ಗಾಡಿಗಳನ್ನ ಸುಡಲು ಗಲಭೆಕೋರರು ಲೀಟರ್​ಗಟ್ಟಲೇ ಪೆಟ್ರೋಲ್​, ಸೀಮೆ ಎಣ್ಣೆ ತಂದಿದ್ರು -FSL ವರದಿ

|

Updated on: Aug 16, 2020 | 11:02 AM

ಬೆಂಗಳೂರು: ಗಲಭೆ ನಡೆದ ಹಲವು ದಿನಗಳ ನಂತರವೂ ಮುನ್ನೆಚ್ಚರಿಕಾ ಕ್ರಮವಾಗಿ ಡಿಜೆ ಹಳ್ಳಯಲ್ಲಿ ನಿಷೇಧಾಜ್ಞೆ ಮುಂದುವರೆದಿದೆ. ಹೀಗಾಗಿ, ಡಿಜೆ ಹಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಖಾಕಿ ಪಡೆ ರೌಂಡ್ಸ್ ಹಾಕ್ತಿದೆ. ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿಸ್ತಿರೋ ಪೋಲೀಸರು ಗುಂಪು ಗುಂಪಾಗಿ ಜನ್ರು ಓಡಾಡದಂತೆ ವಾರ್ನ್ ಸಹ ಮಾಡುತ್ತಿರುವುದು ಕಂಡುಬಂತು. ಬಹುದೊಡ್ಡ ಅಟ್ಯಾಕ್‌ನ ಮತ್ತೊಂದು ಆಯಾಮ ಬಿಚ್ಚಿಟ್ಟ FSL ವರದಿ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗಲಭೆಯಲ್ಲಿ ನಡೆದ ಬಹುದೊಡ್ಡ ಅಟ್ಯಾಕ್‌ನ ಮತ್ತೊಂದು ಆಯಾಮವನ್ನ FSL ವರದಿ ಬಿಚ್ಚಿಟ್ಟಿದೆ. ವರದಿಯ […]

ಗಾಡಿಗಳನ್ನ ಸುಡಲು ಗಲಭೆಕೋರರು ಲೀಟರ್​ಗಟ್ಟಲೇ ಪೆಟ್ರೋಲ್​, ಸೀಮೆ ಎಣ್ಣೆ ತಂದಿದ್ರು -FSL ವರದಿ
Follow us on

ಬೆಂಗಳೂರು: ಗಲಭೆ ನಡೆದ ಹಲವು ದಿನಗಳ ನಂತರವೂ ಮುನ್ನೆಚ್ಚರಿಕಾ ಕ್ರಮವಾಗಿ ಡಿಜೆ ಹಳ್ಳಯಲ್ಲಿ ನಿಷೇಧಾಜ್ಞೆ ಮುಂದುವರೆದಿದೆ. ಹೀಗಾಗಿ, ಡಿಜೆ ಹಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಖಾಕಿ ಪಡೆ ರೌಂಡ್ಸ್ ಹಾಕ್ತಿದೆ. ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿಸ್ತಿರೋ ಪೋಲೀಸರು ಗುಂಪು ಗುಂಪಾಗಿ ಜನ್ರು ಓಡಾಡದಂತೆ ವಾರ್ನ್ ಸಹ ಮಾಡುತ್ತಿರುವುದು ಕಂಡುಬಂತು.

ಬಹುದೊಡ್ಡ ಅಟ್ಯಾಕ್‌ನ ಮತ್ತೊಂದು ಆಯಾಮ ಬಿಚ್ಚಿಟ್ಟ FSL ವರದಿ
ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗಲಭೆಯಲ್ಲಿ ನಡೆದ ಬಹುದೊಡ್ಡ ಅಟ್ಯಾಕ್‌ನ ಮತ್ತೊಂದು ಆಯಾಮವನ್ನ FSL ವರದಿ ಬಿಚ್ಚಿಟ್ಟಿದೆ.

