ರಾತ್ರೋರಾತ್ರಿ ಗುಂಡಿನ ಮೊರೆತ: ಯುವತಿ ಮೇಲೆ ಪಾಗಲ್ ಪ್ರೇಮಿ ಫೈರಿಂಗ್?

ರಾತ್ರೋರಾತ್ರಿ ಗುಂಡಿನ ಮೊರೆತ: ಯುವತಿ ಮೇಲೆ ಪಾಗಲ್ ಪ್ರೇಮಿ ಫೈರಿಂಗ್?

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು. ಇಲ್ಲಿ ನಡೆಯುವ ಅನಾಚಾರ, ದುಷ್ಕೃತ್ಯಗಳಿಗೆ ಲೆಕ್ಕವಿಲ್ಲ. ಇಲ್ಲಿ ಜನ ಆಗಾಗ ರೌಡಿಗಳ ಮೇಲೆ ಪೊಲೀಸರು ಹಾರಿಸುವ ಗುಂಡಿನ ಸದ್ದನ್ನು ಕೇಳ್ತಾ ಇರ್ತಾರೆ. ಅದರಂತೆ ನಿನ್ನ ಕೂಡ ಸಿಲಿಕಾನ್ ಸಿಟಿಯಲ್ಲಿ ಗುಂಡಿನ ಸದ್ದು ಮೊಳಗಿತ್ತು. ಆ ಸದ್ದಿಗೆ ಜನ ಬೆಚ್ಚಿ ಬಿದ್ದಿದ್ರು. ಗುಂಡಿನ ಸದ್ದಿಗೆ ಬೆಚ್ಚಿ ಬಿದ್ದ ಸಿಲಿಕಾನ್‌ ಸಿಟಿ ಬೆಂಗಳೂರು..! ಈ ಫೋಟೋದಲ್ಲಿ ಕಾಣುನ ಈ ಯವತಿ ಹೆಸರು ಶುಭಶ್ರೀ ಪ್ರಿಯದರ್ಶಿನಿ. ಒಡಿಶಾ ಮೂಲಕದ ಈಕೆ ಮಾರತಹಳ್ಳಿಯ ಮುನ್ನೇಕೊಳಲು ಸಮೀಪದ‌ ವಸುಂದರ […]

sadhu srinath

|

Feb 26, 2020 | 11:39 AM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು. ಇಲ್ಲಿ ನಡೆಯುವ ಅನಾಚಾರ, ದುಷ್ಕೃತ್ಯಗಳಿಗೆ ಲೆಕ್ಕವಿಲ್ಲ. ಇಲ್ಲಿ ಜನ ಆಗಾಗ ರೌಡಿಗಳ ಮೇಲೆ ಪೊಲೀಸರು ಹಾರಿಸುವ ಗುಂಡಿನ ಸದ್ದನ್ನು ಕೇಳ್ತಾ ಇರ್ತಾರೆ. ಅದರಂತೆ ನಿನ್ನ ಕೂಡ ಸಿಲಿಕಾನ್ ಸಿಟಿಯಲ್ಲಿ ಗುಂಡಿನ ಸದ್ದು ಮೊಳಗಿತ್ತು. ಆ ಸದ್ದಿಗೆ ಜನ ಬೆಚ್ಚಿ ಬಿದ್ದಿದ್ರು.

