ಮದುವೆಗೆ ಹೋಗಿದ್ದ ಮೂವರು ಯುವಕರು, ಓರ್ವ ಯುವತಿ ಜಲಸಮಾಧಿ..

ಹದಿಹರೆಯದ ನಾಲ್ವರು ಮದುವೆಗೆ ಅಂತಾ ಹಳ್ಳಿಗೆ ಹೋಗಿದ್ದರು. ನಿನ್ನೆ ಸಂಜೆಯಾಗುತ್ತಲೇ ಹಳ್ಳಿಯ ಸೊಗಡು ಸವಿಯುತ್ತಾ, ಆಟವಾಡಲು ನೀರಿಗೆ ತೆರಳಿದ್ದರು. ಆದ್ರೆ ಮದುವೆಯ ಖುಷಿಯೆಲ್ಲಾ ಆ ನಾಲ್ವರೊಂದಿಗೆ ಜಲಸಮಾಧಿಯಾಗಿದೆ.

ಮದುವೆಗೆ ಹೋಗಿದ್ದ ಮೂವರು ಯುವಕರು, ಓರ್ವ ಯುವತಿ ಜಲಸಮಾಧಿ..
ಮದುವೆಗೆ ಹೋಗಿದ್ದ ನಾಲ್ವರು ಜಲಸಮಾಧಿ
Edited By:

Updated on: Nov 25, 2020 | 3:54 PM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆ ತಾಲೂಕಿನ ಪಾಲಾಡ್ಕ ಗ್ರಾಮದ ಶಾಂಭವಿ ನದಿಯ ಪಟ್ಲಗುಂಡಿ ಎಂಬ ಪ್ರದೇಶದಲ್ಲಿ ದೊಡ್ಡ ಅನಾಹುತ ನಡೆದು ಹೋಗಿದೆ. ಗ್ರಾಮದ ಕಡಂದಲೆ ಶ್ರೀಧರ ಆಚಾರ್ಯ ಎಂಬುವವರ ಮನೆಯಲ್ಲಿ ಮದುವೆಯ ಸಂಭ್ರಮವಿತ್ತು.

ಮದುವೆಗೆ ಎಲ್ಲಾ ಸಂಬಂಧಿಕರು ಮನೆಗೆ ಆಗಮಿಸಿದ್ರು. ಹಾಗೇ ಮೂಡುಶೆಡ್ಡೆ ನಿವಾಸಿ 18 ವರ್ಷದ ನಿಖಿಲ್, 20 ವರ್ಷದ ಹರ್ಷಿತಾ, ವೇಣೂರು ನಿವಾಸಿ 19 ವರ್ಷದ ಸುಭಾಷ್ ಮತ್ತು ಬಜ್ಪೆ ನಿವಾಸಿ 30 ವರ್ಷದ ರವಿ ಕೂಡ ಮದುವೆಗೆ ಆಗಮಿಸಿದ್ದರು. ಶಾಂಭವಿ ನದಿಯ ಪಟ್ಲಗುಂಡಿ ಬಳಿ ನಿನ್ನೆ ಸಂಜೆ ಆಟವಾಡಲು ಹೋಗಿದ್ದರು.

ಈಜು ಬರದಿದ್ದರು ಕೂಡ ಮೊನ್ನೆ ಆಟವಾಡಿ ಮದುವೆ ಮನೆಗೆ ವಾಪಾಸ್ ಆಗಿದ್ರು. ನಿನ್ನೆ ಕೂಡ ಈ ನಾಲ್ವರು ನೀರಿನಲ್ಲಿ ಆಟವಾಡುತ್ತಾ ಈಜಾಡಲು ಅಲ್ಲಿಗೆ ಹೋಗಿದ್ದಾರೆ. ಆದ್ರೆ ನಾಲ್ವರದಲ್ಲಿ ಹರ್ಷಿತಾ ಆಟವಾಡುತ್ತಾ ನೀರಿನಲ್ಲಿ ಮುಳುಗಿದ್ದಾಳೆ. ಅವಳನ್ನು ರಕ್ಷಿಸಲು ಹೋದ ಒಬ್ಬಬ್ಬರೂ ಕೂಡ ಮುಳುಗುತ್ತಾ , ನಾಲ್ಕು ಜನ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ವಿಷ್ಯ ತಿಳಿದ ತಕ್ಷಣ ನದಿ ತೀರದಲ್ಲಿ ಇಡೀ ಗ್ರಾಮದ ಜನ ಸೇರಿದ್ರು. ಅಗ್ನಿಶಾಮಕದಳ ಸಿಬ್ಬಂದಿ, ಈಜಾಗಾರರು ಮತ್ತು ಮೂಡಬಿದ್ರೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ರು. ನಂತ್ರ ಅಗ್ನಿಶಾಮಕದಳ ಸಿಬ್ಬಂದಿ ಮತ್ತು ಸ್ಥಳೀಯ ಈಜುಗಾರರು ನಾಲ್ವರ ಶವಗಳನ್ನು ಹೊರತೆಗೆದರು. ಈ ದುರ್ಘಟನೆಯಿಂದಾಗಿ ಇಡೀ ಮದುವೆ ಮನೆಯಲ್ಲಿ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ.

ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಮೂಡಬಿದ್ರೆ ಆಸ್ಪತ್ರೆಗೆ ರವಾನಿಸಲಾಗಿದೆ. ಮದುವೆಯ ಸಂಭ್ರಮಕ್ಕೆ ಬಂದವರು ಮಸಣ ಸೇರಿದ್ದು ನಿಜಕ್ಕೂ ದುರಂತ.

Published On - 7:59 am, Wed, 25 November 20