ಪಾವಗಡ ಬಳಿ ಉರುಳುಬಿದ್ದ ಬಸ್ಸಲ್ಲಿದ್ದ ಪಿಯು ವಿದ್ಯಾರ್ಥಿನಿ ಕಾಲ್ತುಳಿತಕ್ಕೆ ಸಿಕ್ಕರೂ ಬದುಕುಳಿದಿದ್ದಾಳೆ!
ವಿದ್ಯಾರ್ಥಿನಿಯದ್ದು ಅದೃಷ್ಟವೆಂದೇ ಹೇಳಬೇಕು. ಯಾಕೆಂದರೆ ಕಾಲ್ತುಳಿದಂಥ (stampede) ಘಟನೆ ನಡೆದಾಗ ಜನ ಬದುಕುವುದು ಕಷ್ಟ. ಜನಕ್ಕೆ ತಮ್ಮ ಪ್ರಾಣ ಉಳಿಸುವುದು ಮುಖ್ಯವಾಗಿರುತ್ತದೆ, ಕೆಳಗೆ ಬಿದ್ದವರ ಬಗ್ಗೆ ಅವರು ಯೋಚಿಸಲಾರರು.
ಪಾವಗಡದ (Pavagada) ಬಳಿ ಶನಿವಾರ ಬೆಳಗ್ಗೆ ನಡೆದ ಬಸ್ ಅಪಘಾತದಲ್ಲ್ಲಿ ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ತಮ್ಮ ಭಯಾನಕ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದಾರೆ. 9 ನೇ ಕ್ಲಾಸಿನಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಅಪಘಾತ ಹೇಗೆ ಸಂಭವಿಸಿತೆಂದು ಹೇಳಿದನ್ನು ಮತ್ತೊಂದು ವಿಡಿಯೋನಲ್ಲಿ ನಿಮಗೆ ನಾವು ತೋರಿಸಿದ್ದೇವೆ. ಅದೇ ಬಸ್ಸಲ್ಲಿದ್ದ ಒಬ್ಬ ವಿದ್ಯಾರ್ಥಿನಿ ಸಹ ತುಮಕೂರಿನ ಟಿವಿ9 ವರದಿಗಾರರೊಂದಿಗೆ ಮಾತಾಡಿದ್ದಾಳೆ. ಎರಡು ಬಸ್ಗಳು ಸಮಯಕ್ಕೆ ಸರಿಯಾಗಿ ಆಗಮಿಸದ ಕಾರಣ ನತದೃಷ್ಟ ಬಸ್ಸಿನಲ್ಲಿ ಜನರನ್ನು ಕುರಿಗಳಂತೆ ತುಂಬಲಾಗಿತ್ತು ಎಂದು ವಿದ್ಯಾರ್ಥಿನಿ ಹೇಳುತ್ತಾಳೆ. ಆಕೆಯ ಕೈಗೆ ಬ್ಯಾಂಡೇಜ್ (bandage) ಸುತ್ತಿರುವುದು ನಿಮಗೆ ವಿಡಿಯೋನಲ್ಲಿ ಕಾಣುತ್ತದೆ. ಆಕೆ ಬಸ್ಸಿನ ಹಿಂಭಾಗ ಬಾಗಿಲು ಬಳಿ ಇದ್ದಳು. ಬಸ್ಸೊಳಗೆ ಕನಿಷ್ಷ 70 ಮತ್ತು ಅದರ ಟಾಪ್ ಮೇಲೆ ಕನಿಷ್ಟ 30 ಜನ ಇದ್ದರು ಎಂದು ವಿದ್ಯಾರ್ಥಿನಿ ಹೇಳುತ್ತಾಳೆ. ಬಸ್ ಉರುಳಿಬಿದ್ದಾಗ (overturned) ಗಾಬರಿಗೊಂಡಿದ್ದ ಜನ ಕೆಳಗೆ ಬಿದ್ದವರ ಮೇಲೆ ತುಳಿದಾಡಿದ್ದಾರೆ. ಈ ವಿದ್ಯಾರ್ಥಿನಿಯೂ ತುಳಿತಕ್ಕೊಳಗಾಗಿದ್ದಾಳೆ.
ವಿದ್ಯಾರ್ಥಿನಿಯದ್ದು ಅದೃಷ್ಟವೆಂದೇ ಹೇಳಬೇಕು. ಯಾಕೆಂದರೆ ಕಾಲ್ತುಳಿದಂಥ (stampede) ಘಟನೆ ನಡೆದಾಗ ಜನ ಬದುಕುವುದು ಕಷ್ಟ. ಜನಕ್ಕೆ ತಮ್ಮ ಪ್ರಾಣ ಉಳಿಸುವುದು ಮುಖ್ಯವಾಗಿರುತ್ತದೆ, ಕೆಳಗೆ ಬಿದ್ದವರ ಬಗ್ಗೆ ಅವರು ಯೋಚಿಸಲಾರರು. ಈ ಹಿನ್ನೆಲೆಯಲ್ಲೇ ನಾವು ವಿದ್ಯಾರ್ಥಿನಿ ಅದೃಷ್ಟವಂತಳೆಂದು ಹೇಳುತ್ತಿರುವುದು.
ಸೂಲನಾಯಕನಹಳ್ಳಿಯ ವಿದ್ಯಾರ್ಥಿನಿ ಪ್ರತಿದಿನ ವೈಎನ್ ಕೋಟೆ ಮತ್ತು ಪಾವಗಡ ನಡುವೆ ಸಂಚರಿಸುವ ಬಸ್ಸಲ್ಲಿ ಕಾಲೇಜಿಗೆ ಹೋಗುತ್ತಾಳೆ. ಅವಳ ಊರಿನ ಇನ್ನೂ 8 ಜನ ವಿದ್ಯಾರ್ಥಿನಿಯರು ಬಸ್ಸಲ್ಲಿದ್ದರಂತೆ. ಅವರಲ್ಲಿ ಯಾರ್ಯಾರು ಗಾಯಗೊಂಡಿದ್ದಾರೆ ಅಂತ ಆಕೆಗೆ ಗೊತ್ತಿಲ್ಲ. ಬಸ್ಸು ಮಾತ್ರ ಬಹಳ ವೇಗವಾಗಿ ಚಲಿಸುತಿತ್ತು ಅಂತ ಈಕೆಯೂ ಹೇಳುತ್ತಾಳೆ.
ಇದನ್ನೂ ಓದಿ: ಖಾಸಗಿ ಬಸ್ ಚಾಲಕನ ಅಜಾಗರೂಕತೆಯಿಂದ ಪಾವಗಡ ಬಳಿ ವಾಹನ ಉರುಳಿಬಿದ್ದು 8 ಜನರ ದುರ್ಮರಣ, 20ಕ್ಕೂ ಹೆಚ್ಚು ಜನರಿಗೆ ಗಾಯ