
ಆನೇಕಲ್: ಕೆಲ ದಿನಗಳ ಹಿಂದೆ ನಗರದ ಬೇಗೂರಿನ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನ ಜನಕ್ಕೆ ಆತಂಕ ಹುಟ್ಟಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಸುಮಾರು 15 ವರ್ಷದ ಗಂಡು ಚಿರತೆ ಸಿಕ್ಕಿ ಬಿದ್ದಿದೆ. ಸದ್ಯ ಚಿರತೆ ಸೆರೆಯಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ವೈದ್ಯಕೀಯ ಚಿಕಿತ್ಸೆಗಾಗಿ ಚಿರತೆಯನ್ನು ಬನ್ನೇರುಘಟ್ಟ ಉದ್ಯಾನವನಕ್ಕೆ ರವಾನೆ ಮಾಡಲಾಗಿದ್ದು,ವೈದ್ಯಕೀಯ ಚಿಕಿತ್ಸೆ ನಂತರ ಅರಣ್ಯದಲ್ಲಿ ಬಿಡುವ ನಿರ್ಧಾರ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಬೆಂಗಳೂರಿನ ಬೇಗೂರು ಬಳಿಯ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನ ಜನ ಆತಂಕದಲ್ಲೇ ಕಾಲ ಕಳೆಯುವಂತಹ ಪರಿಸ್ಥಿತಿ ಉಂಟಾಗಿತ್ತು. ಏಕೆಂದ್ರೆ ಚಿರತೆಯೊಂದು ಎರಡು ಬಾರಿ ಬಂದೇ ಸ್ಥಳದಲ್ಲಿ ಓಡಾಡುವ ಬಗ್ಗೆ ಸುಳಿವು ಸಿಕ್ಕಿತ್ತು. ಅಪಾರ್ಟ್ಮೆಂಟ್ನ ಸುತ್ತಾ ಮುತ್ತಾ ಚಿರತೆ ಓಡಾಡುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.
ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರಲ್ಲಿ ಆತಂಕ ಮನೆ ಮಾಡಿತ್ತು. ಜನ ಮನೆಯಿಂದಾಚೆಗೆ ಕಾಲಿಡಲೂ ಭಯ ಪಡುತ್ತಿದ್ದರು. ಈ ನಡುವೆ ಚಿರತೆ ಅಪಾರ್ಟ್ಮೆಂಟ್ನ ಒಳಗೆ ನುಗ್ಗಿದೆ ಎಂಬ ಸುದ್ದಿ ಹರಿದಾಡಿತ್ತು. ಈ ವೇಳೆ ಅರಣ್ಯ ಇಲಾಖೆ ಮಾಸ್ಟರ್ ಪ್ಲಾನ್ ಮಾಡಿ (Operation Cheetah) ಚಿರತೆಯನ್ನು ಸೆರೆ ಹಿಡಿಯಲು ಬೋನನ್ನು ಇಟ್ಟು ಅದರೊಳಗೆ ಕುರಿ ಮರಿಯನ್ನು ಬಿಟ್ಟಿತ್ತು. ಸದ್ಯ ನಾಲ್ಕೈದು ದಿನಗಳ ಬಳಿಕ ಚಿರತೆ ಸೆರೆಯಾಗಿದ್ದು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ಬೆಂಗಳೂರಿನ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ಬಳಿ ಚಿರತೆ ಮತ್ತೆ ಪ್ರತ್ಯಕ್ಷ!
Published On - 8:48 am, Mon, 1 February 21