ಟ್ರ್ಯಾಕ್ಟರ್​​ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಮಗು ಸೇರಿ ಮೂವರ ಸಾವು

ಬೆಳಗಾವಿ: ಟ್ರ್ಯಾಕ್ಟರ್​​ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಐದು ತಿಂಗಳ ಮಗು ಸೇರಿ ಮೂವರು ಮೃತಪಟ್ಟಿರುವ ಭೀಕರ ರಸ್ತೆ ಅಪಘಾತ ಗೋಕಾಕ್ ತಾಲೂಕಿನ ಸಂಗನಕೇರಿ ಬಳಿ ನಡೆದಿದೆ. ಗ್ರಾಮದ ಬಳಿ ಬೈಕ್, ಟ್ರ್ಯಾಕ್ಟರ್, ಕ್ರೂಸರ್ ನಡುವೆ ಅಪಘಾತ ಸಂಭವಿಸಿದೆ. ಈ ಪರಿಣಾಮ ಮೂವರ ನೆತ್ತರು ಹರಿದಿದೆ. ಮೃತರು ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ನಿವಾಸಿಗಳು. ಬೈಕ್​ನಲ್ಲಿ ಹಿಡಕಲ್​ಗೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಟ್ರ್ಯಾಕ್ಟರ್​​ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಮಗು ಸೇರಿ ಮೂವರ ಸಾವು

Updated on: Oct 17, 2020 | 2:32 PM

ಬೆಳಗಾವಿ: ಟ್ರ್ಯಾಕ್ಟರ್​​ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಐದು ತಿಂಗಳ ಮಗು ಸೇರಿ ಮೂವರು ಮೃತಪಟ್ಟಿರುವ ಭೀಕರ ರಸ್ತೆ ಅಪಘಾತ ಗೋಕಾಕ್ ತಾಲೂಕಿನ ಸಂಗನಕೇರಿ ಬಳಿ ನಡೆದಿದೆ. ಗ್ರಾಮದ ಬಳಿ ಬೈಕ್, ಟ್ರ್ಯಾಕ್ಟರ್, ಕ್ರೂಸರ್ ನಡುವೆ ಅಪಘಾತ ಸಂಭವಿಸಿದೆ. ಈ ಪರಿಣಾಮ ಮೂವರ ನೆತ್ತರು ಹರಿದಿದೆ.

ಮೃತರು ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ನಿವಾಸಿಗಳು. ಬೈಕ್​ನಲ್ಲಿ ಹಿಡಕಲ್​ಗೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.