3 ವರ್ಷದ ಮಗುವನ್ನ ಕೊಂದಿದ್ದ ನರಭಕ್ಷಕ ಚಿರತೆ ಸಂಹಾರಕ್ಕೆ ಮುಹೂರ್ತ ಫಿಕ್ಸ್?

ತುಮಕೂರು: ಕಲ್ಪತರುನಾಡು ತುಮಕೂರಿನಲ್ಲಿ ನರಭಕ್ಷಕ ಚಿರತೆ ಮತ್ತೆ ಅಟ್ಟಹಾಸ ಮೆರೆದಿದ್ದು, ಹೆಬ್ಬೂರು ಹೋಬಳಿಯ ಬೈಚೇನಹಳ್ಳಿ ಗ್ರಾಮದಲ್ಲಿ ಮೂರು ವರ್ಷದ ಚಂದನಾ ಮೇಲೆ ಚಿರತೆ ಅಟ್ಯಾಕ್ ಮಾಡಿದೆ. ಪ್ರಕರಣ ಸಂಬಂಧ ನರಭಕ್ಷಕ ಚಿರತೆಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ರಾಜ್ಯ ಸರ್ಕಾರ ಆದೇಶಿಸಿದೆ. ಘಟನಾ ಸ್ಥಳಕ್ಕೆ ಅರಣ್ಯ ಸಚಿವ ಆನಂದ್ ಸಿಂಗ್ ಭೇಟಿ ನೀಡಿ ಬಾಲಕಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಆನಂದ್ ಸಿಂಗ್ ಎದುರು ನ್ಯಾಯಕ್ಕಾಗಿ ಬೈಚೇನಹಳ್ಳಿಯ ಗ್ರಾಮಸ್ಥರು ಆಗ್ರಹಿಸಿದರು. DFO, ಅರಣ್ಯ ಇಲಾಖೆ ಅಧಿಕಾರಿಗಳ ಅಮಾನತಿಗೆ ಒತ್ತಾಯಿಸಿದರು. ಇದೇ […]

3 ವರ್ಷದ ಮಗುವನ್ನ ಕೊಂದಿದ್ದ ನರಭಕ್ಷಕ ಚಿರತೆ ಸಂಹಾರಕ್ಕೆ ಮುಹೂರ್ತ ಫಿಕ್ಸ್?
ಸಾಧು ಶ್ರೀನಾಥ್​

Updated on: Mar 01, 2020 | 1:12 PM

ತುಮಕೂರು: ಕಲ್ಪತರುನಾಡು ತುಮಕೂರಿನಲ್ಲಿ ನರಭಕ್ಷಕ ಚಿರತೆ ಮತ್ತೆ ಅಟ್ಟಹಾಸ ಮೆರೆದಿದ್ದು, ಹೆಬ್ಬೂರು ಹೋಬಳಿಯ ಬೈಚೇನಹಳ್ಳಿ ಗ್ರಾಮದಲ್ಲಿ ಮೂರು ವರ್ಷದ ಚಂದನಾ ಮೇಲೆ ಚಿರತೆ ಅಟ್ಯಾಕ್ ಮಾಡಿದೆ. ಪ್ರಕರಣ ಸಂಬಂಧ ನರಭಕ್ಷಕ ಚಿರತೆಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ರಾಜ್ಯ ಸರ್ಕಾರ ಆದೇಶಿಸಿದೆ.

ಘಟನಾ ಸ್ಥಳಕ್ಕೆ ಅರಣ್ಯ ಸಚಿವ ಆನಂದ್ ಸಿಂಗ್ ಭೇಟಿ ನೀಡಿ ಬಾಲಕಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಆನಂದ್ ಸಿಂಗ್ ಎದುರು ನ್ಯಾಯಕ್ಕಾಗಿ ಬೈಚೇನಹಳ್ಳಿಯ ಗ್ರಾಮಸ್ಥರು ಆಗ್ರಹಿಸಿದರು. DFO, ಅರಣ್ಯ ಇಲಾಖೆ ಅಧಿಕಾರಿಗಳ ಅಮಾನತಿಗೆ ಒತ್ತಾಯಿಸಿದರು. ಇದೇ ವೇಳೆ ಸಚಿವ ಆನಂದ್ ಸಿಂಗ್ ಎದುರು ಬಾಲಕಿ ಕುಟುಂಬಸ್ಥರು ಅಳಲು ತೊಡಿಕೊಂಡರು. ಪುಟ್ಟ ಕಂದಮ್ಮನನ್ನು ಕೊಂದ ಚಿರತೆಯನ್ನು ಗುಂಡಿಕ್ಕಿ ಕೊಲ್ಲುವಂತೆ ಗ್ರಾಮಸ್ಥರು ತಾಕೀತು ಮಾಡಿದರು.

ಮೃತ ಬಾಲಕಿ ಕುಟುಂಬಕ್ಕೆ ಪರಿಹಾರ:
ಕುಟುಂಬಸ್ಥರ ನೋವು ಆಲಿಸಿದ ಸಚಿವ ಆನಂದ್ ಸಿಂಗ್, ಚಿರತೆ ದಾಳಿಗೆ ಬಲಿಯಾದ ಬಾಲಕಿ ಕುಟುಂಬಕ್ಕೆ ಸರ್ಕಾರದಿಂದ 7.5 ಲಕ್ಷ ರೂ. ಪರಿಹಾರ ಕೊಡುವುದಾಗಿ ಹೇಳಿದರು. 5 ವರ್ಷಗಳ ಕಾಲ ಬಾಲಕಿ ಕುಟುಂಬಕ್ಕೆ 2,000 ರೂ. ಮಾಸಾಶನ ನೀಡುವುದಾಗಿ ಭರವಸೆ ನೀಡಿದರು.

ಚಿರತೆ ಹಾವಳಿ ತಡೆಗೆ ಕ್ರಮ:
ಇದಕ್ಕೂ ಮುನ್ನ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಸಾಂತ್ವನ ಹೇಳಿದರು. ಅರಣ್ಯ ಸಚಿವ ಆನಂದ್ ಸಿಂಗ್ ಜತೆ ಚರ್ಚೆ ಮಾಡಿ ಚಿರತೆಯನ್ನು ಸಾಯಿಸಲು ಆದೇಶಿಸಲಾಗಿದೆ. ನಾಳೆ ಬೆಳಗ್ಗೆಯೇ ಚಿರತೆ ಶೂಟ್ ಮಾಡಲು ಕಾರ್ಯಾಚರಣೆ ಕೈಗೊಳ್ಳುತ್ತಾರೆ. ಕೂಡಲೇ ಜಿಲ್ಲಾಡಳಿತ, ಸ್ಥಳೀಯ ಆಡಳಿತ ಸಭೆ ಕರೆದು ಚಿರತೆ ಹಾವಳಿ ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಮಾಧುಸ್ವಾಮಿ ಭರವಸೆ ನೀಡಿದರು.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us