‘ಇದು ತಿನ್ನುವ ಕಾಂಗ್ರೆಸ್’ ಮಾಜಿ ಸ್ಪೀಕರ್ ಕೈಸನ್ನೆಗೆ ಕೈ​ ಕಂಗಾಲು, ವಿಡಿಯೋ ವೈರಲ್!

|

Updated on: Feb 26, 2020 | 10:52 AM

ಬಾಗಲಕೋಟೆ: ಮಾಜಿ ಸ್ಪೀಕರ್ ಕೆ.ಆರ್.ರಮೇಶ್​ ಕುಮಾರ್ ಕೈಸನ್ನೆಗೆ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್​ನಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಇತ್ತೀಚೆಗೆ ಬಾದಾಮಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ವೇಳೆ ಈಗಿನ ಕಾಂಗ್ರೆಸ್ ತಿನ್ನುವ ಕಾಂಗ್ರೆಸ್ ಎಂದು ರಮೇಶ್‌ ಕುಮಾರ್ ಕೈಸನ್ನೆ ಮಾಡಿದ್ದರು. ಹಾಗಾಗಿ ಕಾಂಗ್ರೆಸ್ ಪಕ್ಷದವರು ಕಂಗಾಲಾಗಿದ್ದು, ಮಾಜಿ ಸ್ಪೀಕರ್ ಭಾಷಣಕ್ಕೆ ಬೆಚ್ಚಿಬಿದ್ದಿದ್ದಾರೆ. ಮೂರು ದಿನಗಳ ಹಿಂದೆ ಬಾದಾಮಿಯಲ್ಲಿ ವಿಶ್ವಚೇತನ ಸಂಸ್ಥೆ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿತ್ತು. ಗಾಂಧೀಜಿ, ನೆಹರು ಸ್ವಾತಂತ್ರ್ಯಕ್ಕಾಗಿ ಮಾಡಿದ ಸೇವೆ ಬೇರೆ. ಆದ್ರೆ, ಈಗಿನ ಕಾಂಗ್ರೆಸ್​ಗೂ ಆಗಿನ ಕಾಂಗ್ರೆಸ್​ಗೂ […]

‘ಇದು ತಿನ್ನುವ ಕಾಂಗ್ರೆಸ್’ ಮಾಜಿ ಸ್ಪೀಕರ್ ಕೈಸನ್ನೆಗೆ ಕೈ​ ಕಂಗಾಲು, ವಿಡಿಯೋ ವೈರಲ್!
Follow us on

ಬಾಗಲಕೋಟೆ: ಮಾಜಿ ಸ್ಪೀಕರ್ ಕೆ.ಆರ್.ರಮೇಶ್​ ಕುಮಾರ್ ಕೈಸನ್ನೆಗೆ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್​ನಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಇತ್ತೀಚೆಗೆ ಬಾದಾಮಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ವೇಳೆ ಈಗಿನ ಕಾಂಗ್ರೆಸ್ ತಿನ್ನುವ ಕಾಂಗ್ರೆಸ್ ಎಂದು ರಮೇಶ್‌ ಕುಮಾರ್ ಕೈಸನ್ನೆ ಮಾಡಿದ್ದರು. ಹಾಗಾಗಿ ಕಾಂಗ್ರೆಸ್ ಪಕ್ಷದವರು ಕಂಗಾಲಾಗಿದ್ದು, ಮಾಜಿ ಸ್ಪೀಕರ್ ಭಾಷಣಕ್ಕೆ ಬೆಚ್ಚಿಬಿದ್ದಿದ್ದಾರೆ.

ಮೂರು ದಿನಗಳ ಹಿಂದೆ ಬಾದಾಮಿಯಲ್ಲಿ ವಿಶ್ವಚೇತನ ಸಂಸ್ಥೆ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿತ್ತು. ಗಾಂಧೀಜಿ, ನೆಹರು ಸ್ವಾತಂತ್ರ್ಯಕ್ಕಾಗಿ ಮಾಡಿದ ಸೇವೆ ಬೇರೆ. ಆದ್ರೆ, ಈಗಿನ ಕಾಂಗ್ರೆಸ್​ಗೂ ಆಗಿನ ಕಾಂಗ್ರೆಸ್​ಗೂ ಸಂಬಂಧ ಇಲ್ಲ. ನಾನೇನು ಆ ಕಾಂಗ್ರೆಸ್ ಹೆಸರು ಹೇಳಿಕೊಳ್ಳುವ ಪ್ರಯತ್ನ ಮಾಡಿಲ್ಲ. ಈಗಿನ ಕಾಂಗ್ರೆಸ್ ತಿನ್ನುವ ಕಾಂಗ್ರೆಸ್ ಎಂದು ಭಾಷಣದಲ್ಲಿ ಕಾಂಗ್ರೆಸ್​ ಶಾಸಕ ರಮೇಶ್​ ಕುಮಾರ್ ಕೈಸನ್ನೆ ಮಾಡಿ ತೋರಿಸಿದರು.

ಸಿದ್ದರಾಮಯ್ಯ ಕ್ಷೇತ್ರ ಬಾದಾಮಿಯಲ್ಲಿ ಮಾಜಿ ಸ್ಪೀಕರ್ ಅವರ ಭಾಷಣ ತೀವ್ರ ಇರುಸುಮುರುಸು ಉಂಟಾಗಿದ್ದು, ಮುಖಭಂಗದಿಂದ ತಪ್ಪಿಸಿಕೊಳ್ಳೋದೇ ಜಿಲ್ಲಾ ಕಾಂಗ್ರೆಸ್​ ನಾಯಕರಿಗೆ ಸವಾಲಾಗಿದೆ. ಅಲ್ಲದೆ ಕೆ.ಆರ್.ರಮೇಶ್ ಕುಮಾರ್ ಅವರ ಭಾಷಣ ತುಣುಕು ಸಾಮಾಜಿ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

ಈ ಬಗ್ಗೆ ಬಾಗಲಕೋಟೆ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಾಬರಮತಿ ಆಶ್ರಮದಲ್ಲಿದ್ದು ರಮೇಶ್​ ಕುಮಾರ್ ಮಾತಾಡಬೇಕಿತ್ತು. ಕಾಂಗ್ರೆಸ್ ಪಕ್ಷದ ಶಾಸಕರಾಗಿ ಈ ರೀತಿ ಮಾತನಾಡಿದ್ದು ತಪ್ಪು. ಈ ಬಗ್ಗೆ ದೂರು ನೀಡಲು ಕೆಪಿಸಿಸಿ ಅಧ್ಯಕ್ಷರಿಲ್ಲ. ಹಾಗಾಗಿ ಸಿದ್ದರಾಮಯ್ಯಗೆ ಈ ವಿಚಾರ ಹೇಳುತ್ತೇನೆ ಎಂದರು.

Published On - 10:45 am, Wed, 26 February 20