಿ ಪ್ರಮಾಣ ಪತ್ರ ಸುಳ್ಳು ಎಂದು ಬೆಂಗಳೂರು ನಗರ ಜಾತಿ ಪರಿಶೀಲನಾ ಸಮಿತಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಇನ್ಸ್ಪೆಕ್ಟರ್ ಗಾಯತ್ರಿ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆಯಾಗಿದೆ.
Published On - 6:53 pm, Wed, 16 December 20