ಪಟಾಕಿ ತರಲು ತಮಿಳುನಾಡಿಗೆ ಹೋಗಿ ಬಂದ.. 11 ಮಂದಿಗೆ ಸೋಂಕು ‘ಹಚ್ಚಿದ’

| Updated By: ಸಾಧು ಶ್ರೀನಾಥ್​

Updated on: Jun 23, 2020 | 4:22 PM

ದಾವಣಗೆರೆ: ಜಿಲ್ಲೆಗೆ ತಮಿಳುನಾಡಿನ ಶಿವಕಾಶಿ ಪಟಾಕಿಯ ಜೊತೆ ಬಂತು ಕೊರೊನಾ ಬಾಂಬ್​! ಹೌದು, ಜಿಲ್ಲೆಯ ಚನ್ನಗಿರಿ ಪಟ್ಟಣದ ಸ್ಥಳೀಯರೊಬ್ಬರು ಪಟಾಕಿ ತರಲು ತಮಿಳುನಾಡಿನ ಶಿವಕಾಶಿಗೆ ತೆರಳಿದ್ದರು. ಈ ವೇಳೆ ಅವರಿಗೆ ಸೋಂಕು ತಗುಲಿತ್ತು. ಇದೀಗ ಆ ವ್ಯಕ್ತಿಯಿಂದ 11 ಜನರಿಗೆ ಸೋಂಕು ಹರಡಿದ್ದು ಇವರಲ್ಲಿ ಓರ್ವ ಮಹಿಳೆ ಕೊರೊನಾಗೆ ಬಲಿಯಾಗಿದ್ದಾರೆ. ಹಾಗಾಗಿ ಚನ್ನಗಿರಿ ಪಟ್ಟಣವನ್ನೇ ಸ್ವಯಂಪ್ರೇರಿತವಾಗಿ ಲಾಕ್​​ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ಸ್ಥಳೀಯ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಮಾಹಿತಿ ನೀಡಿದ್ದಾರೆ. ಇದೀಗ ಪಟ್ಟಣದ ಕುಂಬಾರ ಬೀದಿ ಹಾಗೂ […]

ಪಟಾಕಿ ತರಲು ತಮಿಳುನಾಡಿಗೆ ಹೋಗಿ ಬಂದ.. 11 ಮಂದಿಗೆ ಸೋಂಕು ‘ಹಚ್ಚಿದ’
Follow us on

ದಾವಣಗೆರೆ: ಜಿಲ್ಲೆಗೆ ತಮಿಳುನಾಡಿನ ಶಿವಕಾಶಿ ಪಟಾಕಿಯ ಜೊತೆ ಬಂತು ಕೊರೊನಾ ಬಾಂಬ್​! ಹೌದು, ಜಿಲ್ಲೆಯ ಚನ್ನಗಿರಿ ಪಟ್ಟಣದ ಸ್ಥಳೀಯರೊಬ್ಬರು ಪಟಾಕಿ ತರಲು ತಮಿಳುನಾಡಿನ ಶಿವಕಾಶಿಗೆ ತೆರಳಿದ್ದರು. ಈ ವೇಳೆ ಅವರಿಗೆ ಸೋಂಕು ತಗುಲಿತ್ತು. ಇದೀಗ ಆ ವ್ಯಕ್ತಿಯಿಂದ 11 ಜನರಿಗೆ ಸೋಂಕು ಹರಡಿದ್ದು ಇವರಲ್ಲಿ ಓರ್ವ ಮಹಿಳೆ ಕೊರೊನಾಗೆ ಬಲಿಯಾಗಿದ್ದಾರೆ.

ಹಾಗಾಗಿ ಚನ್ನಗಿರಿ ಪಟ್ಟಣವನ್ನೇ ಸ್ವಯಂಪ್ರೇರಿತವಾಗಿ ಲಾಕ್​​ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ಸ್ಥಳೀಯ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಮಾಹಿತಿ ನೀಡಿದ್ದಾರೆ. ಇದೀಗ ಪಟ್ಟಣದ ಕುಂಬಾರ ಬೀದಿ ಹಾಗೂ ಗೌಡರ ಬೀದಿಯನ್ನ ಸೀಲ್​ಡೌನ್ ಸಹ ಮಾಡಲಾಗಿದೆ. ಜೊತೆಗೆ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಇತರೆ 24 ಜನರಿಗೆ ಕ್ವಾರಂಟೈನ್​​ನಲ್ಲಿ ಇರಿಸಲಾಗಿದ್ದು 520 ಸ್ಥಳೀಯರ ಗಂಟಲು ದ್ರವವನ್ನು ಪರೀಕ್ಷೆಗೆ ರವಾನಿಸಲಾಗಿದೆ.