ಹಿಂಡು ಹಿಂಡಾಗಿ ಕಾಡಾನೆ ದಾಳಿ: ಗಜಪಡೆ ಅಟ್ಟಹಾಸಕ್ಕೆ ಅರಣ್ಯ ಸಿಬ್ಬಂದಿ ಸೇರಿ ಇಬ್ಬರು ಬಲಿ!
ಕೋಲಾರ: ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಕಾಡಾನೆ ಹಿಂಡು ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಮೃತಪಟ್ಟಿರುವ ಘಟನೆ ಮಾಲೂರು ತಾಲೂಕಿನ ನೂಟವೆ ಗ್ರಾಮ ಬಳಿ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಗುಟ್ಟು ಮುನಿಯಪ್ಪ ಹಾಗೂ ಕೊಮ್ಮನಹಳ್ಳಿ ನಿವಾಸಿ ಆನಂದ್ ಮೃತ ದುರ್ದೈವಿಗಳು. ಕಳೆದ ಒಂದು ತಿಂಗಳಿನಿಂದ ಜಿಲ್ಲೆಯ ಗಡಿಯಲ್ಲಿ ಕಾಡಾನೆ ಹಿಂಡು ಬೀಡು ಬಿಟ್ಟಿತ್ತು. ಲಕ್ಷಾಂತರ ರೂಪಾಯಿ ಮೌಲ್ಯದ ರೈತರ ಬೆಳಗಳನ್ನ ಕಾಡಾನೆಗಳು ನಾಶ ಮಾಡಿದ್ದವು. ಹೀಗಾಗಿ ಕಳೆದ ಒಂದು ತಿಂಗಳಿನಿಂದ ಸತತವಾಗಿ ಆನೆ ಹಿಮ್ಮೆಟ್ಟಿಸುವ […]
ಕೋಲಾರ: ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಕಾಡಾನೆ ಹಿಂಡು ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಮೃತಪಟ್ಟಿರುವ ಘಟನೆ ಮಾಲೂರು ತಾಲೂಕಿನ ನೂಟವೆ ಗ್ರಾಮ ಬಳಿ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಗುಟ್ಟು ಮುನಿಯಪ್ಪ ಹಾಗೂ ಕೊಮ್ಮನಹಳ್ಳಿ ನಿವಾಸಿ ಆನಂದ್ ಮೃತ ದುರ್ದೈವಿಗಳು.
ಕಳೆದ ಒಂದು ತಿಂಗಳಿನಿಂದ ಜಿಲ್ಲೆಯ ಗಡಿಯಲ್ಲಿ ಕಾಡಾನೆ ಹಿಂಡು ಬೀಡು ಬಿಟ್ಟಿತ್ತು. ಲಕ್ಷಾಂತರ ರೂಪಾಯಿ ಮೌಲ್ಯದ ರೈತರ ಬೆಳಗಳನ್ನ ಕಾಡಾನೆಗಳು ನಾಶ ಮಾಡಿದ್ದವು. ಹೀಗಾಗಿ ಕಳೆದ ಒಂದು ತಿಂಗಳಿನಿಂದ ಸತತವಾಗಿ ಆನೆ ಹಿಮ್ಮೆಟ್ಟಿಸುವ ಕಾರ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತೊಡಗಿದ್ದರು. ಇಂದು ನೂಟವೆ ಗ್ರಾಮದ ಬಳಿ ಕಾಡಾನೆ ಹಿಮ್ಮೆಟ್ಟಿಸುವ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆಯೇ ಆನೆಗಳು ದಾಳಿ ನಡೆಸಿದ್ದು, ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದರು.
ಗಂಭೀರವಾಗಿ ಗಾಯಗೊಂಡ ಅರಣ್ಯ ಇಲಾಖೆ ಸಿಬ್ಬಂದಿ ಗುಟ್ಟು ಮುನಿಯಪ್ಪ ಮತ್ತು ಮೂರ್ತಿ ಕೋಲಾರದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಗುಟ್ಟು ಮುನಿಯಪ್ಪ ಸಾವಿಗೀಡಾಗಿದ್ದಾರೆ. ಕಾಡಾನೆಗಳನ್ನು ಅರಣ್ಯಕ್ಕೆ ಹಿಮ್ಮೆಟ್ಟುವ ಕಾರ್ಯಾಚರಣೆ ನೋಡಲು ಹೋಗಿದ್ದ ಕೊಮ್ಮನಹಳ್ಳಿ ನಿವಾಸಿ ಆನಂದ್ ಸಹ ಚಿಕಿತ್ಸೆ ಫಲಿಸದೆ ತೊರಲಕ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
Published On - 8:20 pm, Mon, 2 March 20