AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ವರೋಗಕ್ಕೂ ಏಡಿ ಸಾರು ಮದ್ದು, ಮಲೆನಾಡು ಏಡಿಗಳಿಗೆ ಫುಲ್ ಡಿಮ್ಯಾಂಡ್..!

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಚಿಕನ್, ಮೀನಿಗಿಂತ ಏಡಿಗೆ ಇನ್ನಿಲ್ಲದ ಡಿಮ್ಯಾಂಡ್ ಬಂದಿದೆ. ಹಾಗಾಗಿ ಗದ್ದೆಗಳಲ್ಲಿ ಏಡಿಗಳನ್ನು ಹಿಡಿಯಲು ಜನರು ಪೈಪೋಟಿ ನಡೆಸುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿದೆ. ಮಲೆನಾಡಿಗರಿಗೆ ಏಡಿಗಳು ಅಂದ್ರೆ ಪಂಚಪ್ರಾಣ.. ಹೌದು, ಮಲೆನಾಡು ಭಾಗದಲ್ಲಿ ಮಳೆರಾಯ ಬಿಡುವು ಕೊಟ್ಟಿದ್ದಾನೆ. ಇದರ ಪರಿಣಾಮ ಎನ್ನುವಂತೆ ಬಿಸಿಲ ಬೇಗೆಯಿಂದ ಗದ್ದೆಗಳಲ್ಲಿ ಏಡಿಗಳು ಪ್ರತ್ಯಕ್ಷವಾಗ್ತಿವೆ. ಇತ್ತ, ಮಲೆನಾಡಿಗರಿಗೆ ಏಡಿಗಳು ಅಂದ್ರೆ ಪಂಚಪ್ರಾಣ. ಹೀಗಿರುವಾಗ ಏಡಿಗಳು ಗದ್ದೆಗಳಲ್ಲಿ ರಾಜಾರೋಷವಾಗಿ ಓಡಾಟ ನಡೆಸ್ತವೆ ಅಂದ್ರೆ ಬಿಡ್ತರಾ..? ನೋ ವೇ.. ಗಬುಕ್​ ಅಂತಾ ಹಿಡಿದು ಬುಟ್ಟಿಗೇ […]

ಸರ್ವರೋಗಕ್ಕೂ ಏಡಿ ಸಾರು ಮದ್ದು, ಮಲೆನಾಡು ಏಡಿಗಳಿಗೆ ಫುಲ್ ಡಿಮ್ಯಾಂಡ್..!
Follow us
ಸಾಧು ಶ್ರೀನಾಥ್​
|

Updated on: Sep 03, 2020 | 5:51 PM

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಚಿಕನ್, ಮೀನಿಗಿಂತ ಏಡಿಗೆ ಇನ್ನಿಲ್ಲದ ಡಿಮ್ಯಾಂಡ್ ಬಂದಿದೆ. ಹಾಗಾಗಿ ಗದ್ದೆಗಳಲ್ಲಿ ಏಡಿಗಳನ್ನು ಹಿಡಿಯಲು ಜನರು ಪೈಪೋಟಿ ನಡೆಸುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿದೆ.

ಮಲೆನಾಡಿಗರಿಗೆ ಏಡಿಗಳು ಅಂದ್ರೆ ಪಂಚಪ್ರಾಣ.. ಹೌದು, ಮಲೆನಾಡು ಭಾಗದಲ್ಲಿ ಮಳೆರಾಯ ಬಿಡುವು ಕೊಟ್ಟಿದ್ದಾನೆ. ಇದರ ಪರಿಣಾಮ ಎನ್ನುವಂತೆ ಬಿಸಿಲ ಬೇಗೆಯಿಂದ ಗದ್ದೆಗಳಲ್ಲಿ ಏಡಿಗಳು ಪ್ರತ್ಯಕ್ಷವಾಗ್ತಿವೆ. ಇತ್ತ, ಮಲೆನಾಡಿಗರಿಗೆ ಏಡಿಗಳು ಅಂದ್ರೆ ಪಂಚಪ್ರಾಣ. ಹೀಗಿರುವಾಗ ಏಡಿಗಳು ಗದ್ದೆಗಳಲ್ಲಿ ರಾಜಾರೋಷವಾಗಿ ಓಡಾಟ ನಡೆಸ್ತವೆ ಅಂದ್ರೆ ಬಿಡ್ತರಾ..? ನೋ ವೇ.. ಗಬುಕ್​ ಅಂತಾ ಹಿಡಿದು ಬುಟ್ಟಿಗೇ ಹಾಕೋದೇ ಕೆಲ್ಸ!

ಹೀಗಾಗಿಯೇ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅತ್ತಿಗೆರೆ, ಬಿನ್ನಡಿ, ಬಡವನದಿಣ್ಣೆ, ಮುಗ್ರಹಳ್ಳಿ ಸೇರಿದಂತೆ ಹಲವೆಡೆ ಜನರು ಏಡಿ ಶಿಕಾರಿಗೆ ಇಳಿಯುತ್ತಿದ್ದಾರೆ. ಇತ್ತೀಚಿನ ವರುಷಗಳಲ್ಲಿ ಏಡಿಗಳ ಸಂಖ್ಯೆಯೇ ಕಡಿಮೆಯಾಗಿತ್ತು. ಆದ್ರೆ ಈ ವರ್ಷ ಗದ್ದೆಗಳಲ್ಲಿ ಭಾರೀ ಪ್ರಮಾಣದ ಏಡಿಗಳು ಕಂಡು ಬರುತ್ತಿರುವುದರಿಂದ ಜನರು ಅವುಗಳನ್ನ ಹಿಡಿಯಲು ಭಾರೀ ಪೈಪೋಟಿ ನಡೆಸುತ್ತಿದ್ದಾರೆ. ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ಮಹಿಳೆಯರು, ವೃದ್ಧೆಯರು, ಪುರುಷರು ಭರ್ಜರಿ ಏಡಿ ಶಿಕಾರಿ ಮಾಡುತ್ತಿದ್ದಾರೆ.

