BDA ಅಕ್ರಮ ನೋಟಿಸ್ ಕೊಟ್ಟಾಗ ಇದ್ದ ಹೆಸರು.. ಎಫ್​ಐಆರ್​ನಲ್ಲಿ ಕಾಣದಂತೆ ಮಾಯವಾಯ್ತು! ಪ್ರಭಾವಿಗಳ ಕೈವಾಡ?

ಬಿಡಿಎ ಸೈಟ್ ಅಕ್ರಮವಾಗಿ ಅಲಾಟ್​ ಕೇಸ್​​ನಲ್ಲಿ FIR ನೋಟಿಸ್ ಕೊಟ್ಟಾಗ ಇದ್ದ ಹೆಸರು ಎಫ್​ಐಆರ್​ನಲ್ಲಿ ಮಂಗಮಾಯವಾಗಿದೆ. ನೋಟಿಸ್ ಕೊಟ್ಟಾಗ ಇದ್ದ ಹೆಸರು ಎಫ್​ಐಆರ್​ನಲ್ಲಿಲ್ಲ.

BDA ಅಕ್ರಮ ನೋಟಿಸ್ ಕೊಟ್ಟಾಗ ಇದ್ದ ಹೆಸರು.. ಎಫ್​ಐಆರ್​ನಲ್ಲಿ ಕಾಣದಂತೆ ಮಾಯವಾಯ್ತು! ಪ್ರಭಾವಿಗಳ ಕೈವಾಡ?
ಬಿಡಿಎ ಕಚೇರಿ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Mar 02, 2021 | 10:57 AM

ಬೆಂಗಳೂರು: ಬಿಡಿಎ ಸೈಟ್ ಅಕ್ರಮವಾಗಿ ಅಲಾಟ್ ಆಗಿರುವ​ ಕೇಸ್​​ನಲ್ಲಿ ನೋಟಿಸ್ ಕೊಟ್ಟಾಗ ಇದ್ದ ಹೆಸರು ಎಫ್​ಐಆರ್​ನಲ್ಲಿ (FIR)  ಮಂಗಮಾಯವಾಗಿದೆ. ನೋಟಿಸ್ ಕೊಟ್ಟಾಗ ಇದ್ದ ಹೆಸರು ಎಫ್​ಐಆರ್​ನಲ್ಲಿಲ್ಲ. ಎಫ್​ಐಆರ್​ನಲ್ಲಿ ಆ ಹೆಸರು ಕೈ ಬಿಡಲು ಕಾರಣವೇನು? ಹೆಸರು ಕೈ ಬಿಡೋದ್ರ ಹಿಂದಿದ್ಯಾ ಪ್ರಭಾವಿಗಳ ಕೈವಾಡ? ಕೈ ಬಿಟ್ಟಿದ್ದು ಯಾರ ಹೆಸರನ್ನ? ಎಂಬುವುದರ ಮಾಹಿತಿ ಇಲ್ಲಿದೆ ಓದಿ.

ಅನಾಥ ಮಕ್ಕಳ ಆಭಿವೃದ್ದಿ ಸಂಘಕ್ಕೆ ನೀಡಿರೋ BDA ಸೈಟನ್ನು ಅಕ್ರಮವಾಗಿ ಅಲಾಟ್ ಮಾಡಿಕೊಂಡಿದ್ದ ಕೇಸ್​​ಗೆ ಸಂಬಂಧಿಸಿ ಬಿಡಿಎನಲ್ಲಿ ಕೆಲಸ ಮಾಡಿದ್ದ ನಾಲ್ವರು ಅಧಿಕಾರಿಗಳಿಗೆ ಬಿಡಿಎ ಆಯುಕ್ತ H.R.ಮಹದೇವ್ ನೋಟಿಸ್ ನೀಡಿದ್ದರು.

FIRನಲ್ಲಿ ಚಿದಾನಂದ ಹೆಸರಿಲ್ಲ.. ಅನಿಲ್ ಕುಮಾರ್​, ಸುಧಾ, ಭಾಸ್ಕರ್ ಸೇರಿ ನಾಲ್ವರು ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿತ್ತು. ಇದೇ ವಿಚಾರ ಸಂಬಂಧ ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿತ್ತು. ಆದ್ರೆ ಈಗ ಪೊಲೀಸರ FIR​​ನಲ್ಲಿ ಒಬ್ಬ ಅಧಿಕಾರಿಯ ಹೆಸರೇ ಇಲ್ಲ. ಕೇವಲ ಮೂವರು ಅಧಿಕಾರಿಗಳ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ದಾಖಲಾಗಿರೋ FIRನಲ್ಲಿ ಚಿದಾನಂದ ಹೆಸರಿಲ್ಲ.

ಇನ್ನು ಚಿದಾನಂದ ವಿರುದ್ಧ ನೋಟಿಸ್​​ನಲ್ಲಿ ಗಂಭೀರ ಆರೋಪ ಕೇಳಿ ಬಂದಿದ್ದವು. ನೋಟಿಸ್​​ನಲ್ಲಿ ಕ್ರಮ ಜರುಗಿಸುವ ಬಗ್ಗೆ ಎಚ್ಚರಿಕೆ ನೀಡಿದ್ದರು. ಸದ್ಯ ಚಿದಾನಂದ ಹೆಸರು ಮಾಯಾವಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಯಾಕೆ ದೂರಿನಲ್ಲಿ ಚಿದಾನಂದ ಹೆಸರು ಉಲ್ಲೇಖ ಮಾಡಿಲ್ಲ ಅನ್ನೋ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

ಅಷ್ಟೂ ಅಧಿಕಾರಿಗಳಿಗೆ ನೀಡಿರೋ ನೋಟಿಸ್​ನಲ್ಲಿ ಕ್ರಮ ಜರುಗಿಸೋ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ನೋಟಿಸ್​ಗೆ ಉತ್ತರ ನೀಡುವಂತೆಯೂ ಸೂಚಿಸಲಾಗಿತ್ತು. ಆದ್ರೆ ಈಗ ಎಲ್ಲರ ವಿರುದ್ಧ FIR ದಾಖಲಾಗಿದ್ರು ಒಬ್ಬರ ಹೆಸರು ಮಿಸ್ ಆಗಿದೆ. ಇದಕ್ಕೆ ಕಾರಣವೇನು ಎಂಬುದು ತಿಳಿದು ಬರಬೇಕಿದೆ.

ಇದನ್ನೂ ಓದಿ: ಬಿಡಿಎಯಿಂದ ಮತ್ತೊಂದು ಹೊಸ ಲೇಔಟ್ ನಿರ್ಮಾಣ: ಸುಮಾರು 450 ಎಕರೆ ಜಮೀನು ಸ್ವಾಧೀನಕ್ಕೆ ಸರ್ಕಾರದಿಂದ ಗ್ರೀನ್‌ ಸಿಗ್ನಲ್..!

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