ಅನ್ಯ ಧರ್ಮದ ಯುವಕನ ಜೊತೆ ಮದ್ವೆ: ಹುಡುಗಿಯ ಕುಟುಂಬಸ್ಥರಿಂದ 3 ಬಾರಿ ಅಟ್ಯಾಕ್.. ಎಲ್ಲಿ?
ಶಿವಮೊಗ್ಗ: ಪ್ರೀತಿಸಿ ಮದುವೆಯಾಗಿದ್ದ ಜೋಡಿ ಮೇಲೆ ಯುವತಿ ಕುಟುಂಬಸ್ಥರು ಅಟ್ಯಾಕ್ ಮಾಡಿದ್ದಾರೆ. ಹಾಡಹಗಲೇ ಮನೆಗೆ ನುಗ್ಗಿ ಮಾಡಿರೋ ರಾದ್ಧಾಂತದಿಂದ ಯುವಕನ ಕುಟುಂಬಸ್ಥರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಹೀಗೆ ಯುವಕನ ಕುಟುಂಬದ ಮೇಲೆ ಅಟ್ಯಾಕ್ ಮಾಡಿದ ಯುವತಿ ಕುಟುಂಬಸ್ಥರು ಈಗ ಎಸ್ಕೇಪ್ ಆಗಿದ್ದಾರೆ. ಆಸ್ಪತ್ರೆಯಲ್ಲಿ ಕೈಗೆ, ತಲೆಗೆ ಪೆಟ್ಟು ತಿಂದು ಬ್ಯಾಂಡೇಜ್ ಹಾಕಿಕೊಂಡು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಸೀತಾರಾಮಪುರ ಗ್ರಾಮದೋರು ಕೂತಿದ್ದಾರೆ. ಇವರಿಗೆ ಹೀಗೆ ಥಳಿಸಿರೋದು ಬೇಱರು ಮನೆಗೆ ಸೊಸೆಯಾಗಿ ಬಂದಿದ್ದ ಯುವತಿ ಕುಟುಂಬಸ್ಥರು. ಸೀತಾರಾಮಪುರದ ಮೋಹನ್, […]
ಶಿವಮೊಗ್ಗ: ಪ್ರೀತಿಸಿ ಮದುವೆಯಾಗಿದ್ದ ಜೋಡಿ ಮೇಲೆ ಯುವತಿ ಕುಟುಂಬಸ್ಥರು ಅಟ್ಯಾಕ್ ಮಾಡಿದ್ದಾರೆ. ಹಾಡಹಗಲೇ ಮನೆಗೆ ನುಗ್ಗಿ ಮಾಡಿರೋ ರಾದ್ಧಾಂತದಿಂದ ಯುವಕನ ಕುಟುಂಬಸ್ಥರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಹೀಗೆ ಯುವಕನ ಕುಟುಂಬದ ಮೇಲೆ ಅಟ್ಯಾಕ್ ಮಾಡಿದ ಯುವತಿ ಕುಟುಂಬಸ್ಥರು ಈಗ ಎಸ್ಕೇಪ್ ಆಗಿದ್ದಾರೆ.
ಆಸ್ಪತ್ರೆಯಲ್ಲಿ ಕೈಗೆ, ತಲೆಗೆ ಪೆಟ್ಟು ತಿಂದು ಬ್ಯಾಂಡೇಜ್ ಹಾಕಿಕೊಂಡು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಸೀತಾರಾಮಪುರ ಗ್ರಾಮದೋರು ಕೂತಿದ್ದಾರೆ. ಇವರಿಗೆ ಹೀಗೆ ಥಳಿಸಿರೋದು ಬೇಱರು ಮನೆಗೆ ಸೊಸೆಯಾಗಿ ಬಂದಿದ್ದ ಯುವತಿ ಕುಟುಂಬಸ್ಥರು. ಸೀತಾರಾಮಪುರದ ಮೋಹನ್, ಅರಳಹಳ್ಳಿಯ ರಂಜಿತಾ ಕಳೆದ ಒಂದೂವರೆ ವರ್ಷದಿಂದ ಪ್ರೀತಿಸ್ತಿದ್ರು. ಇವರ ಪ್ರೀತಿಗೆ ಯುವತಿ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ರು. ಇದ್ಯಾವುದನ್ನೂ ಲೆಕ್ಕಿಸದ ಮೋಹನ್, ಆಗಸ್ಟ್ 13ರಂದು ರಂಜಿತಾಳ ಮದುವೆಯಾಗಿದ್ದ. ಮೇಲ್ವರ್ಗಕ್ಕೆ ಸೇರಿದ ಮೋಹನ್, ದಲಿತ ಯುವತಿಯನ್ನ ಮದುವೆಯಾಗಿದ್ದರಿಂದ ಯುವತಿ ಕುಟುಂಬದವರು ರೊಚ್ಚಿಗೆದ್ದು ಇವರ ಮೇಲೆ ಮೂರು ಬಾರಿ ಅಟ್ಯಾಕ್ ಮಾಡಿದ್ದಾರಂತೆ.
ಆದ್ರೆ, ಇಲ್ಲೊಂದು ಟ್ವಿಸ್ಟ್ ಇದೆ. ಈ ಮೋಹನ್ಗೆ ಒಬ್ಬ ಅಕ್ಕ ಇದ್ದಾರೆ. ಹೆಸರು ಲಕ್ಷ್ಮೀ ಅಂತಾ. ಈಕೆಯ ಗಂಡ ಅಣ್ಣಪ್ಪನ ಕುಮ್ಮಕ್ಕಿನಿಂದ ಯುವತಿ ಮನೆಯವರು ಹಲ್ಲೆ ಮಾಡಿದ್ದಾರಂತೆ. ಲಕ್ಷ್ಮೀ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರಂತೆ. ಇದನ್ನ ಸಹಿಸದ ಅಣ್ಣಪ್ಪ ರಂಜಿತಾ ಮನೆಯವರಿಗೆ ಕಿವಿಯೂದಿ, ಇವರ ಮೇಲೆ ಹಲ್ಲೆ ಮಾಡಲು ಕಾರಣನಾಗಿದ್ದಾನೆ ಅಂತಾ ಲಕ್ಷ್ಮೀ ಆರೋಪಿಸಿದ್ದಾರೆ.
ನಮ್ಮ ಕುಟುಂಬದ ಮೇಲೆ ಮೂರು ಬಾರಿ ದಾಳಿ ಮಾಡಿದ್ದಾರೆ. ಅಲ್ದೆ, ನಮಗೆ ಜೀವ ಬೆದರಿಕೆ ಹಾಕಿದ್ದಾರೆ. ಪೊಲೀಸರು ನಮಗೆ ಸೂಕ್ತ ರಕ್ಷಣೆ ಕೊಡಬೇಕು ಅಂತಾ ಯುವಕನ ತಾಯಿ ರೇಣುಕಾಬಾಯಿ ಮನವಿ ಮಾಡಿದ್ದಾರೆ.
ಪ್ರೀತಿಸಿ ಮದುವೆಯಾದವರು ನೆಮ್ಮದಿಯಾಗಿ ಬಾಳಲು ಬಿಡದ ಯುವತಿ ಕುಟುಂಬಸ್ಥರಿಗೆ ಪೊಲೀಸರು ಸರಿಯಾಗಿ ಬುದ್ಧಿ ಕಲಿಸಬೇಕಿದೆ. ಇಲ್ಲದೇ ಹೋದ್ರೆ, ಮುಂದಿನ ದಿನಗಳಲ್ಲಿ ಇವರ ಮೇಲೆ ಮತ್ತಷ್ಟು ಬಾರಿ ದಾಳಿ ಮಾಡೋ ಎಲ್ಲ ಸಾಧ್ಯತೆಗಳು ಕಂಡು ಬರ್ತಿವೆ.
Published On - 3:12 pm, Thu, 24 September 20