ಉಡುಪಿ ಮಳೆ ಅವಾಂತರ: ಲಕ್ಷಾಂತರ ರೂ. ಮೌಲ್ಯದ ಪಂಜರದ ಮೀನು ಕೃಷಿ ಸಲಕರಣೆ ನಾಶ
ಉಡುಪಿ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ನಡುವೆ ಜಿಲ್ಲೆಯ ಸುವರ್ಣ ನದಿಪಾತ್ರದಲ್ಲಿರುವ ಕಲ್ಯಾಣಪುರದಲ್ಲಿ ಪಂಜರ ಮೀನು ಕೃಷಿಯ ಸಾಧನಗಳು ಸಂಪೂರ್ಣವಾಗಿ ನಾಶವಾಗಿದೆ. ಇದರಿಂದ, ಒಂದೇ ಕಡೆ 20 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ. ಪಂಜರದಲ್ಲಿ ಮೀನಿನ ಮರಿಗಳನ್ನು ಬಿಟ್ಟು ನದಿಯಲ್ಲಿ ಮೀನು ಸಾಕಾಣಿಕೆ ನಡೆಸಲಾಗುತ್ತಿತ್ತು. ಆದರೆ, ಪ್ರವಾಹದ ಹೊಡೆತಕ್ಕೆ ಮೀನಿನ ಕೇಜ್ಗಳು ಮುರಿದುಬಿದ್ದು ದಡಕ್ಕೆ ಬಂದಿದೆ. ಹೀಗಾಗಿ, ಹಲವಾರು ಕಡೆ ಪಂಜರ ಮೀನು […]
ಉಡುಪಿ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಈ ನಡುವೆ ಜಿಲ್ಲೆಯ ಸುವರ್ಣ ನದಿಪಾತ್ರದಲ್ಲಿರುವ ಕಲ್ಯಾಣಪುರದಲ್ಲಿ ಪಂಜರ ಮೀನು ಕೃಷಿಯ ಸಾಧನಗಳು ಸಂಪೂರ್ಣವಾಗಿ ನಾಶವಾಗಿದೆ. ಇದರಿಂದ, ಒಂದೇ ಕಡೆ 20 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.
ಪಂಜರದಲ್ಲಿ ಮೀನಿನ ಮರಿಗಳನ್ನು ಬಿಟ್ಟು ನದಿಯಲ್ಲಿ ಮೀನು ಸಾಕಾಣಿಕೆ ನಡೆಸಲಾಗುತ್ತಿತ್ತು. ಆದರೆ, ಪ್ರವಾಹದ ಹೊಡೆತಕ್ಕೆ ಮೀನಿನ ಕೇಜ್ಗಳು ಮುರಿದುಬಿದ್ದು ದಡಕ್ಕೆ ಬಂದಿದೆ. ಹೀಗಾಗಿ, ಹಲವಾರು ಕಡೆ ಪಂಜರ ಮೀನು ಕೃಷಿಯ ಕೇಜ್ಗಳು ನಾಶವಾಗಿವೆ.