ಏಡಿ ಸಾರು ತಿಂದ್ರೆ ಕಾಯಿಲೆಗಳೇ ಹತ್ತಿರ ಬರಲ್ಲ.. ಸರ್ವರೋಗಕ್ಕೆ ಸಾರಾಯಿ ಮದ್ದು ಅನ್ನೋ ಮಾತಿದೆ. ಹಾಗೆಯೇ ಮಲೆನಾಡಿನಲ್ಲಿ ಏಡಿ ಸಾರು ತಿಂದ್ರೆ ಯಾವುದೇ ಕಾಯಿಲೆ ಬರಲ್ಲ ಅನ್ನೋ ಮಾತು ಕೂಡ ಬಹಳ ಹಿಂದಿನಿಂದಲೂ ಇದೆ. ಹೀಗಾಗಿಯೇ ಏಡಿ ಸಾರು ಸವಿಯೋದ್ರಲ್ಲಿ ಹಿಂದಿನಿಂದಲೂ ಮಲೆನಾಡಿಗರು ಒಂದು ಹೆಜ್ಜೆ ಮುಂದೆನೇ.. ಸದ್ಯ ಕೊರೊನಾ ಹಿನ್ನೆಲೆಯಲ್ಲಿ ಏಡಿ ಸಾಂಬರಿಗೆ ಜನ ಹಾತೊರೆಯುತ್ತಿದ್ದಾರೆ.

‘ಏಡಿ ಸಾರು ಸವಿಯೋಣ, ಕೊರೊನಾದಿಂದ ದೂರವಿರೋಣ’ ‘ಏಡಿ ಸಾರು ಸವಿಯೋಣ, ಕೊರೊನಾದಿಂದ ದೂರವಿರೋಣ’ ಅನ್ನೋ ನಂಬಿಕೆಯಿಂದ ಏಡಿಗೆ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಏಡಿಗಳನ್ನ ಹಿಡಿದು ಮಾರಾಟ ಕೂಡ ಮಾಡಲಾಗ್ತಿದ್ದು, ಜನರು ಏಡಿಗಳಿಗೆ ಮುಗಿಬೀಳ್ತಿರೋದ್ರಿಂದ ಭಾರೀ ಡಿಮ್ಯಾಂಡ್ ಉಂಟಾಗಿದೆ. ಒಂದು ಕೆಜಿಗೆ 300-400 ರೂ ವರೆಗೆ ಹಣ ಕೊಟ್ಟು ಏಡಿಗಳನ್ನ ಖರೀದಿಸ್ತಿದ್ದಾರೆ.

ಏಡಿಗಳನ್ನ ಹಿಡಿಯಲೆಂದೇ ಜನರು ಊರಿನಿಂದ ಮತ್ತೊಂದು ಊರಿಗೆ ಹೋಗಿ ಅಲ್ಲಿನ ಗದ್ದೆಗಳಲ್ಲಿ ಶಿಕಾರಿ ಮಾಡ್ತಿದ್ದಾರೆ. ಕೆಲವರು 2-3 ಕೆಜಿಯಷ್ಟು ಏಡಿ ಹಿಡಿದು ಸಾವಿರಕ್ಕೂ ಹೆಚ್ಚು ಹಣವನ್ನ ಪ್ರತಿದಿನ ಗಳಿಸ್ತಾ ಇದ್ದಾರೆ. ಈ ವರ್ಷವಂತೂ ಭಾರೀ ಪ್ರಮಾಣದಲ್ಲಿ ಏಡಿಗಳು ಕೂಡ ಪ್ರತ್ಯಕ್ಷವಾಗಿರೋದ್ರಿಂದ ಜನರಿಗೆ ಏಡಿ ಹಿಡಿಯೋದೇ ಒಂದು ಸಂಭ್ರಮ.

150-200 ರೂಪಾಯಿ ಕೊಟ್ರೆ ಮೀನು, ಚಿಕನ್ ಸಿಗುತ್ತೆ. ಆದ್ರೆ ಕೆಜಿ ಏಡಿಗೆ 300 ರೂ ಕೊಟ್ರೂ ಸಿಗ್ತಿಲ್ಲ. ಒಟ್ಟಿನಲ್ಲಿ ಏಡಿ, ಕೊರೊನಾ ತಡೆಗಟ್ಟುತ್ತೋ, ಬಿಡುತ್ತೋ ಗೊತ್ತಿಲ್ಲ.. ಆದ್ರೆ ಈ ಸೀಸನ್ ಮಾತ್ರ ಏಡಿಗಳಿಗೆ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿರೋದಂತೂ ಸತ್ಯ. -ಪ್ರಶಾಂತ್ ಮೂಡ್ಗೆರೆ

ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಪ್ರಧಾನಿ ಮೋದಿ ಸಮೀಕ್ಷೆ ಮಾಡಿಸುತ್ತೇನೆಂದಾಗ ಕಾಂಗ್ರೆಸ್ ಷರತ್ತುಗಳು: ಅಶೋಕ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ
ಚಾಮರಾಜನಗರ: ಪಾಲಾರ್ ಗ್ರಾಮದಲ್ಲಿ ಕಾಡಾನೆಗಳ ಜಲಕ್ರೀಡೆ