ಗುಂಡಿನ ಸದ್ದಿಗೆ ಬೆಚ್ಚಿ ಬಿದ್ದ ಸಿಲಿಕಾನ್‌ ಸಿಟಿ ಬೆಂಗಳೂರು..! ಈ ಫೋಟೋದಲ್ಲಿ ಕಾಣುನ ಈ ಯವತಿ ಹೆಸರು ಶುಭಶ್ರೀ ಪ್ರಿಯದರ್ಶಿನಿ. ಒಡಿಶಾ ಮೂಲಕದ ಈಕೆ ಮಾರತಹಳ್ಳಿಯ ಮುನ್ನೇಕೊಳಲು ಸಮೀಪದ‌ ವಸುಂದರ ಪಿಜಿಯಲ್ಲಿ ವಾಸವಾಗಿದ್ದಾಳೆ. ಕಳೆದ 2 ವರ್ಷಗಳಿಂದ ನಿಮ್ಹಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಈಕೆ ನಿನ್ನೆ ಸಂಜೆ ಕೆಲಸ ಮುಗಿಸಿಕೊಂಡು ವಸುಂದರ ಲೇಡಿಸ್ ಪಿಜಿ ಮುಂದೆ ಬರುತ್ತಿದ್ದಳು. ಈ ವೇಳೆ ಅಲ್ಲಿಗೆ ಬಂದ ದುಷ್ಕರ್ಮಿ ಕಂಟ್ರಿಮೇಡ್ ಪಿಸ್ತೂಲ್‍ನಿಂದ ಈಕೆ ಮೇಲೆ ಫೈರಿಂಗ್ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ .

ರಕ್ತದ ಮಡುವಿನಲ್ಲಿ ಕುಸಿದು ಬಿದ್ದ ಯುವತಿ ಶುಭಶ್ರೀ ಪ್ರಿಯದರ್ಶಿನಿಯನ್ನು ಕೂಡಲೇ ಪಿಜಿಯಲ್ಲಿದ್ದ ಆಕೆ ಸ್ನೇಹಿತೆಯರು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ರು. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಐಸಿಯೂನಲ್ಲಿ ಗಾಯಾಳು ಪ್ರಿಯದರ್ಶಿನಿಗೆ ಚಿಕಿತ್ಸೆ ಮುಂದುವರಿದಿದೆ. ಇತ್ತ ಪ್ರಿಯದರ್ಶಿನಿಯನ್ನು ಆಸ್ಪತ್ರೆಗೆ ದಾಖಲಿಸ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ರು.

ಪಾಗಲ್ ಪ್ರೇಮಿಯಿಂದ ಪ್ರೇಯಸಿ ಮೇಲೆ ಫೈರಿಂಗ್‌..!? ಕಂಟ್ರಿಮೇಡ್ ಪಿಸ್ತೂಲ್​ನಿಂದ ಗುಂಡು ಹಾರಿಸಿದ್ದ ವ್ಯಕ್ತಿ ಎಸ್ಕೇಪ್ ಆಗೋ ಅವಸರದಲ್ಲಿ ಘಟನಾ ಸ್ಥಳದಲ್ಲೇ ಪಿಸ್ತೂಲ್ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಕೂಡಲೇ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಘಟನಾ ಸ್ಥಳದಲ್ಲಿದ್ದ 7.65 ಎಂಎಂನ ಪಿಸ್ತೂಲ್ ಅನ್ನು ವಶಕ್ಕೆ ಪಡೆದ್ರು. ಹಾಗೇ ಏರಿಯಾದ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ರು. ಮೂಲಗಳ ಮಾಹಿತಿ ಪ್ರಕಾರ ಪ್ರಿಯದರ್ಶಿನಿ ಪ್ರಿಯಕರನೇ ಆಕೆ ದೂರಾಗಿದ್ದಕ್ಕೆ ಫೈರಿಂಗ್ ನಡೆಸಿ ಎಸ್ಕೇಪ್ ಆಗಿದ್ದಾನೆ ಎನ್ನಲಾಗುತ್ತಿದೆ.

ಮಾರತಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಗುಂಡೇಟು ತಿಂದು ಸದ್ಯ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಶುಭಶ್ರೀ ಮಾತನಾಡುವ ಸ್ಥಿತಿಯಲಿಲ್ಲ. ಈಕೆ ಚೇತರಿಸಿಕೊಂಡ ಬಳಿಕವಷ್ಟೇ ಪೈರಿಂಗ್ ನಡೆಸಿದ್ಯಾರು..? ಘಟನೆ ಹೇಗೆ ನಡೆಯಿತು ಅನ್ನೋದಕ್ಕೆ ಉತ್ತರ ಸಿಗಲಿದೆ.