ವರದಿಯ ಪ್ರಕಾರ ಗಲಭೆಕೋರರು ಗಲಾಟೆ ವೇಳೆ ಬೆಂಕಿ ಹಚ್ಚಲು ಪೆಟ್ರೋಲ್‌ ಮತ್ತು ಸೀಮೆ ಎಣ್ಣೆ ತಂದಿದ್ದರು ಎಂದು ಉಲ್ಲೇಖಿಸಲಾಗಿದೆ. ಗಲಭೆ ನಡೆದ ಒಂದು ಕಡೆ ಪುಂಡರು ಪೆಟ್ರೋಲ್ ತಂದಿದ್ದರೆ ಮತ್ತೊಂದು ಕಡೆ ಕೆಲವು ಆರೋಪಿಗಳು ಡೀಸಲ್ ಹಾಗೂ ಸುಮಾರು 25ಲೀಟರ್​ ಸೀಮೆಎಣ್ಣೆ ತಂದಿದ್ದರಂತೆ. ಈ ವಿಚಾರ ಠಾಣೆ ಬಳಿ ಸುಟ್ಟ ವಾಹನಗಳ ಮೇಲೆ FSL ತಂಡ ಪರಿಶೀಲನೆ ನಡೆಸಿದಾಗ ಬೆಳಕಿಗೆ ಬಂದಿದೆ. ಪ್ರಾಥಮಿಕ ಪರೀಕ್ಷೆಯಲ್ಲಿ ಈ ವಿಚಾರವನ್ನು FSL ತಂಡ ಕನ್ಫರ್ಮ್ ಮಾಡಿದೆ.

ಜೊತೆಗೆ, ಕಿಡಿಗೇಡಿಗಳು ವಾಹನಗಳನ್ನು ಸುಡಲು ಮೊದಲೇ ಪ್ಲ್ಯಾನ್ ಮಾಡಿ ಬಂದಿದ್ರು. ಈ ಕೃತ್ಯದಲ್ಲಿ ವಾಹನಗಳ ಪೆಟ್ರೋಲ್ ಟ್ಯಾಂಕ್‌ ಒಡೆಯಲು ಹರಿತವಾದ ಆಯುಧ ಬಳಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹರಿತವಾದ ಆಯುಧದಿಂದ ಟ್ಯಾಂಕ್‌ ಒಡೆದು ಸುರಿದ ಪೆಟ್ರೋಲ್​ನಿಂದ ಉಳಿದ ವಾಹನಗಳಿಗೆ ಬೆಂಕಿ ಹಚ್ಚಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಕನ್ಫರ್ಮ್ ಮಾಡಿರುವ FSL ತಂಡ ಇದೀಗ ಪ್ರಾಥಮಿಕ ವರದಿಯನ್ನ ಪೊಲೀಸರಿಗೆ ನೀಡಲು ಸಿದ್ಧತೆ ನಡೆಸುತ್ತಿದೆ.

ಗಲಭೆ ಸಂಬಂಧ 100ಕ್ಕೂ ಹೆಚ್ಚು FIR ದಾಖಲಾಗುವ ಸಾಧ್ಯತೆ
ಇನ್ನು ಗಲಭೆಗೆ ಸಂಬಂಧಿಸಿದಂತೆ 100ಕ್ಕೂ ಹೆಚ್ಚು FIR ದಾಖಲಾಗುವ ಸಾಧ್ಯತೆಯಿದೆ. ಬಂಧಿತರ ಸಂಖ್ಯೆಯೂ 700ರಿಂದ 1000ಕ್ಕೇರಿಕೆ ಸಾಧ್ಯತೆಯಿದೆ. ಜೊತೆಗೆ, ಗಲಭೆಯಲ್ಲಿ ಸಾಕಷ್ಟು ಆರೋಪಿಗಳು ಭಾಗಿಯಾದ ಹಿನ್ನೆಲೆಯಲ್ಲಿ ಇನ್ನೂ ಕೆಲ ದಿನಗಳ ಕಾಲ ಬಂಧನ ಕಾರ್ಯ ಮುಂದುವರೆಯಲಿದೆ. ಈಗಾಗಲೇ 340ಕ್ಕೂ ಹೆಚ್ಚು ಆರೋಪಿಗಳನ್ನ ಬಂಧಿಸಲಾಗಿದೆ.

ಜೊತೆಗೆ, ಗಲಾಟೆ ವೇಳೆ ಗಂಭೀರವಾಗಿ ಗಾಯಗೊಂಡಿರುವ ಪೊಲೀಸರು ಹಾಗೂ ವಾಹನ ಕಳೆದುಕೊಂಡಿರುವ ಪೊಲೀಸರು ಮತ್ತು ಸಾರ್ವಜನಿಕರಿಂದ ಮತ್ತಷ್ಟು ಲಿಖಿತ ದೂರುಗಳನ್ನು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಗಲಭೆ ಸಂಬಂಧ 100ಕ್ಕೂ ಹೆಚ್ಚು FIR ಸೇರುವ ಸಾಧ್ಯತೆಯಿದೆ.