AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನುಗ್ಗಿ ಬರ್ತಿದೆ ಡೆಡ್ಲಿ ನಿವಾರ್ ಚಂಡಮಾರುತ: ಬೆಂಗಳೂರಿನಲ್ಲಿ 2 ದಿನ ಭಾರಿ ಮಳೆ

ನಿವಾರ್ ಚಂಡಮಾರುತ: ಇಂದು ಚೆನ್ನೈ ಕರಾವಳಿಗೆ ಅಪ್ಪಳಿಸಲಿದೆ ಸೈಕ್ಲೋನ್, ಬೆಂಗಳೂರಿನಲ್ಲಿ 2 ದಿನ ಭಾರಿ ಮಳೆ

ನುಗ್ಗಿ ಬರ್ತಿದೆ ಡೆಡ್ಲಿ ನಿವಾರ್ ಚಂಡಮಾರುತ: ಬೆಂಗಳೂರಿನಲ್ಲಿ 2 ದಿನ ಭಾರಿ ಮಳೆ
ಬೆಂಗಳೂರಿನಲ್ಲಿ 2 ದಿನ ಭಾರಿ ಮಳೆ
Follow us
ಆಯೇಷಾ ಬಾನು
|

Updated on:Nov 25, 2020 | 8:43 AM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಇನ್ನೂ ತಪ್ಪಿಲ್ಲ ಮಳೆ ಕಂಟಕ. ನ.25ರಿಂದ ಮತ್ತೆ ವರುಣನ ಆರ್ಭಟ ಶುರುವಾಗಲಿದೆ. ಬೆಂಗಳೂರಲ್ಲೂ ಭಾರಿ ಪ್ರಮಾಣದ ಮಳೆ ಬೀಳಲಿದೆಯಂತೆ.

ಬೆಂಗಳೂರಿಗರೇ ಇಂದು ಹೊರಗೆ ಹೋಗುವ ಪ್ಲ್ಯಾನ್ ಇದೆಯಾ? ಇವತ್ತು ಹೊರಗೆ ಕಾಲಿಡೋದಕ್ಕೂ ಮುನ್ನ ಎಚ್ಚರ.. ಕೈಯಲ್ಲಿ ಕೊಡೆ, ಬ್ಯಾಗ್​ನಲ್ಲಿ ರೈನ್​ಕೋಟ್ ಇಟ್ಕೊಂಡೋಗಿ. ಇಲ್ಲವಾದರೆ ಮಳೆಯಲ್ಲಿ ಸಿಲುಕಿ ಪರದಾಡಬೇಕಾದೀತು. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ನಿವಾರ್ ಸೈಕ್ಲೋನ್ ಎಂಬ ರಾಕ್ಷಸ ಸುಳಿಗಾಳಿ ತಮಿಳುನಾಡು ಕರಾವಳಿಗೆ ಅಪ್ಪಳಿಸಿದೆ. ಈಗಾಗಲೇ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಚಂಡಮಾರುತದ ಆರ್ಭಟ ಜೋರಾಗಿದೆ. ಹೀಗಾಗಿ ಸಿಲಿಕಾನ್ ಸಿಟಿಯಲ್ಲೂ ವರುಣ ಅಬ್ಬರಿಸಲಿದ್ದಾನೆ. ಬೆಂಗಳೂರು ಮಾತ್ರವಲ್ಲ ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಮಂಡ್ಯ, ಚಾಮರಾಜನಗರದಲ್ಲೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಸೈಕ್ಲೋನ್​ನಿಂದ ರಕ್ಷಣೆಗೆ 30 NDRF ಟೀಂ: ಸೈಕ್ಲೋನ್ ಮುನ್ನೆಚ್ಚರಿಕೆ ಕ್ರಮವಾಗಿ ತಮಿಳುನಾಡಿನಲ್ಲಿ 12 NDRF ತಂಡಗಳ ನಿಯೋಜನೆ ಮಾಡಲಾಗಿದೆ. ಪುದುಚೆರಿಯಲ್ಲಿ 2 ತಂಡ, ಕೇರಳದಲ್ಲಿ ಒಂದು ತಂಡ, ನೆಲ್ಲೂರಿನಲ್ಲಿ 3 ತಂಡ, ಚಿತ್ತೂರಿನಲ್ಲಿ 1 NDRF ತಂಡ ಹಾಗೂ ವಿಶಾಖಪಟ್ಟಣದಲ್ಲಿ 3 NDRF ತಂಡಗಳ ನಿಯೋಜನೆ ಮಾಡಲಾಗಿದೆ. ಇನ್ನೂ 8 ತಂಡಗಳು ರಕ್ಷಣಾ ಕಾರ್ಯಾಚರಣೆಗೆ ಸಿದ್ಧವಾಗಿವೆ. ಅಗತ್ಯವಿರುವ ಪ್ರದೇಶಕ್ಕೆ 8 NDRF ತಂಡ ಮೀಸಲಿಡಲಾಗಿದೆ.

ಇದನ್ನೂ ಓದಿ: ನಿವರ್ ಚಂಡಮಾರುತ ಎದುರಿಸಲು ಸನ್ನದ್ಧ ಸ್ಥಿತಿಯಲ್ಲಿ ಎನ್​ಡಿಆರ್​ಎಫ್

Published On - 8:38 am, Wed, 25 November 20