ಚಿತ್ರದುರ್ಗ: ಮಾಜಿ ಸಚಿವ ಜನಾರ್ದನ ರೆಡ್ಡಿ ಹಿರಿಯೂರಿಗೆ ಭೇಟಿ ನೀಡಿದ್ದು, ರಾಜಕೀಯವಾಗಿ ಸಕ್ರಿಯರಾಗಲು ಮುಂದಾಗಿದ್ದಾರೆ. ಇದರಿಂದ ಜಿಲ್ಲೆಯ ಹಿರಿಯೂರು ವಿಧಾನಸಭೆ ಕ್ಷೇತ್ರದಲ್ಲಿ ರಾಜಕೀಯ ಗರಿಗೆದರಿದೆ. ವಾಣಿ ವಿಲಾಸಪುರ ಬಳಿಯ ಫಾರ್ಮ್ ಹೌಸ್ ನಲ್ಲಿ ಮುಖಂಡರನ್ನು ಭೇಟಿಯಾಗಿದ್ದಾರೆ. ಮೊನ್ನೆ ಭಾನುವಾರ ಸಂಜೆ ಮಂಜುನಾಥ್ ಎಂಬುವರ ಫಾರ್ಮ್ ಹೌಸ್ ಗೆ ಜನಾರ್ದನ ರೆಡ್ಡಿ ಭೇಟಿ ನೀಡಿದ್ದಾರೆ.
ಈ ವೇಳೆ ಜನಾರ್ದನ ರೆಡ್ಡಿ ಕೆಲ ಮುಖಂಡರನ್ನು ಭೇಟಿ ಮಾಡಿ, ತಾಲೂಕಿನ ಬಗ್ಗೆ ರಾಜಕೀಯವಾಗಿ ಮಾಹಿತಿ ಪಡೆದಿದ್ದಾರೆ. ಈ ವೇಳೆ, ತಮ್ಮ ಪತ್ನಿ ಅರುಣಾ ಲಕ್ಷ್ಮಿ ಅವರನ್ನು ಹಿರಿಯೂರಿನಿಂದ ಕಣಕ್ಕಿಳಿಸುವ ಬಗ್ಗೆ ರೆಡ್ಡಿ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಹಾಗಾದರೆ ಹಿರಿಯೂರು ಕ್ಷೇತ್ರದ ಬಿಜೆಪಿ ಹಾಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮತ್ತು ಹಿರಿಯೂರಿನ ಮಾಜಿ ಶಾಸಕ ಡಿ. ಸುಧಾಕರ್ ಗೆ ಟಕ್ಕರ್ ಕೊಡಲು ರೆಡ್ಡಿ ಪ್ಲಾನ್ ಮಾಡಿದ್ದಾರಾ? ಎಂಬ ಗುಸುಗುಸು ಆರಂಭವಾಗಿದೆ. ಒಟ್ನಲ್ಲಿ, ಜನಾರ್ದನ ರೆಡ್ಡಿ ಹಿರಿಯೂರು ಭೇಟಿಯ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ.