ಎತ್ತಿಗೆ ನಡೆಯಿತು ಮನುಷ್ಯರಂತೆ ಶಾಸ್ತ್ರೋಕ್ತ ಅಂತ್ಯಕ್ರಿಯೆ, ಯಾವೂರಲ್ಲಿ?
ಹಾವೇರಿ: ಕ್ವಿಂಟಲ್ ಗಟ್ಟಲೆ ಭಾರವಾದ ಕಲ್ಲುಗಳನ್ನು ಎಳೆಯುವುದರಲ್ಲಿ ಸಖತ್ ಫೇಮಸ್ ಆಗಿದ್ದ ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ಕುರುಬಗೇರಿ ಬಡಾವಣೆಯ ಎತ್ತು ನಿನ್ನೆ ಮಧ್ಯಾಹ್ನ ಹೃದಯಾಘಾತದಿಂದ ಮೃತಪಟ್ಟಿದೆ. ನಾಗಪ್ಪ ಗೂಳಣ್ಣವರ ಎಂಬುವರ ಎತ್ತು ಮೃತಪಟ್ಟಿರುವುದರಿಂದ ಎತ್ತಿನ ಮನೆಯವರು ಹಾಗೂ ಎತ್ತಿನ ಅಭಿಮಾನಿಗಳು ಮನುಷ್ಯ ಮೃತಪಟ್ಟಾಗ ಮಾಡುವಂತೆ ಶಾಸ್ತ್ರೋಕ್ತವಾಗಿ ಎತ್ತಿಗೆ ಅಂತ್ಯಕ್ರಿಯೆ ಮಾಡಿದ್ದಾರೆ. ಮೃತ ಎತ್ತಿನ ಮೆರವಣಿಗೆ.. ಭಾರವಾದ ಎತ್ತುಗಳನ್ನು ಎಳೆಯುವ ಮೂಲಕ ತನ್ನದೇ ಆದ ಅಭಿಮಾನಿ ಪಡೆಯನ್ನು ಹುಟ್ಟುಹಾಕಿದ್ದ ಎತ್ತಿಗೆ ಅಭಿಮಾನಿಗಳು ಪ್ರೀತಿಯಿಂದ ಹುಚ್ಚ ಎಂಬ ಹೆಸರಿನಿಂದ […]

ಹಾವೇರಿ: ಕ್ವಿಂಟಲ್ ಗಟ್ಟಲೆ ಭಾರವಾದ ಕಲ್ಲುಗಳನ್ನು ಎಳೆಯುವುದರಲ್ಲಿ ಸಖತ್ ಫೇಮಸ್ ಆಗಿದ್ದ ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ಕುರುಬಗೇರಿ ಬಡಾವಣೆಯ ಎತ್ತು ನಿನ್ನೆ ಮಧ್ಯಾಹ್ನ ಹೃದಯಾಘಾತದಿಂದ ಮೃತಪಟ್ಟಿದೆ. ನಾಗಪ್ಪ ಗೂಳಣ್ಣವರ ಎಂಬುವರ ಎತ್ತು ಮೃತಪಟ್ಟಿರುವುದರಿಂದ ಎತ್ತಿನ ಮನೆಯವರು ಹಾಗೂ ಎತ್ತಿನ ಅಭಿಮಾನಿಗಳು ಮನುಷ್ಯ ಮೃತಪಟ್ಟಾಗ ಮಾಡುವಂತೆ ಶಾಸ್ತ್ರೋಕ್ತವಾಗಿ ಎತ್ತಿಗೆ ಅಂತ್ಯಕ್ರಿಯೆ ಮಾಡಿದ್ದಾರೆ.
ಮೃತ ಎತ್ತಿನ ಮೆರವಣಿಗೆ..
ಭಾರವಾದ ಎತ್ತುಗಳನ್ನು ಎಳೆಯುವ ಮೂಲಕ ತನ್ನದೇ ಆದ ಅಭಿಮಾನಿ ಪಡೆಯನ್ನು ಹುಟ್ಟುಹಾಕಿದ್ದ ಎತ್ತಿಗೆ ಅಭಿಮಾನಿಗಳು ಪ್ರೀತಿಯಿಂದ ಹುಚ್ಚ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಹೃದಯಾಘಾತದಿಂದ ಮೃತಪಟ್ಟಿದ್ದ ಎತ್ತನ್ನು ಬಂಡಿಯಲ್ಲಿ ಮೆರವಣಿಗೆ ಮೂಲಕ ಜಮೀನಿಗೆ ತೆಗೆದುಕೊಂಡು ಹೋಗಲಾಯಿತು. ಮೆರವಣಿಗೆಯಲ್ಲಿ ಭಾಜಾ ಭಜಂತ್ರಿಗಳ ಸದ್ದು ಜೋರಾಗಿತ್ತು. ಮೆರವಣಿಗೆಯಲ್ಲಿ ಎತ್ತಿನ ನೂರಾರು ಅಭಿಮಾನಿಗಳು ಭಾಗಿಯಾಗಿದ್ದರು.
ಎತ್ತಿನ ಮಾಲೀಕ ನಾಗಪ್ಪ ಅವರ ಜಮೀನಿಗೆ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಿ ಮೃತ ಎತ್ತಿನ ಅಂತ್ಯಕ್ರಿಯೆ ನೆರವೇರಿಸಲಾಯಿತು. ಎತ್ತಿಗೆ ಪೂಜೆ ಸಲ್ಲಿಸಿ ಅಂತ್ಯಕ್ರಿಯೆ ನಡೆಸಿದರು. ಜೆಸಿಬಿ ಸಹಾಯದಿಂದ ಗುಂಡಿ ತೋಡಿ, ಜೆಸಿಬಿಯ ಸಹಾಯದಿಂದ ಎತ್ತಿನ ಮೃತದೇಹವನ್ನು ಗುಂಡಿಯಲ್ಲಿ ಇಳಿಸಿ ಅಂತ್ಯಕ್ರಿಯೆ ಮಾಡಿದರು. ಎತ್ತಿನ ಮನೆಯವರು ಹಾಗೂ ಎತ್ತಿನ ಅಭಿಮಾನಿಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
-ಪ್ರಭುಗೌಡ ಎನ್.ಪಾಟೀಲ







