AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KRS Dam ಮೇಲೆ ಯುವಕನ ಖಾಸಗಿ ದರ್ಬಾರ್​ಗೆ ಸಹಾಯ ಮಾಡಿದ್ದಕ್ಕೆ ಕೆಎಸ್ಐಎಸ್‌ಎಫ್ ಇನ್ಸ್‌ಪೆಕ್ಟರ್ ಸಸ್ಪೆಂಡ್

KRS ಡ್ಯಾಂನ ಭದ್ರತಾ ಮೇಲುಸ್ತುವಾರಿಯಾಗಿದ್ದ ಸ್ವಾಮಿ ಯುವಕನೋರ್ವನಿಗೆ ಡ್ಯಾಂ ಮೇಲೆ ಪೊಲೀಸ್ ವಾಹನ ಚಲಾಯಿಸಲು ಬಿಟ್ಟಿದ್ದರು. ಹೀಗಾಗಿ ಪೊಲೀಸ್ ಇಲಾಖೆ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳಿಂದ S.B.ಸ್ವಾಮಿ ಅವರನ್ನು ಸಸ್ಪೆಂಡ್ ಮಾಡಿ ಆದೇಶಿಸಲಾಗಿದೆ.

KRS Dam ಮೇಲೆ ಯುವಕನ ಖಾಸಗಿ ದರ್ಬಾರ್​ಗೆ ಸಹಾಯ ಮಾಡಿದ್ದಕ್ಕೆ ಕೆಎಸ್ಐಎಸ್‌ಎಫ್ ಇನ್ಸ್‌ಪೆಕ್ಟರ್ ಸಸ್ಪೆಂಡ್
ಕೆಆರ್‌ಎಸ್ ಡ್ಯಾಂ ಮೇಲೆ ಜೀಪ್​ ಚಲಾಯಿಸಿ ಯುವಕನೊಬ್ಬನ ಅಂಧಾದರ್ಬಾರ್!
ಆಯೇಷಾ ಬಾನು
| Edited By: |

Updated on:Mar 02, 2021 | 10:16 AM

Share

ಮಂಡ್ಯ: KRS ಡ್ಯಾಂ ಮೇಲೆ ಯುವಕನ ಅಂಧಾದರ್ಬಾರ್ ಕೇಸ್​ಗೆ ಸಂಬಂಧಿಸಿ ಅಂಧಾದರ್ಬಾರ್‌ಗೆ ಸಾಥ್ ನೀಡಿದ್ದ ಕೆಎಸ್ಐಎಸ್‌ಎಫ್ (Karnataka State Industrial Security Force – KSISF) ಇನ್ಸ್‌ಪೆಕ್ಟರ್ S.B.ಸ್ವಾಮಿ ಸಸ್ಪೆಂಡ್ ಮಾಡಲಾಗಿದೆ. KRS ಡ್ಯಾಂನ ಭದ್ರತಾ ಮೇಲುಸ್ತುವಾರಿಯಾಗಿದ್ದ ಸ್ವಾಮಿ ಯುವಕನೋರ್ವನಿಗೆ ಡ್ಯಾಂ ಮೇಲೆ ಪೊಲೀಸ್ ವಾಹನ ಚಲಾಯಿಸಲು ಬಿಟ್ಟಿದ್ದರು. ಹೀಗಾಗಿ ಪೊಲೀಸ್ ಇಲಾಖೆ ಆಂತರಿಕ ಭದ್ರತಾ ವಿಭಾಗದಿಂದ S.B. ಸ್ವಾಮಿ ಅವರನ್ನು ಸಸ್ಪೆಂಡ್ ಮಾಡಿ ಆದೇಶಿಸಲಾಗಿದೆ.

ಘಟನೆ ವಿವರ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ ಮೇಲೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆದ್ರೆ ನಿರ್ಬಂಧವಿದ್ದರೂ ಪೊಲೀಸರಿಂದಲೇ ನಿಯಮ ಉಲ್ಲಂಘನೆಯಾಗಿದೆ. ಭದ್ರತೆ ನೋಡಿಕೊಳ್ಳಬೇಕಿದ್ದ S.B.ಸ್ವಾಮಿ ಯುವಕನ ಮೋಜು ಮಸ್ತಿಗೆ, ಕೆಆರ್‌ಎಸ್ ಡ್ಯಾಂ ಮೇಲೆ ವಾಹನ ಚಲಾಯಿಸಲು ಸರ್ಕಾರಿ ವಾಹನವನ್ನೇ ಕೊಟ್ಟಿದ್ದರು. ಡ್ಯಾಂ ಮೇಲೆ ಪೊಲೀಸ್ ಚೀಪ್ ಚಲಾಯಿಸಿದ್ದಲ್ಲದೇ ಮೊಬೈಲ್​ನಲ್ಲಿ ವಿಡಿಯೋ ಮಾಡಿದ್ದರು.

ಫೆಬ್ರವರಿ 09 ರಂದು ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿತ್ತು. ಯುವಕ ಜೀಪ್ ಚಲಾಯಿಸುತ್ತಿದ್ರೆ ಪೊಲೀಸ್ ಅಧಿಕಾರಿ ಸ್ವಾಮಿ ಪಕ್ಕದಲ್ಲಿ ಕೂತು ಮೊಬೈಲ್​ನಲ್ಲಿ ಶೂಟ್ ಮಾಡಿದ್ದರು. ಈ ಬಗ್ಗೆ ಟಿವಿ9ನಲ್ಲಿ ಈ ಬಗ್ಗೆ ವರದಿ ಪ್ರಸಾರ ಮಾಡಲಾಗಿತ್ತು. ಕೆಆರ್​ಎಸ್​ ಡ್ಯಾಂ ಮೇಲೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿದ್ದರೂ ಈ ರೀತಿ ಆಟಕ್ಕೆ ಸಾರ್ಥ ನೀಡಿದಕ್ಕೆ ಇನ್ಸ್‌ಪೆಕ್ಟರ್ S.B.ಸ್ವಾಮಿ ಸಸ್ಪೆಂಡ್ ಮಾಡಲಾಗಿದೆ.

ಇದನ್ನೂ ಓದಿ: KRS Dam ಮೇಲೆ ಯುವಕನ ಖಾಸಗಿ ದರ್ಬಾರ್! ಡ್ಯಾಂ ಮೇಲೆ ಪೊಲೀಸ್ ಜೀಪ್ ಚಲಾಯಿಸಿದ್ದಲ್ಲದೇ ಮೊಬೈಲ್ ನಲ್ಲಿ ಚಿತ್ರೀಕರಣ!

Published On - 8:44 am, Tue, 2 March 21