ಕೊರಾನಾಗೆ ಬಲಿಯಾಗಿದ್ದ ವೃದ್ಧ ದಂಪತಿ: ಈಗ ಮಗ, ಸೊಸೆ, ಮೊಮ್ಮಕ್ಕಳಿಗೂ ಅಂಟಿದ ಹೆಮ್ಮಾರಿ

ಬೆಂಗಳೂರು: ಕಷ್ಟಗಳು ಬರಲು ಶುರುವಾದ್ರೆ, ಒಂದರ ಮೇಲೊಂದರಂತೆ ಬರುತ್ತವೆ ಅನ್ನೋ ಮಾತಿದೆ. ಇಂಥದ್ದೇ ಸಂಕಷ್ಟಕ್ಕೆ ಸಿಲುಕಿದೆ ಬಿಟಿಎಮ್‌ ಲೇಔಟ್‌ನ ಕುಟುಂಬವೊಂದು. ಹೌದು, ಕೇವಲ ನಾಲ್ಕು ದಿನಗಳ ಹಿಂದಷ್ಟೇ ಕೊರೊನಾ ಮಾರಿಗೆ ತಂದೆ-ತಾಯಿಗಳನ್ನ ಕಳೆದುಕೊಂಡಿದ್ದ ನತದೃಷ್ಟ ಕುಟುಂಬ ಈಗ ಖುದ್ದು ತಾವೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಿರಿಯರ ಚಿತೆಯಾರುವುದಕ್ಕೂ ಮುನ್ನ.. ಕುಟುಂಬದ ಐವರಿಗೆ ಸೋಂಕು ನಾಲ್ಕು ದಿನಗಳ ಹಿಂದೆ ಜಯದೇವ ಆಸ್ಪತ್ರೆಯಲ್ಲಿ ತಾಯಿ ಮತ್ತು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತಂದೆಯನ್ನು ಕಳೆದುಕೊಂಡಿದ್ದ ಬಿಟಿಎಂ ಲೇಔಟ್‌ನ ಕುಟುಂಬಕ್ಕೆ ಈಗ ಕೊರೊನಾ ಸೋಂಕು ಆವರಿಸಿಕೊಂಡಿದೆ. […]

ಕೊರಾನಾಗೆ ಬಲಿಯಾಗಿದ್ದ ವೃದ್ಧ ದಂಪತಿ: ಈಗ ಮಗ, ಸೊಸೆ, ಮೊಮ್ಮಕ್ಕಳಿಗೂ ಅಂಟಿದ ಹೆಮ್ಮಾರಿ
Edited By:

Updated on: Jun 18, 2020 | 1:04 PM

ಬೆಂಗಳೂರು: ಕಷ್ಟಗಳು ಬರಲು ಶುರುವಾದ್ರೆ, ಒಂದರ ಮೇಲೊಂದರಂತೆ ಬರುತ್ತವೆ ಅನ್ನೋ ಮಾತಿದೆ. ಇಂಥದ್ದೇ ಸಂಕಷ್ಟಕ್ಕೆ ಸಿಲುಕಿದೆ ಬಿಟಿಎಮ್‌ ಲೇಔಟ್‌ನ ಕುಟುಂಬವೊಂದು. ಹೌದು, ಕೇವಲ ನಾಲ್ಕು ದಿನಗಳ ಹಿಂದಷ್ಟೇ ಕೊರೊನಾ ಮಾರಿಗೆ ತಂದೆ-ತಾಯಿಗಳನ್ನ ಕಳೆದುಕೊಂಡಿದ್ದ ನತದೃಷ್ಟ ಕುಟುಂಬ ಈಗ ಖುದ್ದು ತಾವೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹಿರಿಯರ ಚಿತೆಯಾರುವುದಕ್ಕೂ ಮುನ್ನ.. ಕುಟುಂಬದ ಐವರಿಗೆ ಸೋಂಕು
ನಾಲ್ಕು ದಿನಗಳ ಹಿಂದೆ ಜಯದೇವ ಆಸ್ಪತ್ರೆಯಲ್ಲಿ ತಾಯಿ ಮತ್ತು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತಂದೆಯನ್ನು ಕಳೆದುಕೊಂಡಿದ್ದ ಬಿಟಿಎಂ ಲೇಔಟ್‌ನ ಕುಟುಂಬಕ್ಕೆ ಈಗ ಕೊರೊನಾ ಸೋಂಕು ಆವರಿಸಿಕೊಂಡಿದೆ. 50 ವರ್ಷದ ಮನೆಯ ಯಜಮಾನ, 45 ವರ್ಷದ ಆತನ ಪತ್ನಿ ಹಾಗೂ ಮೂವರು ಮಕ್ಕಳಿಗೂ ಕೊರೊನಾ ಸೋಂಕು ತಗುಲಿದೆ.

BTM Layout ​​ನಲ್ಲಿ ಆಸ್ಪತ್ರೆಗೆ ಸಾಗಿಸುವಾಗಲೇ ಕೊರೊನಾ ಸೋಂಕಿನಿಂದ ದಂಪತಿ ಸಾವು

ಈ ಕುಟುಂಬಕ್ಕೆ ಕೊರೊನಾ ಸೋಂಕಿರುವುದು ಪತ್ತೆಯಾಗುತ್ತಿದ್ದಂತೆ, ಆರೋಗ್ಯ ಅಧಿಕಾರಿಗಳು ಇವರನ್ನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್‌ ಮಾಡಿದ್ದಾರೆ. ಹಾಗೇನೇ ಬಿಟಿಎಂ ಲೇಔಟ್‌ ಮತ್ತು ಪಕ್ಕದ ಮೈಕೋ ಲೇಔಟ್‌ನ 16ನೇ ರಸ್ತೆಯ ಜನರಲ್ಲಿ ಈಗ ಆತಂಕ ಶುರವಾಗಿದೆ.

Published On - 1:01 pm, Thu, 18 June 20