ಆಗಸದಲ್ಲಿ ಬಾನಾಡಿಗಳ ಚಿತ್ತಾರ.. ಚಿಲಿಪಿಲಿಗಳ ಕಲರವ, ಗದಗದಲ್ಲಿ ವಿದೇಶಿ ಪಕ್ಷಿಗಳ ಸ್ವಚ್ಚಂದ ವಿಹಾರ
ಗದಗ: ಅವರು ಫಾರಿನ್‌ನಿಂದ ಬರೋ ಅತಿಥಿಗಳು. ವರ್ಷಕ್ಕೊಮ್ಮೆ ಅಲ್ಲಿಗೆ ಟ್ರಿಪ್ಗೆ ಬರ್ತಾರೆ. ಬಂದು ಲವರ್ ಜೊತೆ ಜಾಲಿ ಮಾಡ್ತಾರೆ. ತಾವು ಜಾಲಿ ಮಾಡೋದ್ರ ಜತೆಗೆ ಬಾನಂಗಳದಲ್ಲಿ ಚಿತ್ತಾರ ಮೂಡಿಸ್ತಾರೆ. ಇದನ್ನ ನೋಡಿ ಅಲ್ಲಿದ್ದವರು ಮಸ್ತ್ ಎಂಜಾಯ್ ಮಾಡ್ತಾರೆ. ಆಗಸದಲ್ಲಿ ಬಾನಾಡಿಗಳ ಚಿತ್ತಾರ.. ನೀರಿನಲೆಗಳ ನಡುವೆ ಚಿಲಿಪಿಗಳ ಕಲರವ.. ನೀರಲ್ಲಿ ಮುಳುಗಿ ತುಂಟಾಟ.. ಮತ್ತೆ ಆಗಸಕ್ಕೆ ಹಾರಿ ಚೆಲ್ಲಾಟ. ತಮ್ಮದೇ ಲೋಕದಲ್ಲಿ ಹೀಗೆ ಸ್ವಚ್ಛಂದವಾಗಿ ವಿಹರಿಸ್ತಿರೋ ಪಕ್ಷಿಪ್ರಪಂಚವನ್ನ ನೋಡೋಕೆ ಎಷ್ಟು ಸುಂದರ ಅಲ್ವಾ.. ದೂರದೂರಿಂದ ಬರುವ ಅಪರೂಪದ ಅತಿಥಿಗಳ […]

ಗದಗ: ಅವರು ಫಾರಿನ್‌ನಿಂದ ಬರೋ ಅತಿಥಿಗಳು. ವರ್ಷಕ್ಕೊಮ್ಮೆ ಅಲ್ಲಿಗೆ ಟ್ರಿಪ್ಗೆ ಬರ್ತಾರೆ. ಬಂದು ಲವರ್ ಜೊತೆ ಜಾಲಿ ಮಾಡ್ತಾರೆ. ತಾವು ಜಾಲಿ ಮಾಡೋದ್ರ ಜತೆಗೆ ಬಾನಂಗಳದಲ್ಲಿ ಚಿತ್ತಾರ ಮೂಡಿಸ್ತಾರೆ. ಇದನ್ನ ನೋಡಿ ಅಲ್ಲಿದ್ದವರು ಮಸ್ತ್ ಎಂಜಾಯ್ ಮಾಡ್ತಾರೆ.
ಆಗಸದಲ್ಲಿ ಬಾನಾಡಿಗಳ ಚಿತ್ತಾರ.. ನೀರಿನಲೆಗಳ ನಡುವೆ ಚಿಲಿಪಿಗಳ ಕಲರವ.. ನೀರಲ್ಲಿ ಮುಳುಗಿ ತುಂಟಾಟ.. ಮತ್ತೆ ಆಗಸಕ್ಕೆ ಹಾರಿ ಚೆಲ್ಲಾಟ.
ತಮ್ಮದೇ ಲೋಕದಲ್ಲಿ ಹೀಗೆ ಸ್ವಚ್ಛಂದವಾಗಿ ವಿಹರಿಸ್ತಿರೋ ಪಕ್ಷಿಪ್ರಪಂಚವನ್ನ ನೋಡೋಕೆ ಎಷ್ಟು ಸುಂದರ ಅಲ್ವಾ.. ದೂರದೂರಿಂದ ಬರುವ ಅಪರೂಪದ ಅತಿಥಿಗಳ ಖುಷಿಗೆ ಪಾರವೇ ಇಲ್ಲ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶೆಟ್ಟಿಕೇರಿ ಗ್ರಾಮದ ಕೆರೆಯಲ್ಲೀಗ ಈ ಬಾನಾಡಿಗಳದ್ದೇ ಕಲರವ. ಪ್ರತಿವರ್ಷದಂತೆ ಈ ವರ್ಷವೂ ಸಾವಿರಾರು ವಿದೇಶಿ ಪಕ್ಷಿಗಳು ಈ ಕೆರೆಗೆ ಬಂದು ವಿಹರಿಸುತ್ತಿದ್ದು, ಪ್ರವಾಸಿಗರನ್ನು ಸೆಳೆಯುತ್ತಿವೆ.
ಕೆರೆಯಲ್ಲಿ ಪಕ್ಷಿಗಳು ಸ್ವಚ್ಛಂದವಾಗಿ ವಿಹರಿಸುವುದನ್ನ ನೋಡೋದೆ ಕಣ್ಣಿಗೆ ಆನಂದ. ಇನ್ನೊಂದು ತಿಂಗಳ ಕಳೆದ್ರೆ ಸಾಕು ಬೇರೆ ಬೇರೆ ದೇಶಗಳಿಂದ ಮತ್ತಷ್ಟು ಪಕ್ಷಿಗಳು ಬರುತ್ತವೆ. ಹೀಗಾಗಿ ಅರಣ್ಯ ಇಲಾಖೆ ಸುತ್ತಲೂ ಬಿದಿರಿನ ಸಸಿ ನಡೆಸುತ್ತಿದೆ. ಕೆರೆಯನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಸುತ್ತಲೂ 20 ಸಾವಿರ ಬಿದಿರು ಸಸಿಗಳನ್ನು ನೆಡೆಸಲಾಗುತ್ತಿದೆ.
ಎಲ್ಲಿಂದಲೋ ಬಂದಿರೋ ಬಾನಾಡಿಗಳು ತುಂಬಿದ ಕೆರೆಯಲ್ಲಿ ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದು, ಸಾವಿರಾರು ಪಕ್ಷಿಗಳ ನೋಟ ಜನರನ್ನ ಸಳೆಯುತ್ತಿರುವುದು ಮಾತ್ರ ಸುಳ್ಳಲ್ಲ.










