ಪತ್ನಿ, ಇಬ್ಬರು ಮಕ್ಕಳ ಎದುರು ಜಲಸಮಾಧಿಯಾದ ಮೀನುಗಾರ
ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬಿದರಗಡ್ಡೆ ಗ್ರಾಮದ ತುಂಗಾಭದ್ರಾ ನದಿಯಲ್ಲಿ ಕೌಟುಂಬಿಕ ದುರಂತವೊಂದು ಸಂಭವಿಸಿದೆ. ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ತೆಪ್ಪದಲ್ಲಿ ಕರೆದುಕೊಂಡು ಮೀನಿಗೆ ಬಲೆ ಬಿಡಲು ಮೀನುಗಾರ ರಾಜಪ್ಪ ಮುಂದಾಗಿದ್ದ. 45 ವರ್ಷದ ರಾಜಪ್ಪಗೆ ಆ ವೇಳೆ ಬಿಪಿ ಹೆಚ್ಚಳವಾಗಿ ತಲೆಸುತ್ತು ಬಂದು ನೀರಲ್ಲಿ ಬಿದ್ದಿದ್ದಾನೆ. ಪತ್ನಿ ಧೃತಿಗೆಡದೆ ತೆಪ್ಪ ಹುಟ್ಟುಹಾಕಿಕೊಂಡು ನದಿ ದಡಕ್ಕೆ ಬಂದು ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದಾಳೆ. ಸ್ಥಳದಲ್ಲಿ ಸೇರಿದ ಗ್ರಾಮಸ್ಥರು ಶವ ಹುಡುಕಿ ದಡಕ್ಕೆ ತಂದಿದ್ದಾರೆ. ಶವ ಪತ್ತೆಯಾದ ಬಳಿಕ, […]

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬಿದರಗಡ್ಡೆ ಗ್ರಾಮದ ತುಂಗಾಭದ್ರಾ ನದಿಯಲ್ಲಿ ಕೌಟುಂಬಿಕ ದುರಂತವೊಂದು ಸಂಭವಿಸಿದೆ. ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ತೆಪ್ಪದಲ್ಲಿ ಕರೆದುಕೊಂಡು ಮೀನಿಗೆ ಬಲೆ ಬಿಡಲು ಮೀನುಗಾರ ರಾಜಪ್ಪ ಮುಂದಾಗಿದ್ದ. 45 ವರ್ಷದ ರಾಜಪ್ಪಗೆ ಆ ವೇಳೆ ಬಿಪಿ ಹೆಚ್ಚಳವಾಗಿ ತಲೆಸುತ್ತು ಬಂದು ನೀರಲ್ಲಿ ಬಿದ್ದಿದ್ದಾನೆ.
ಪತ್ನಿ ಧೃತಿಗೆಡದೆ ತೆಪ್ಪ ಹುಟ್ಟುಹಾಕಿಕೊಂಡು ನದಿ ದಡಕ್ಕೆ ಬಂದು ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದಾಳೆ. ಸ್ಥಳದಲ್ಲಿ ಸೇರಿದ ಗ್ರಾಮಸ್ಥರು ಶವ ಹುಡುಕಿ ದಡಕ್ಕೆ ತಂದಿದ್ದಾರೆ. ಶವ ಪತ್ತೆಯಾದ ಬಳಿಕ, ಕುಟುಂಬಸ್ಥರು ಶವಸಂಸ್ಕಾರ ನಡೆಸಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.