ಫೈರಿಂಗ್ ಬಳಿಕ ಆರೋಪಿಯೂ ಆತ್ಮಹತ್ಯೆ ಯತ್ನ? ಮಾರತ್ತಹಳ್ಳಿಯ ಮಂಜುನಾಥ್ ಲೇಔಟ್​ನ ಲೇಡಿಸ್ ಪಿಜಿ ಬಳಿ ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಶುಭಶ್ರೀ ಪ್ರಿಯದರ್ಶಿನಿ ಮೇಲೆ ಗುಂಡಿನ ದಾಳಿ ನಡೆದಿದೆ. ಅಮರೇಂದ್ರ ಪಾಟ್ನಾಯಕ್ ಎಂಬಾತ ನಾಡ ಪಿಸ್ತೂಲ್​ನಿಂದ ಯುವತಿ ಹೊಟ್ಟೆಗೆ ಒಂದು ಸುತ್ತು ಗುಂಡು ಹಾರಿಸಿದ್ದಾನೆ. ಬಳಿಕ ಘಟನಾ ಸ್ಥಳದಲ್ಲೇ ಪಿಸ್ತೂಲ್ ಬಿಟ್ಟು ಆರೋಪಿ ಪರಾರಿಯಾಗಿದ್ದಾನೆ. ಆ ಪಿಸ್ತೂಲ್​ನಲ್ಲಿ ಇನ್ನೂ 4 ರೌಂಡ್ ಗುಂಡು ಇತ್ತು ಎಂದು ಘಟನೆ ಬಗ್ಗೆ ವೈಟ್​ ಫೀಲ್ಡ್ ಡಿಸಿಪಿ ಎಂ.ಎನ್.ಅನುಚೇತ್ ಪ್ರತಿಕ್ರಿಯಿಸಿದ್ದಾರೆ.

ಘಟನೆ ಸ್ಥಳದಲ್ಲಿ ಡೆತ್​ನೋಟ್ ಪತ್ತೆ: ಘಟನೆ ನಡೆದ ಸ್ಥಳದ ಬಳಿ ಒಂದು ನೋಟ್ ಬುಕ್ ಪತ್ತೆಯಾಗಿದೆ. ಅದ್ರಲ್ಲಿ ಕೊನೆ ಪುಟದಲ್ಲಿ ಡೆತ್​ನೋಟ್ ಇತ್ತು. ಅದರಲ್ಲಿ ತನ್ನ ಪ್ರಿಯತಮೆಗೆ ಕೊನೆಯ ವಿಶ್ ಮಾಡಿದ್ದಾನೆ. ಬಳಿಕ ಅವನೂ ಆತ್ಮಹತ್ಯೆಗೆ ಯತ್ನಿಸಿರೋ ಶಂಕೆ ಇದೆ. ಅವನೇ ಕುತ್ತಿಗೆಗೆ ಇರಿದುಕೊಂಡಿರುವ ಶಂಕೆ ಇದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಯತ್ನ ಎನ್ನಲಾಗಿದೆ. ಅಲ್ಲದೆ ಆರೋಪಿ ನೋಟ್ ಬುಕ್​ನಲ್ಲಿ ಕೆಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾನೆ, ಅದರ ಪರಿಶೀಲನೆ ನಡೆಯುತ್ತಿದೆ. ಆತನ ಕೈಗೆ ಪಿಸ್ತೂಲ್ ಎಲ್ಲಿಂದ ಬಂತು ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದರು.

ಹೈದರಾಬಾದ್ ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರು ಎರಡ್ಮೂರು ವರ್ಷಗಳಿಂದ ಪರಿಚಿತರು ಎನ್ನಲಾಗಿದೆ. ಸದ್ಯ ಹುಡುಗನ ಸ್ಥಿತಿ ಗಂಭೀರ ಇದೆ. ಯುವತಿ ಅಪಾಯದಿಂದ ಪಾರಾಗಿದ್ದಾಳೆ. ಈ ಸಂಬಂಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow us on

Related Stories

Most Read Stories

Click on your DTH Provider to Add TV9 Kannada